• Home
  • »
  • News
  • »
  • uttara-kannada
  • »
  • Bedara Vesha: ಬೇಡರ ವೇಷ ಡಾನ್ಸ್​ಗಿದೆ ರೋಚಕ ಇತಿಹಾಸ! ನೃತ್ಯ ನೋಡ್ತಿದ್ರೆ ಮೈಯೆಲ್ಲ ರೋಮಾಂಚನ

Bedara Vesha: ಬೇಡರ ವೇಷ ಡಾನ್ಸ್​ಗಿದೆ ರೋಚಕ ಇತಿಹಾಸ! ನೃತ್ಯ ನೋಡ್ತಿದ್ರೆ ಮೈಯೆಲ್ಲ ರೋಮಾಂಚನ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಕರಾವಳಿ ಭಾಗದಲ್ಲಿ ಹುಲಿವೇಷದಂತೆ, ಉತ್ತರ ಕನ್ನಡದ ಹಲವೆಡೆ ಈಗ ಬೇಡರ ವೇಷ ಕಣ್ಮನ ಸೆಳೆಯುತ್ತಿದೆ. ಜನ ಬೇಡರ ವೇಷ ಆಗಮಿಸಿದ್ರೆ ಸಾಕು ತದೇಕಚಿತ್ತದಿಂದ ಅದರ ಆಕರ್ಷಣೆಗೆ ಒಳಗಾಗುತ್ತಾರೆ. ಅಷ್ಟರ ಮಟ್ಟಿಗೆ ಈ ವೇಷ ಕ್ರೇಝ್ ಹುಟ್ಟಿಸುತ್ತವೆ.

  • Share this:

    ಉತ್ತರ ಕನ್ನಡ: ಕಡೆಗೆ ಮಾಡರ್ನೂ ಅಲ್ಲ, ಕಡೆಗೆ ಟ್ರೆಡಿಷನಲ್ಲೂ ಅಲ್ಲ. ಮೈ ತುಂಬಾ ಬಣ್ಣ, ಮೇಲಾಗಿ ನವಿಲು ಗರಿಯ ಭಾರ, ಎರಡೂ ಕಡೆ ಎಳೆದು ಹಿಡಿಯುವ ಹಿಂಬಾಲಕರುಕೈಯಲ್ಲಿನ ಖಡ್ಗ ಹಾಗೂ ಗುರಾಣಿಯ ಆರ್ಭಟಕ್ಕೆ ತಕ್ಕಂತೆ ಕುಣಿತ. ಅರೆ! ಸಖತ್ ಕ್ರೇಝ್ ಹುಟ್ಟಿಸೋ ಜಾನಪದ ಕಲೆ (Traditional Dance) ಆದ್ರೂ ಯಾವುದು ಅಂತೀರಾ? ಅದುವೇ ನೋಡಿ ಬೇಡರ ವೇಷ (Bedara Vesha).


    ಮೆರವಣಿಗೆಗೆ ಮೆರುಗು
    ಹೌದು, ಎಂತಹದ್ದೇ ಮೆರವಣಿಗೆ, ಜಾತ್ರೆ, ಉತ್ಸವ ಇದ್ರೂನು ಅದಕ್ಕೆ ಮೆರುಗು ನೀಡೋ ತಾಕತ್ತು ಬೇಡರ ವೇಷದ ಕಲೆಗಿದೆ. ಶಿರಸಿಯಲ್ಲಿ ಹುಟ್ಟಿದ ಕಲೆ ಇದೀಗ ಯಲ್ಲಾಪುರ, ಸಿದ್ದಾಪುರಕ್ಕೂ ತನ್ನ ಗರಿ ಚಾಚಿದೆ. ಬೇಡರ ವೇಷ ಬಂತು ಅಂದ್ರೆ ಸಾಕು ಜನ ಕುತೂಹಲದಿಂದ ನೋಡುವುದು ಖಂಡಿತಾ.


    ಸಿದ್ದಾಪುರದಲ್ಲಿ ಪ್ರಥಮ ಪ್ರಯೋಗ!
    ಸಲ ಪ್ರಥಮ ಬಾರಿಗೆ ಸಿದ್ದಾಪುರದ ಹುಡುಗರ ತಂಡವೊಂದು ಬೇಡರ ವೇಷದ ಪ್ರಯೋಗವನ್ನು ಅಯ್ಯಪ್ಪನ ಜಾತ್ರೆಯಲ್ಲಿ ಮಾಡಿತು. ಜನರಂತೂ ತಮ್ಮ ಕಣ್ಣು ಬಾಯಿ ಬಿಟ್ಟುಕೊಂಡು ಬೇಡರ ವೇಷವನ್ನು ಕಣ್ತುಂಬಿಕೊಂಡರು. ಸಾಮಾನ್ಯವಾಗಿ ವೇಷವನ್ನು ವರ್ಷಕ್ಕೊಮ್ಮೆ ಹೋಳಿ ಹುಣ್ಣಿಮೆಯಂದು ಶಿರಸಿಯಲ್ಲಿ ಮಾತ್ರ ನೋಡಬಹುದಿತ್ತು. ಆದರೆ ಬಾರಿ ಸಿದ್ದಾಪುರದ ಜಾತ್ರೆಗೆ ಪ್ರಯೋಗ ಮಾಡಿದ್ದು ಜನರ ಗಮನವೆಲ್ಲ ಬೇಡರ ವೇಷದತ್ತಲೇ ವಾಲಿತ್ತು.


    ಕ್ರೇಝ್ ಹುಟ್ಟಿಸೋ ಕುಣಿತ!
    ತಾಳಕ್ಕೆ ತಕ್ಕಂತೆ ಬೇಡರ ವೇಷಧಾರಿ ಕುಣೀತಿದ್ರೆ, ಅವರನ್ನ ಕಂಟ್ರೋಲ್ ಮಾಡೋಕೆ ಇಬ್ಬರು ಇರುತ್ತಾರೆ. ಕುಣಿಯುತ್ತಾ ಸಾಗುವ ಬೇಡ ಖಡ್ಗ ಹಾಗೂ ಗುರಾಣಿ ಹಿಡಿದು ಸುತ್ತಲಿನ ಜನರಿಗೆ ಬೀಸುತ್ತಾ ರುದ್ರ ರಮಣೀಯನಾಗಿ ಗಮನ ಸೆಳೆಯುತ್ತಾನೆ. ಯುವಕರು, ಮಕ್ಕಳಂತೂ ತಾವೂ ಬೇಡ ವೇಷಧಾರಿ ಹಿಂದೆ ಹುಚ್ಚೆದ್ದು ಕುಣಿದು ಕುಪ್ಪಳಿಸುತ್ತಾರೆ.


    ಬೇಡನ ಹಿನ್ನೆಲೆ ಹೀಗಿದೆ
    ಹಾಗಂತ ಇದೆಲ್ಲಕ್ಕೂ ಒಂದು ಕುತೂಹಲಕಾರಿ ಹಿನ್ನೆಲೆಯೂ ಇದೆ. ಸೋಂದಾದ ದಂಡನಾಯಕ ದಾಸಪ್ಪ ನಾಯಕನ ಮಗಳು ರುದ್ರಾಂಬಿಕೆಯನ್ನು ಕಾಲದ ವೀರನಾದ ಮಲ್ಲೇಶಿ ಮದುವೆಯಾಗಬೇಕೆಂದು ಬಯಸಿರುತ್ತಾನೆ. ಮಲ್ಲೇಶಿ ವೀರನೇನೋ ಸರಿ ಆದರೆ ಅವನ ಏಕಸ್ವಾಮ್ಯ ನಂತರ ಆತನ ಪುಢಾರಿತನ ಮಿತಿ ಮೀರಿ ಹೋಗಿತ್ತು.


    ಇದನ್ನೂ ಓದಿ: Bananti Devi Temple: ಬಲು ವಿಶೇಷ ಈ ಬಾಣಂತಿ ಜಾತ್ರೆ, ನೀರಿನಲ್ಲಿ ಮಕ್ಕಳನ್ನು ತೇಲಿಬಿಡುವ ಹರಕೆ!

    ಹೀಗಾಗಿ ಊರಿನ ಹಿತ ಬಯಸಿ ಮದುವೆಯಾಗುವ ರುದ್ರಾಂಬಿಕೆ, ವಸಂತ ಪಂಚಮಿಯ ಹೋಳಿ ಸಮಯದಲ್ಲಿ ಮಲ್ಲೇಶಿ ಕಣ್ಣಿಗೆ ಖಾರವನ್ನೆರಚಿ ಊರ ತುಂಬಾ ಅಲೆದಾಡಿಸಿ ನಂತರ ಸುಟ್ಟುಹಾಕುತ್ತಾಳೆ. ಅದರ ಪ್ರತೀಕವಾಗಿ ಮಲ್ಲೇಶಿಗೆ ಇನ್ನೂ ಕಣ್ಣು ಕಾಣಿಸುತ್ತಿಲ್ಲ ಎಂಬ ನಂಬಿಕೆಯಿಂದ ಮುಂದೆ ಒಬ್ಬ, ಹಿಂದೆ ಇಬ್ಭರು ಅವನ ಚಲನೆಯನ್ನು ನಿಯಂತ್ರಿಸುತ್ತಾರೆ.




    ಇದನ್ನೂ ಓದಿ: Uttara Kannada: ಹೆರಿಗೆಯ ದಿನ ಬಂದ್ರೂ ಈ ಎಮ್ಮೆಗೆ ಕೆಚ್ಚಲೇ ಮೂಡಿಲ್ಲ!

    ಒಟ್ಟಿನಲ್ಲಿ ಬೇಡರ ವೇಷ ಅದೆಂತಹದ್ದೇ ಉತ್ಸವಕ್ಕೂ ಮೆರುಗು ನೀಡಬಲ್ಲದು. ಅದರ ಕುಣಿವಂತೂ ಹುಚ್ಚೆಬ್ಬಿಸಿ ಕುಣಿಸಬಲ್ಲದು. ಮಾತ್ರವಲ್ಲದೇ ಇಡೀ ಸಭೆಯ ಗಮನವನ್ನ ಸೆಳೆಯಬಲ್ಲ ವಿಶಿಷ್ಟ ಕಲೆ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ.


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: