ಎಲ್ಲಾ ಕಡೆ ಸ್ವಾಮಿ ಅಯ್ಯಪ್ಪ (Ayyapppa Swami) ಅನ್ನೋ ಕೂಗು, ಭಕ್ತಿ ಭಾವದಲ್ಲಿ ಸಾಗರೋಪಾದಿಯಲ್ಲಿ ಆಗಮಿಸ್ತಿರೋ ಭಕ್ತರು, ಮತ್ತೊಂದೆಡೆ ಆಕಾಶದೆತ್ತರಕ್ಕೆ ಉರಿದು ಕಿಡಿ ಹಾರಿಸುತ್ತಿರುವ ಬೆಂಕಿ. ಮೈ ಝುಮ್ಮೆನಿಸೋ ಈ ದೃಶ್ಯಗಳು ಉತ್ತರ ಕನ್ನಡ (Uttara Kannada News) ಮುಂಡಗೋಡಿನ ಅಯ್ಯಪ್ಪ ಸ್ವಾಮಿ ದೇವಸ್ಥಾನದ ವರ್ಧಂತಿ ಉತ್ಸವದ್ದು.
ಬೆಂಕಿಗೆ ಹಾಕಿದ ಕಟ್ಟಿಗೆಗಳು ಕೆಂಡವಾದ್ಮೇಲೆ ಮೊದಲು ಗುರುಸ್ವಾಮಿ ಹನುಮಂತ ಭಜಂತ್ರಿ ತಮ್ಮ ಇನ್ನಿಬ್ಬರು ಶಿಷ್ಯರೊಡನೆ ಬೆಂಕಿಯ ಮೇಲೆ ಕಾಲಿಟ್ಟರು. ಕೆಂಡಸೇವೆ ಆದ ನಂತರ ಮಂಡಳದ ಮುಂದೆ ಬಂದು ಉಳಿದ ಸ್ವಾಮಿಗಳಿಗೆ ಕೆಂಡ ತುಳಿಯಲು ಆದೇಶ ನೀಡಿದರು.
ಇದನ್ನೂ ಓದಿ: Success Story: ಮಹಿಳೆಯೇ ಇಲ್ಲಿ ಮೇಸ್ತ್ರಿ, ಪುರುಷರನ್ನು ಮೀರಿಸಿದ ಧೀರೆ!
ಚಳಿಯೂ ಲೆಕ್ಕಕ್ಕೇ ಇಲ್ಲ!
ಗಡಗಡ ನಡುಗುವ ಚಳಿಯ ವಾತಾವರಣವನ್ನೂ ಲೆಕ್ಕಿಸದೇ ಮಾಲಾಧಾರಿಗಳು ತಣ್ಣೀರು ಸ್ನಾನ ಮಾಡಿದರು. ಆನಂತರ ಪಡಿಪೂಜೆ ಮಾಡಿ ಕೆಂಡ ತುಳಿದರು. ಸಣ್ಣ ವಯಸ್ಸಿನ ಮಣಿಕಂಠ ಸ್ವಾಮಿಗಳು ಎಂದು ಕರೆಯುವ ಕಿರಿಯ ಬಾಲಕರನ್ನು ವಯಸ್ಕ ಮಾಲಾಧಾರಿಗಳು ಹೊತ್ತು ನಡೆದರು.
ಇದನ್ನೂ ಓದಿ: Magician Family: ಇದು ಜಾದೂಗಾರ್ ಕುಟುಂಬ! ಅಪ್ಪ, ಮಗ, ಮಗಳು ಎಲ್ರೂ ಮಾಡ್ತಾರೆ ಮ್ಯಾಜಿಕ್
ಭಕ್ತಿಭಾವದಿಂದ ನಡೆದ ಕೆಂಡಸೇವೆ
ಒಟ್ಟಿನಲ್ಲಿ ಮುಂಡಗೋಡಿನಲ್ಲಿ ಅಪಾರ ಭಕ್ತಿಭಾವದಿಂದ ಈ ವರ್ಷವೂ ಕೆಂಡಸೇವೆ ನಡೆಯಿತು. ಭಕ್ತರೆಲ್ಲ ಸುತ್ತ ನೆರೆದು ಈ ಸೇವೆಯನ್ನು ಕಣ್ತುಂಬಿಕೊಂಡರು.
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ