ಉತ್ತರ ಕನ್ನಡ: ಗೋಲಾಕಾರದ ತಿಂಡಿ, ಬಾಣೆಲೆಯಲ್ಲಿ ಬೆಂದು ಸ್ವಲ್ಪ ತಣಿದ ಮೇಲೆ ನಾಲಿಗೆ ಮೇಲಿಟ್ಟರೆ, ಆಹಾ! ಈ ಜನುಮವೇ ದೊರೆತಿದೆ ರುಚಿ ಸವಿಯಲು ಅನ್ನೋ ಹಾಡಿನ ಫೀಲ್. ಅದೆಂತಹ ಪ್ರಸಾದ (Athirasa Prasada) ಇದ್ರೂ ಈ ದೇಗುಲದಲ್ಲಿ ಸಿಗೋ ಪ್ರಸಾದದ ಟೇಸ್ಟೇ ಬೇರೆ.
ತಿರುಪತಿಯಲ್ಲಿ ಲಡ್ಡು ಹೇಗೆ ಫೇಮಸ್ಸೋ, ಹಾಗೆಯೇ ಮಂಜುಗುಣಿಯ ಈ ಅತಿರಸ ಅಥವಾ ಅತ್ರಾಸ. ಬಾಯಲ್ಲಿ ನೀರೂರಿಸೋ, ಸಿಹಿಯನ್ನೇ ಹೊದ್ದುಕೊಂಡಂತಿರುವ ಈ ರುಚಿರುಚಿಯಾದ ಪ್ರಸಾದಕ್ಕೂ ಇದೆ ಇತಿಹಾಸ. ಹಾಗಿದ್ರೆ ಈ ಅತಿರಸ (ಅತ್ರಾಸ) ಅಂದ್ರೆ ಏನು? ಇದನ್ನ ಹೇಗೆ ಮಾಡ್ತಾರೆ? ಇದೆಲ್ಲವನ್ನೂ ನೋಡ್ಕೋಂಡು ಬರೋಣ.
ಶತಮಾನದ ಇತಿಹಾಸ
ಯೆಸ್, ಉತ್ತರ ಕನ್ನಡ ಜಿಲ್ಲೆಯ ಮಂಜುಗುಣಿಯಲ್ಲೂ ಇಂತಹದ್ದೇ ಪ್ರಸಾದ ದೊರೆಯುತ್ತದೆ. ಅತಿರಸ ಅಥವಾ ಅತ್ರಾಸ ತಯಾರಾಗೋದು ಶತಮಾನಗಳ ಐತಿಹ್ಯವಿರುವ ಬೋರಿಮನೆಯಲ್ಲಿ. ಇಲ್ಲಿ 9 ನೇ ಶತಮಾನದಲ್ಲಿ ನಿರ್ಮಿಸಿದ್ದ ಕಲ್ಲಿನ ಬಾವಿಗಳಿವೆ, ಒಲೆಗಳಿವೆ ಅಷ್ಟೇ ಹಳೆಯ ಕಲ್ಲಿನ ಅಡುಗೆ ಉಪಕರಣಗಳಿವೆ. ಶ್ರೀ ದೇವರಿಗೆ ನೈವೇದ್ಯಕ್ಕೆ ಸಲ್ಲುವ ಅತ್ರಾಸದ ತಯಾರಿಕೆಯೂ ಇಲ್ಲೇ ನಡೆಯುತ್ತದೆ.
ತಯಾರಿಸುವುದು ಹೇಗೆ?
ಅಂದಹಾಗೆ ಇದನ್ನ ಹೇಗೆ ತಯಾರಿಸುತ್ತಾರೆ ಅಂದ್ರೆ, ಮೊದಲಿಗೆ ಅಕ್ಕಿಯನ್ನು ಹುಡಿ ಮಾಡಿಕೊಂಡು ಜೊತೆಗೆ ಬೆಲ್ಲದ ಪಾಕವನ್ನು ರೆಡಿ ಮಾಡಿಕೊಂಡಿರಬೇಕು. ಅಕ್ಕಿ ಹುಡಿಯಾದ ಮೇಲೆ ಅದನ್ನು ಬೆಲ್ಲದ ಪಾಕಕ್ಕೆ ಸೇರಿಸುತ್ತಾರೆ.
ಹಾಗೆ ಸೇರಿಸಿದ ಮೇಲೆ ಸ್ವಲ್ಪ ತಣಿಸಬೇಕು. ಈ ವೇಳೆ ಅದನ್ನು ನಿರಂತರ ಕಟ್ಟಿಗೆ ಸೌಟಿಂದ ಮಿಶ್ರಣ ಮಾಡುತ್ತಿರುತ್ತಾರೆ. ಕೊನೆಗೆ ಅದು ರವೆ ರವೆಯಾಗಿ ಕೈಯಲ್ಲಿ ಯಾವುದೇ ಗಂಟಿಲ್ಲದೇ ಸಿಕ್ಕಾಗ ತುಪ್ಪದ ಬಾಣಲೆಯನ್ನು ಓರೆ ಮಾಡಿ, ಮೇಲ್ಭಾಗಕ್ಕೆ ಹೂರಣ ಮಿಶ್ರಿತ ಹಿಟ್ಟಿನ ಸುರುಳಿ ಮಾಡಿಕೊಂಡು ಹದವಾಗಿ ದುಂಡನೆಯ ರೂಪಕ್ಕೆ ಹರವುತ್ತಾರೆ. ನಂತರ ಅದನ್ನು ಹಾಗೆಯೇ ಕಾದ ತುಪ್ಪದಲ್ಲಿ ಕರಿಯಲಾಗುತ್ತೆ.
ಇದನ್ನೂ ಓದಿ: Uttara Kannada: ಈ ಅಕ್ಕಿ ಯಾವ ಸುಗಂಧ ದ್ರವ್ಯಕ್ಕೂ ಕಡಿಮೆಯಿಲ್ಲ, ಊರೆಲ್ಲ ಪರಿಮಳ ಸೂಸುತ್ತೆ!
ಲಡ್ಡು ಪ್ರಸಾದವೂ ಫೇಮಸ್
ಹೀಗೆ ತಯಾರಾಗುವ ಅತಿರಸ ನಾಲಗೆಯ ಸಖತ್ ರುಚಿ ಹೆಚ್ಚಿಸುತ್ತೆ. ಇನ್ನು ಇಲ್ಲಿ ಸಿಗೋ ಲಡ್ಡು ಪ್ರಸಾದ ಕೂಡಾ ತಿರುಪತಿ ನೆನಪಿಸುತ್ತೆ. ಕಡಲೆ ಹಿಟ್ಟನ್ನು ಕಲಸಿ ಬೂಂದೆ ಮಾಡಿಕೊಂಡು ನಂತರ ಅದಕ್ಕೆ ಏಲಕ್ಕಿ, ಲವಂಗ, ಪಚ್ಚಕರ್ಪೂರ ಹಾಗೂ ಗೋಡಂಬಿ, ದ್ರಾಕ್ಷಿ, ಉತ್ತತ್ತಿ, ಬಾದಾಮಿ, ಕಲ್ಲುಸಕ್ಕರೆ ಹಾಕಿ ಪುನಃ ಕಡಲೆಹಿಟ್ಟು ಹಾಗೂ ತುಪ್ಪದ ಲೇಪನದೊಂದಿಗೆ ಈ ಲಾಡುವನ್ನು ತಯಾರಿಸಲಾಗುತ್ತೆ.
ಇದನ್ನೂ ಓದಿ: Uttara Kannada: ಸಂಕಟ ನಿವಾರಿಸುವ ವೆಂಕಟರಮಣ ಇಲ್ಲಿದ್ದಾನೆ ನೋಡಿ!
ಮಂಜುಗುಣಿಗೆ ಹೋದ್ರೆ ಮಿಸ್ ಮಾಡದಿರಿ
ಹೀಗೆ ಅತಿರಸ ಹಾಗೂ ಲಡ್ಡು ಪ್ರಸಾದ ಮಂಜುಗುಣಿಯಲ್ಲಿ ಸಖತ್ ಫೇಮಸ್. ಅದನ್ನ ಈ ಬೋರಿಮನೆಯಲ್ಲೇ ತಯಾರಿಸಲಾಗುತ್ತೆ. ಮಂಜುಗುಣಿ ದೇವರ ದರ್ಶನಕ್ಕೆ ಹೋದ್ರೆ ಈ ಅತಿರಸ, ಲಡ್ಡು ಪ್ರಸಾದ ಮಿಸ್ ಮಾಡ್ಕೊಂಡ್ರೆ ನಿಮ್ಮ ಜರ್ನಿಯ ಅಪೂರ್ಣ ಅನ್ನೋ ಮಟ್ಟಿಗೆ ಈ ಪ್ರಸಾದ ಪ್ರಭಾವ ಬೆಳೆಸಿಕೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ