ಉತ್ತರ ಕನ್ನಡ: ಎಲ್ಲಿ ನೋಡಿದರಲ್ಲಿ ಹಸುಗೂಸುಗಳು ಬಾಣಂತಿಯರು, ಇವರು ಇಲ್ಯಾಕೆ ಕುತ್ಕೊಂಡಿದಾರೆ? ಹೆಲ್ತ್ ಚೆಕಪ್ ಏನಾದ್ರೂ ನಡಿತಿದ್ಯಾ ಅನ್ಕೊಂಡ್ರಾ? ಅಲ್ಲ ರೀ, ಈ ಮಕ್ಕಳ ಹೆಲ್ತ್ ಮತ್ತೆ ವೆಲ್ತ್ಗೆ ಅಂತಾನೇ ಒಂದು ಆಚರಣೆ ನಡೆಯುತ್ತೆ! ಅದೆಂತ ಆಚರಣೆ ಅಂತೀರಾ ನೀವೆ ನೋಡಿ! ಉತ್ತರ ಕನ್ನಡ ಜಿಲ್ಲೆಯ Temple's In Uttara Kannada) ಮುಂಡಗೋಡ ತಾಲೂಕಿನ ಸಾಲಗಾಂವ್ ಗ್ರಾಮದಲ್ಲಿರೋ ಈ ದೇವಸ್ಥಾನ ಬಾಣಂತಿ ದೇವಿ ಗುಡಿ (Banati Devi Temple) ಅಂತ! ಇದೇನಪ್ಪ ಬಾಣಂತಿಯೂ ದೇವರಾದ್ರಾ ಅನ್ಕೊಂಡ್ರಾ? ಅಲ್ಲೇ ಇದೇ ವಿಶೇಷ.
ಈ ಬಾಣಂತಿ ದೇವಿ ಒಂದಲ್ಲ ಒಂದು ಕಾಲದಲ್ಲಿ ಜನಸಾಮಾನ್ಯರಲ್ಲಿ ಜನಸಾಮಾನ್ಯ ಮಹಿಳೆ ಆಗಿದ್ಲಂತೆ. ಆಕೆ ಬಾಣಂತಿಯಾಗಿ ಹುಟ್ಟೂರಿಗೆ ಬಂದಾಗ ಊರಿಡೀ ಬರದಲ್ಲಿ ನಲುಗುತ್ತಿತ್ತಂತೆ. ಜನ ಬರದಲ್ಲಿ ಸಾಯುತ್ತಿರುವುದನ್ನು ಕಂಡು ಊರ ಕೆರೆಯ ಅಂಗಳಕ್ಕೆ ಹೋಗಿ, ನನ್ನ ಬಲಿ ತೆಗೆದುಕೊಂಡು ಕೆರೆ ತುಂಬಿಬಿಡು, ಇನ್ಯಾವತ್ತೂ ಬತ್ತಿಹೋಗಬೇಡ ಎಂದು ಬೇಡಿಕೊಂಡಳಂತೆ.
ಬಾಣಂತಿಯೇ ದೇವರಾದಳು!
ಅವಳ ಬೇಡಿಕೆಯಂತೇ ಕೆರೆ ತುಂಬಿ ಬಂದು ಬಾಣಂತಿ ಹಾಗೂ ಮಗುವನ್ನು ಬಲಿ ಪಡೆಯಿತಂತೆ. ಅಲ್ಲಿಂದ ಆ ಬಾಣಂತಿಯೇ ದೈವವಾಗಿ ಈ ಸೀಮೆಯಲ್ಲಿ ಬಾಣಂತಮ್ಮ ಎಂದು ಪೂಜಿಸಲ್ಪಡುತ್ತಾಳೆ!
ಇದನ್ನೂ ಓದಿ: Uttara Kannada: 10 ಸಾವಿರದಲ್ಲೇ ರೋಪ್ ವೇ ನಿರ್ಮಿಸಿದ ಕೃಷಿಕ!
ಮಕ್ಕಳಾಗದವರಿಂದ ಹರಕೆ
ಇಲ್ಲಿ ಮಕ್ಕಳಾಗದವರು, ಮಕ್ಕಳಾಗಿಯೂ ಮಕ್ಕಳಿಗೆ ತೊಂದರೆ ಇರುವವರು ಹರಕೆ ಕಟ್ಟಿಕೊಳ್ಳುತ್ತಾರೆ. ನನ್ನ ಮಗುವಿಗೆ ಆರಾಮಾದ್ರೆ ನಿನ್ನ ಸಾನಿಧ್ಯದಲ್ಲಿ ಮಕ್ಕಳನ್ನು ಬಾಳೆ ಎಲೆಯಲ್ಲಿ ತೇಲಿ ಬಿಡುತ್ತೇವೆ ಎಂದು ಬೇಡಿಕೊಳ್ತಾರೆ. ವರ್ಷದ ಪ್ರಥಮ ಹಬ್ಬ ಸಂಕ್ರಾಂತಿಯ ಸಂಜೆ ಕೆರೆಯ ಕಟ್ಟೆಗಳು ಈ ಹರಕೆಗಳಿಂದ ಮಕ್ಕಳಿಂದ ತುಂಬಿ ಹೋಗುತ್ತೆ. ಊರಿನ ಹಿರಿಯರು ಬಾಣಂತಿ ದೇವಿಯ ತೆಪ್ಪ ಹಿಡಿದು ಮಕ್ಕಳನ್ನು ಬಾಳೆಲೆಯಲ್ಲಿ ತೇಲಿಸುತ್ತಾರೆ.
ಇದನ್ನೂ ಓದಿ: Uttara Kannada: ಹೆರಿಗೆಯ ದಿನ ಬಂದ್ರೂ ಈ ಎಮ್ಮೆಗೆ ಕೆಚ್ಚಲೇ ಮೂಡಿಲ್ಲ!
ಈ ದೇಗುಲಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಸುಮಾರು 200 ವರ್ಷದ ಇತಿಹಾಸ ಹೊಂದಿರುವ ಈ ದೇವಾಲಯ ಹಾಗೂ ಆಚರಣೆ ಇಂದಿಗೂ ಜೀವಂತವಾಗಿದೆ. ಹೆದ್ದಾರಿಯಲ್ಲಿ ಸಿಗುವ ಈ ತಾಯಿಗೆ ನಮಸ್ಕಾರ ಮಾಡಿಯೇ ಪ್ರಯಾಣಿಕರು ಮುಂದೆ ಹೋಗ್ತಾರೆ. ಊರ ಕಷ್ಟವನ್ನ ತನ್ನದೇ ಕಷ್ಟ ಎಂದು ಬದುಕಿದ ಈ ಬಾಣಂತಿ ದೇವಿಯನ್ನು ನೀವೂ ಒಮ್ಮೆ ದರ್ಶನ ಮಾಡಿ.
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ