ಶಿರಸಿ: ನೋಡೋಕೂ ಚಂದ, ತಿನ್ನೋಕೂ ರುಚಿ! ಫೈನಾಗಿರೋ ಈ ಪೈನಾಪಲ್ಗೆ ಬನವಾಸಿಯಲ್ಲೀಗ ಸಖತ್ ಡಿಮ್ಯಾಂಡ್! ಹಳದಿ ಹಸಿರು ಮಿಶ್ರಿತ ಬಣ್ಣದ ಅನಾನಸು ಸಖತ್ ಟೇಸ್ಟಾಗಿದ್ದು, ಗ್ರಾಹಕರು ಫಿದಾ ಆಗ್ತಿದ್ದಾರೆ. ಹುಳಿಯಿಲ್ಲದ ಹೆಚ್ಚು ರುಚಿ ರುಚಿಯಾಗಿರೋ ಈ ಅನಾನಸು ಕೊಳ್ಳಲೆಂದೇ ಆಗಮಿಸ್ತಿದ್ದಾರೆ. ಉತ್ತರ ಕನ್ನಡದ (Uttara Kannada) ಬನವಾಸಿ ಮಾರುಕಟ್ಟೆಯಲ್ಲಿ (Banavasi Market) ಈಗ ಪೈನಾಪಲ್ ಹಣ್ಣಿನ (Banavasi Pineapple) ಭರಾಟೆ ಜೋರಾಗಿದೆ. ವರ್ಷವಿಡೀ ಬೆಳೆಯುವ ಈ ಹಣ್ಣುಗಳು ಹುಳಿಯಾಗಿರದೇ ಸವಿಯಾಗಿರುತ್ತವೆ ಎನ್ನುವುದೇ ಈ ಹಣ್ಣುಗಳ ವಿಶೇಷ.
ಇದನ್ನೂ ಓದಿ: Football League: ಕರ್ನಾಟಕದಲ್ಲಿ ಫೀಮೇಲ್ ಫುಟ್ಬಾಲ್ ಸುಗ್ಗಿ! ಕಾಲ್ಚೆಂಡಿನ ಚಾಲಾಕಿಗಳ ಬೊಂಬಾಟ್ ಆಟ
ಹೆಚ್ಚು ಲಾಭದ ಆಸೆಗೆ ಹೋಗಲ್ಲ!
ಬನವಾಸಿಯಿಂದ ಉಪ್ಪಾರಗೇರಿಯ ಆರು ಕುಟುಂಬಗಳು ಈಗ ಸುತ್ತಲಿನ ಕೃಷಿಕರಿಂದ ಅನಾನಸ್ ಖರೀದಿಸಿ ಮಾರುತ್ತಿವೆ. 100 ರೂಪಾಯಿಗೆ ನಾಲ್ಕರಂತೆ ಹಣ್ಣುಗಳು ಮಾರಾಟವಾಗ್ತಿವೆ. ಹೆಚ್ಚು ಲಾಭ ಮಾಡೋ ಆಸೆಗೆ ಹೋಗದೇ ಪಾಲಿಗೆ ಬಂದದ್ದು ಪಂಚಾಮೃತ ಅಂತ ಬನವಾಸಿಯ ವ್ಯಾಪಾರಿಗಳು ಮಾರಾಟ ಮಾಡ್ತಿದ್ದಾರಂತೆ.
ಇದನ್ನೂ ಓದಿ: E- Kart: ರೈತರ ಭಾರ ಕಡಿಮೆ ಮಾಡುತ್ತೆ ಈ ಗಾಡಿ
ಅನಾನಸು ಹಣ್ಣಿಗೆ ವರ್ಷವಿಡೀ ಮಾರ್ಕೆಟ್ ಇಡೋದ್ರಿಂದ ಬಾಳೆ ಬೆಳೆಗಾರರೂ ಸಹ ಅನಾನಸ್ ಕಡೆ ಆಸಕ್ತಿ ತೋರ್ತಿದ್ದಾರೆ. ಹೀಗಾಗಿ ಬನವಾಸಿಯ ಮಧುಕೇಶ್ವರನ ರಥಬೀದಿಯ ಅನಾನಸುಗಳದ್ದೇ ರಾಶಿ ಕಾಣಬಹುದಾಗಿದೆ. ಇಲ್ಲಿ ಬೆಲೆಯೂ ಕಡಿಮೆಯಿದ್ದು, ರುಚಿ ರುಚಿಯಾದ ಹಣ್ಣುಗಳನ್ನು ಸವಿಯಬಹುದಾಗಿದೆ.
ವರದಿ: ಎ.ಬಿ. ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ