Bajrang Bali Temple: ಈ ಬೆಟ್ಟ ಏರಿದ್ರೆ ಸಿಗುತ್ತೆ ಶಕ್ತಿಶಾಲಿ ಬಜರಂಗಿಯ ದರ್ಶನ!

ಇಲ್ಲಿ ವಿಡಿಯೋ ನೋಡಿ

ಇಲ್ಲಿ ವಿಡಿಯೋ ನೋಡಿ

ಮುಂಡಗೋಡು ತಾಲೂಕಿನ ಮೂಲವೇ ಈ ಬಜರಂಗಿ. ಹಾಗಿದ್ರೆ ಎಲ್ಲಿದ್ದಾನೆ ಈ ಆಂಜನೇಯ ಅನ್ನೋದನ್ನ ನೋಡೋಣ ಬನ್ನಿ!

  • News18 Kannada
  • 4-MIN READ
  • Last Updated :
  • Uttara Kannada, India
  • Share this:

ಉತ್ತರ ಕನ್ನಡ: ಆಗಸಕ್ಕೆ ಚಾಚಿದಂತೆ ಕಾಣೋ ಮೆಟ್ಟಿಲ ಸಾಲು, ಬೆಟ್ಟವನ್ನೇರಿದ್ರೆ ಅಲ್ಲೇ ಆಗೋದು ಬಜರಂಗಿಯ (Bajarangi Bali) ದರ್ಶನ, ಸುತ್ತಲೂ ನಯನ ಮನೋಹರ ವಿಹಂಗಮ ನೋಟವೇ ಈ ಕ್ಷೇತ್ರದ ವಿಶೇಷ. ಉತ್ತರ ಕನ್ನಡದ (Uttara Kannada) ಒಂದು ಕಾಲದ ವಿದ್ಯಾಭ್ಯಾಸ ಕೇಂದ್ರವೇ ಈ ಮುಂಡಗೋಡು. ಅಂದಹಾಗೆ ಮುಂಡಗೋಡು ಹೆಸರಿನ ಹಿಂದೆಯೂ‌ ಇದೇ ಆಂಜನೇಯನಿದ್ದಾನೆ (Lord Anjaneya) ಅನ್ನೋದು ಇನ್ನೊಂದು ವಿಶೇಷ.




ಬೆಟ್ಟದ ಮೇಲೆ ಆಂಜನೇಯ
ಯೆಸ್, ಇದು ಮುಂಡಗೋಡದ ನ್ಯಾಸರ್ಗಿಯ ಗುಡ್ಡದ ಆಂಜನೇಯ ದೇವಸ್ಥಾನ‌. ಸುಮಾರು 3 ಕಿಲೋ ಮೀಟರ್ ಪರ್ವತಾರೋಹಣ ನಂತರ ಇಲ್ಲಿರೋ ಮಾರುತಿಯ ದರ್ಶನವಾಗುತ್ತೆ‌. ಸಣ್ಣದಾಗಿ ಕಲ್ಲಿನಲ್ಲಿ ಕೆತ್ತಿರೋ ಇಲ್ಲಿನ ಆಂಜನೇಯನಿಗೆ ಅಪಾರ ಸಂಖ್ಯೆಯ ಭಕ್ತರಿದ್ದಾರೆ. ಸೂರ್ಯ ನಾರಾಯಣ ಸಮೇತ ನೆಲೆಸಿರುವ ಆಂಜನೇಯ, ಪೂರ್ವ ದಿಕ್ಕಿಗೆ ಮುಖ ಮಾಡಿದ್ದಾನೆ.




ಸೂರ್ಯ ದೇವನಿಂದ ಮಾರುತಿಗೆ ಪಾಠ
ಇಲ್ಲೇ ಸೂರ್ಯದೇವನು ಆಂಜನೇಯನಿಗೆ ವಿದ್ಯಾಭ್ಯಾಸ ಮಾಡಿಸಿದ ಅನ್ನೋ ಐತಿಹ್ಯವಿದೆ. ಹೀಗಾಗಿ ಇದು ವಿದ್ಯೆಗೆ ಅತಿ ಮಹತ್ವದ ತಾಣವಾಗಿದ್ದು, ಹಿಂದೆ ಸುತ್ತಲಿನ ಹತ್ತಾರು ಊರಿಂದ ತಮ್ಮ ಮಕ್ಕಳ ಅಕ್ಷರಾಭ್ಯಾಸಕ್ಕಾಗಿ ಜನ ಬರುತ್ತಿದ್ದರು ಹಾಗೂ ಇಲ್ಲಿ ಗುರುಕುಲವೂ ಇತ್ತು ಎಂಬ ಪ್ರತೀತಿ ಇದೆ.




ಇದನ್ನೂ ಓದಿ: Idagunji Ganapati: ಮಹತೋಭಾರ ವಿನಾಯಕನ ಕ್ಷೇತ್ರ ದರ್ಶನ, ಇದು ಇಡಗುಂಜಿ ಗಣಪತಿಯ ಮಹಿಮೆ




ಮುಂಡಗೋಡದ ಮೂಲ!
ನಾನಾ ಪ್ರಾಕೃತಿಕ ವಿಕೋಪದ ನಂತರ ಇಲ್ಲಿನ ವಿಗ್ರಹಗಳಿಗೆ ಹಾನಿ ಆಗಿ, ಇಲ್ಲಿನ ಸಮತಟ್ಟಾದ ಪ್ರದೇಶಗಳ ರಚನೆಯನ್ನು ಗಮನಿಸಿ ಊರಿಗೆ "ಮುಂಡಗೋಡು" ಎಂದರೆ ಸಮತಟ್ಟಾದ ಪ್ರದೇಶ ಎಂದರ್ಥ. 15 ನೇ ಶತಮಾನದಲ್ಲಿ ವಾದಿರಾಜರಿಂದ ವಿಗ್ರಹಗಳು ಪುನಃ ಪ್ರತಿಷ್ಠಾಪನೆಗೊಂಡವು. ಅದರಲ್ಲಿ ಒಂದು ಶಿಲಾ ಭಾಗವನ್ನು ತೆಗೆದುಕೊಂಡು ವಾದಿರಾಜರು ಊರಿನಲ್ಲಿ ಆಂಜನೇಯನ ಮೂರ್ತಿ ಕೆತ್ತಿಸಿ ಪ್ರತಿಷ್ಠಾಪನೆ ಮಾಡಿದರು.




ಇದನ್ನೂ ಓದಿ: Vote from Home Video: ಮನೆಯಿಂದಲೇ ಮತದಾನ ಮಾಡಿ ಖುಷಿಪಟ್ಟ ಹಿರಿಯ ನಾಗರಿಕರು! ವಿಡಿಯೋ ನೋಡಿ


top videos



    ಹೀಗೆ ಬನ್ನಿ
    ಮುಂಡಗೋಡದಿಂದ ಪೂರ್ವಕ್ಕೆ 2 ಕಿಲೋಮೀಟರ್ ನ್ಯಾಸರ್ಗಿಗೆ ಬಂದು ಅಲ್ಲಿಂದ ಕಾಡಿನ ಮಾರ್ಗವಾಗಿ 2 ಕಿಲೋ ಮಿಟರ್ ಸಾಗಿ ಸುಮಾರು 3 ಕಿಲೋ ಮೀಟರ್ ಎತ್ತರದ ಪರ್ವತ ಏರಿದ ಮೇಲೆ ಈ ದೇವಸ್ಥಾನ ಸಿಗುತ್ತದೆ. ನೀವೂ ಕೂಡ ಇಲ್ಲಿಗೆ ಬಂದು ಸೂರ್ಯ, ಹನುಮ ದೇವರ ಆಶೀರ್ವಾದ ಪಡೆಯಬಹುದಾಗಿದೆ.

    First published: