ಉತ್ತರ ಕನ್ನಡ: ಪಾಂಡವರು (Pandavas) ಆಟವಾಡಿದ ತುತ್ತ ತುದಿಯ ಐತಿಹಾಸಿಕ ತಾಣ (Historical Place), ಮಾತ್ರವಲ್ಲದೇ ಭೀಮ (Bheema) ಬೃಹತ್ ಬಂಡೆಗಲ್ಲನ್ನ (Huge boulder) ಬುಗರಿಯಂತೆ ತಿರುಗಿಸಿ ಕಲ್ಲಿನ ಮೇಲೆ ನಿಲ್ಲಿಸಿದ ಜಾಗ ಈಗ ಚಾರಣ ಪ್ರಿಯರ ಆಕರ್ಷಣೆಯ ಸ್ಥಳವಾಗಿದೆ.. ಆ ಸ್ಥಳಕ್ಕೆ (Place) ಹಿಂದೆ ಸಾಕಷ್ಟು ಜನರು ಹೋಗಿ ಬರುತ್ತಿದ್ದರು. ಇದೀಗ ಕಾರವಾರದ (Karwar) ಮಕ್ಕಳ ತಂಡವೊಂದು ಸಾಹಸ (Adventure) ಮಾಡೋ ಮೂಲಕ ಗಮನ ಸೆಳೆದಿದ್ದಾರೆ. ಕಾರವಾರ ತಾಲೂಕಿನ ತೋಡುರು ಗ್ರಾಮದ ವ್ಯಾಪ್ತಿಯಲ್ಲಿ ಇರುವ ಭೀಮನ ಬುಗುರಿ ಸ್ಥಳ ಇದೀಗ ಚಾರಣ ಸ್ಥಳವಾಗಿ ಪ್ರಚಾರ ಪಡೆಯುತ್ತಿದೆ.
ಭೀಮನ ಬುಗುರಿಗೆ ಚಾರಣ
ಕಾರವಾರದ ಕರಾವಳಿ ದೋಣಿ ವಿಹಾರ ಮತ್ತು ಸಾಹಸ ಕೇಂದ್ರದ ನೇತೃತ್ವದಲ್ಲಿ ಭೀಮನ ಬುಗುರಿಗೆ ಚಾರಣ ಕೈಗೊಳ್ಳಲಾಯಿತು. ಕಳೆದ ಕೆಲ ವರ್ಷಗಳ ಹಿಂದೆ ಸಾಹಸ ಪ್ರಿಯರು ಇಲ್ಲಿಗೆ ಹೋಗಿ ಬರುತ್ತಿದ್ದರು. ಕಾರವಾರದ ಕರಾವಳಿ ಅಡ್ವೆಂಚರ್ ಕೇಂದ್ರದವರು ಹಿಂದೆ ಪ್ರತಿ ವರ್ಷ ನಾಲ್ಕೈದು ಬಾರಿ ಚಾರಣ ಕೈಗೊಳ್ಳುವುದರ ಮೂಲಕ ಸಾಹಸಪ್ರಿಯರಿಗೆ ಅನುಕೂಲ ಮಾಡಿಕೊಡುತ್ತಿದ್ದರು.
ಈ ಬಾರಿ ಮಕ್ಕಳಿಗಾಗಿ ವಿಶೇಷ ಚಾರಣ
ಈ ಬಾರೀ ಮಕ್ಕಳಿಗಾಗಿ ವಿಶೇಷವಾಗಿ ಚಾರಣ ಹಮ್ಮಿಕೊಂಡಿದ್ದರಿಂದ 40ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಇದರಲ್ಲಿ 25 ಜನ ಮಕ್ಕಳು ಕಡಿದಾದ ಬೆಟ್ಟವನ್ನ ಸರಸರನೆ ಹತ್ತಿದರು. ಮಾರ್ಗ ನಡುವೆ ದಟ್ಟವಾದ ಅರಣ್ಯವನ್ನ ನೋಡುತ್ತಾ ಸಾಗಿದರು. ಪಶ್ಚಿಮ ಘಟ್ಟಗಳ ಕಾಡಿನಲ್ಲಿ ಚಾರಣ ಮಾಡಿರೋದು ಹೊಸ ಅನುಭವ ನೀಡಿತು.
ಇದನ್ನೂ ಓದಿ: Karwar: ಕಾರ್ಮಿಕ ಇಲಾಖೆ ಯೋಜನೆ ಪ್ರಚಾರಕ್ಕಾಗಿ ಹೊಸ ತಂತ್ರ, ಕಾರವಾರದಿಂದ ಬೆಂಗಳೂರಿನವರೆಗೂ ಸ್ಕೆಟಿಂಗ್!
ಕಾಡುಹಣ್ಣುಗಳನ್ನು ಸವಿಯುವ ಅವಕಾಶ
ಭೀಮನ ಬುಗುರಿಗೆ ಹೋಗಬೇಕೆಂದ್ರೆ ಸುಮಾರು ಎರಡು ತಾಸುಗಳ ಕಾಲ ಕಾಡಿನ ಬೆಟ್ಟವನ್ನ ಏರಬೇಕು. ಕಾಡಿನಲ್ಲಿ ಸಾಗುವಾಗ ಬಗೆಬಗೆಯ ಕಾಡು ಹಣ್ಣುಗಳು ಕಾಣಸಿಗುತ್ತವೆ. ಈ ಹಣ್ಣುಗಳು ಮಾರುಕಟ್ಟೆಯಲ್ಲಿ ಸಿಗುವ ಹಣ್ಣಿಗಿಂತ ಸಖತ್ ಟೇಸ್ಟಿ ಕೂಡ ಇದೆ.
ಪ್ರಶಾಂತ ವಾತಾವರಣದಲ್ಲಿ ಚಾರಣ
ಸುತ್ತಲೂ ಪಕ್ಷಿಗಳ ಶಬ್ದದ ಜೊತೆಗೆ ಪ್ರಶಾಂತವಾದ ವಾತಾವರಣ ಸಿಗುತ್ತೆ. ಅಲ್ಲಲ್ಲಿ ವಿಶ್ರಮಿಸುತ್ತಾ ಮುಂದೆ ಸಾಗುವಾಗ ಹುಲಿ ದೇವರ ಗುಡಿ ಸಿಗುತ್ತೆ. ಅಲ್ಲಿ ದೇವರಿಗೆ ನಮಸ್ಕಾರ ಹಾಕಿ ಮುಂದೆ ಸಾಗುವಾಗ ಮನೆಯೊಂದು ಕಾಣಿಸುತ್ತೆ. ಮನೆಯವರು ಬಾರೀ ಶ್ರಮದೊಂದಿಗೆ ಜೀವನ ಮಾಡುತ್ತಿದ್ದಾರೆ. ಅಲ್ಲಿಂದ ಮತ್ತೆ ಅರ್ಧ ಗಂಟೆ ಕ್ರಮಿಸಿದರೇ ಬೃಹತ್ ಕಲ್ಲಿನ ಮೇಲೆ ಬುಗುರಿಯಾಕಾರದ ಬಂಡೆ ನಿಂತಿದೆ.
ಮೊಟ್ಟೆಯಾಕಾರದ ಭೀಮನ ಬುಗುರಿ
ಆ ಬಂಡೆ ಒಂದು ಕಡೆ ಮೊಟ್ಟೆಯಾಕಾರದಲ್ಲಿ ಕಾಣುತ್ತೆ. ಚಾರಣ ಪ್ರಿಯರು ಬಂಡೆಗಲ್ಲನ್ನ ಏರಿದಾಗ ಆಕಾಶವೇ ಕೈಗೆ ಸಿಕ್ಕಷ್ಟು ಸಂತಸವಾಗುತ್ತೆ. ಚಾರಣ ಕೈಗೊಂಡ ಮಕ್ಕಳು ಕೂಡ ಬಂಡೆಗಲ್ಲಿನ ಮೇಲೆ ನಿಂತು ಸುತ್ತಮುತ್ತಲ ಪ್ರದೇಶವನ್ನ ಕಂಡು ಸಂತಸಪಟ್ಟರು. ಈ ಕಲ್ಲಿನ ಬಂಡೆಗೆ ಭೀಮ ದಾರವನ್ನು ಕಟ್ಟಿ ಬುಗುರಿ ಆಡುತ್ತಿದ್ದನಂತೆ. ಪಾಂಡವರು ಇಲ್ಲಿ ನೆಲೆಸಿದ್ದರು ಎಂದು ಹೇಳಲಾಗುತ್ತಿದೆ. ಹೀಗಾಗಿ 'ಭೀಮನ ಬುಗುರಿ' ಎಂದೂ ಹೆಸರು ಬಂದಿದೆ. ಹಿಂದೆ ಈ ಪ್ರದೇಶದಲ್ಲಿ ರ್ಯಾಪ್ಲಿಂಗ್ ಸಾಹಸ ಶಿಬಿರವನ್ನ ಕೂಡ ಆಯೋಜಿಸುತ್ತಿದ್ದೇವೆ ಎಂದು ಸಾಹಸಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Mango Market: ಕರಿ ಈಶಾಡು ಮಾವಿನ ಹಣ್ಣಿಗೆ ಭರ್ಜರಿ ಡಿಮ್ಯಾಂಡ್, ಮ್ಯಾಂಗೋ ಬಲು ದುಬಾರಿ
ಭೀಮನ ಬುಗುರಿ ಚಾರಣ ಕೈಗೊಳ್ಳಬೇಕಾದ್ರೆ ದೈಹಿಕ ಸಾಮರ್ಥ್ಯ ಬೇಕಾಗುತ್ತೆ. ಕಾರವಾರ ತಾಲೂಕಿನ ತೋಡೂರಿನಿಂದ ಇಲ್ಲಿಗೆ ಹೋಗಿ ಬರಲು 12 ಕಿಲೋಮೀಟರ್ ಕ್ರಮಿಸಬೇಕು. ಸಂಬಂಧಪಟ್ಟ ಪ್ರವಾಸೋದ್ಯಮ ಇಲಾಖೆ ಭೀಮನ ಬುಗುರಿ ಸ್ಥಳವನ್ನ ಅಭಿವೃದ್ದಿ ಪಡಿಸಿದ್ದಲ್ಲಿ ಚಾರಣಪ್ರಿಯರು ಪ್ರವಾಸದ ಕಾರಣದಿಂದಾದರೂ ಹೋಗಿಬರಬಹುದು. ಪ್ರವಾಸದ ಜೊತೆಗೆ ಚಾರಣದ ಅನುಭವ ಕೂಡ ಆಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ