ಉತ್ತರ ಕನ್ನಡ: ಇಡೀ ದೇಗುಲವೇ (Hindu Temple) ಎದ್ದು ಬಂದಂತಹ ದೃಶ್ಯ ವೈಭವ. ಕೇಸರಿ ಪತಾಕೆಗಳ ನಡುವೆ ಹರ ಹರ ಮಹಾದೇವ ಜೈಕಾರ. ವಿಶಿಷ್ಟ ಶೈಲಿಯ ರಚನೆ, ವಿನ್ಯಾಸದಿಂದ ಕಂಗೊಳಿಸುತ್ತಿದೆ ನೋಡಿ ಈ ನೂತನ ಬೃಹತ್ ರಥ. ಅಷ್ಟಕ್ಕೂ ಅಂದ ಚಂದದಲ್ಲಿ ಕಂಗೊಳಿಸುತ್ತಿರುವ ಹೊಸ ರಥದ (Chariot) ವಿಶೇಷವೇ ಬೇರೆ!
ನೇಪಥ್ಯಕ್ಕೆ ಸರಿದಿದ್ದ ಹಳೆಯ ರಥ
ಉತ್ತರ ಕನ್ನಡದ ಶಿರಸಿಯ ಕದಂಬ ಕ್ಷೇತ್ರ ಬನವಾಸಿ ಮಧುಕೇಶ್ವರ ಸ್ವಾಮಿಯ ವೈಭವಕ್ಕೆ ಸಾಕ್ಷಿಯಾಗುತ್ತಿದ್ದ 414 ವರ್ಷ ಹಳೆಯ ರಥ ಇತ್ತೀಚೆಗಷ್ಟೇ ನೇಪಥ್ಯಕ್ಕೆ ಸರಿದಿತ್ತು. 1608ರಲ್ಲಿ ಸೋದೆಯ ಅರಸ ರಘುನಾಥ ನಾಯಕರು ನೀಡಿದ್ದ ಬೃಹತ್ ತೇರು ತೆರೆಮರೆಗೆ ಸರಿಯುತ್ತಲೇ, ಅದಕ್ಕೆ ಸರಿಸಾಟಿಯಾಗುವಂತಹ ರಥ ಬನವಾಸಿ ಮಧುಕೇಶ್ವರ ಸ್ವಾಮಿಯ ಪ್ರಾಂಗಣ ಸೇರಿದೆ. ರಘುನಾಥ ನಾಯಕರು ರೂಪಿಸಿದ್ದ ರಥದ ಮಾದರಿಯಲ್ಲೇ ಈ ಹೊಸ ಬೃಹತ್ ರಥವನ್ನೂ ನಿರ್ಮಿಸಿದ್ದು ವಿಶೇಷ.
4 ಕೋಟಿ ರೂ. ವೆಚ್ಚ
ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಶಾಸ್ತ್ರೋಕ್ತವಾಗಿ ಕುಂದಾಪುರದ ಲಕ್ಷ್ಮಿ ನಾರಾಯಣ್ ಆಚಾರ್ಯ ಅವರಿಗೆ ರಥ ನಿರ್ಮಾಣದ ಜವಾಬ್ದಾರಿ ವಹಿಸಿಕೊಡಲಾಗಿತ್ತು. ಅದರಂತೆ ಸರ್ಕಾರದ 3 ಕೋಟಿ ಸಹಾಯಧನ ಹಾಗೂ ಭಕ್ತಾದಿಗಳೆಲ್ಲರೂ ನೀಡಿದ ಒಟ್ಟಾರೆ 4 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಬೃಹತ್ ನೂತನ ರಥವನ್ನ ಲೋಕಾರ್ಪಣೆಗೊಳಿಸಲಾಗಿದೆ. ಒಂದು ವರ್ಷದಲ್ಲೇ ಈ ಬೃಹತ್ ಚೆಂದದ ತೇರು ತಯಾರಾಗಿದೆ.
ಇದನ್ನೂ ಓದಿ: Yellapur Jatra 2023: ದೇವಮ್ಮ ದುರ್ಗಮ್ಮರ ಪುರಪ್ರವೇಶ, ಶುರುವಾಯ್ತು ಅದ್ದೂರಿ ಯಲ್ಲಾಪುರ ಜಾತ್ರೆ!
ಬಿಟ್ಟುಕೊಡದ ಹಳೆ ಶೈಲಿ
ಈ ನೂತನ ರಥದ ತುಂಬಾ ಹಳೆಯ ರಥದ ಮಾದರಿಯಂತೆಯೇ ಮೂರ್ತಿಗಳ ಕೆತ್ತನೆಯಿದ್ದು ರಥದ ಆಕಾರ, ವಿನ್ಯಾಸ ಹಾಗೂ ಶಿಲ್ಪಗಳು ಎಲ್ಲವೂ ಹಳೆಯ ರಥದ ತದ್ರೂಪದಂತೆಯೇ ಇವೆ.
ಇದನ್ನೂ ಓದಿ: Keladi: ತೇರನ್ನೇರಿದ ದಲಿತರು! ರಾಜ್ಯಕ್ಕಾಗಿ ಜೀವವನ್ನೇ ಬಿಟ್ಟ ವೀರ ಪುರುಷರು!
ಇನ್ನು ಕುಂದಾಪುರದಿಂದ ಅಂಕೋಲಾ ಯಲ್ಲಾಪುರ ಮಾರ್ಗವಾಗಿ ಬನವಾಸಿಗೆ ಬಂದ ಈ ರಥವನ್ನ ಭಕ್ತರೆಲ್ಲರೂ ಜೈಕಾರ, ಭಕ್ತಿ ಭಾವದಿಂದ ಬರಮಾಡಿಕೊಂಡರು.
ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ