Uttara Kannada: ಇವರಿಗೆ ಆಕಾಶವೇ ಬಂಡವಾಳ, ಕಗ್ಗಾಡ ಹಳ್ಳಿಯಲ್ಲಿದೆ 40 ಲಕ್ಷದ ಆಸ್ಟ್ರೋ ಫಾರ್ಮ್!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಇಲ್ಲಿ ಪ್ರತಿದಿನವೂ ಸಾಯಂಕಾಲ 5 ರಿಂದ 7 ಗಂಟೆ ತನಕ ಟೆಲಿಸ್ಕೋಪ್ ಬಳಕೆ ಹೇಗೆ ಎಂದು ಜನರಿಗೆ ವಿವರಿಸಲಾಗುತ್ತೆ. ನಂತರ ಸಿದ್ದನಬೆಟ್ಟದ ತುದಿಗೆ ಸೆಟಪ್ ಮಾಡಿರುವ ಟೆಲಿಸ್ಕೋಪ್​ಗಳನ್ನು ಜನರೇ ನಿಯಂತ್ರಿಸಿ ಆಕಾಶಕಾಯಗಳನ್ನು ಗುರುತಿಸುವ ಮೂಲಕ ಎಂಜಾಯ್ ಮಾಡಬಹುದಾಗಿದೆ.

  • News18 Kannada
  • 3-MIN READ
  • Last Updated :
  • Uttara Kannada, India
  • Share this:

ಉತ್ತರ ಕನ್ನಡ: ಐದಾರು ಬೃಹತ್ ಟೆಲಿಸ್ಕೋಪ್ ಗಳು, ರಂಗೀನ ಲೈಟ್ ಡೆಕೋರೇಶನ್, ಮಂಜು ಕವಿದ ಸಹ್ಯಾದ್ರಿಯಲ್ಲಿ ಆಕಾಶದ ವೀಕ್ಷಣೆ. ಇದುವೇ ಆಸ್ಟ್ರೋ ಫಾರ್ಮ್ (Astro Farm). ಇದು ಗ್ರಾಮೀಣ ಭಾಗದಲ್ಲಿ ಆಕಾಶಕಾಯ (Sky Observing Hub) ವೀಕ್ಷಣೆಯ ಹಬ್!


ಇವು ಉತ್ತರ ಕನ್ನಡ ಯಲ್ಲಾಪುರ ಅರಣ್ಯ ವಲಯದ ಮುಂಡಗೋಡದ ಕಗ್ಗಾಡ ಹಳ್ಳಿಯಲ್ಲಿ ಈಗ ಲಭ್ಯವಿರೋ ಆಸ್ಟ್ರೋ ಫಾರ್ಮ್​ನ ದೃಶ್ಯಗಳು. ಅಂದಹಾಗೆ ಇದನ್ನ ಆರಂಭಿಸಿದ್ದು ಹಾವೇರಿಯ ಕುನ್ನೂರಿನ ನಿರಂಜನ್. ಇವರು ಆಸ್ಟ್ರೋ ಫಿಸಿಕ್ಸ್​ನಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿ, ನಂತರ ತಮ್ಮ ಪಿತ್ರಾರ್ಜಿತ ಆಸ್ತಿಯಲ್ಲಿ ಸುಮಾರು 40 ಲಕ್ಷ ರೂಪಾಯಿ ಬಂಡವಾಳದಲ್ಲಿ ಈ ಆಸ್ಟ್ರೋ ಫಾರ್ಮ್ ನಿರ್ಮಿಸಿದ್ದಾರೆ.




ಅಪರೂಪದ ಪ್ರಯತ್ನ
ಕರ್ನಾಟಕದ ಮಟ್ಟಿಗೆ ಇದು ಮೊದಲ ಪ್ರಯತ್ನ ಎನ್ನಬಹುದು. ನಿರಂಜನ್ ಈ ಭಾಗದ ಜನರಿಗೆ ಗ್ರಹ, ಆಕಾಶಕಾಯ, ಗ್ರಹಣ ಈ ಎಲ್ಲದರ ಕುರಿತು ಮಾಹಿತಿ ನೀಡೋ ಉದ್ದೇಶ ಹೊಂದಿದ್ದಾರೆ. ಆಕಾಶದಾಚೆಗೂ ಒಂದು ಪ್ರಪಂಚವಿದೆ ಅನ್ನೋದನ್ನ ತೋರಿಸುತ್ತಿದ್ದಾರೆ. ದೊಡ್ಡವರಿಗೆ ಶೂಟಿಂಗ್ ಸೇರಿದಂತೆ ಟ್ರೆಕ್ಕಿಂಗ್​ನಂತಹ ಅಡ್ವೆಂಚರ್​ಗಳಿದ್ದರೆ, ಮಕ್ಕಳಿಗೆ ಇಲ್ಲಿ ಆಟಿಕೆಗಳಿವೆ.






ವೀಕ್ಷಣೆ ಸಮಯ
ಇಲ್ಲಿ ಪ್ರತಿದಿನವೂ ಸಾಯಂಕಾಲ 5 ರಿಂದ 7 ಗಂಟೆ ತನಕ ಟೆಲಿಸ್ಕೋಪ್ ಬಳಕೆ ಹೇಗೆ ಎಂದು ಜನರಿಗೆ ವಿವರಿಸಲಾಗುತ್ತೆ. ನಂತರ ಸಿದ್ದನಬೆಟ್ಟದ ತುದಿಗೆ ಸೆಟಪ್ ಮಾಡಿರುವ ಟೆಲಿಸ್ಕೋಪ್​ಗಳನ್ನು ಜನರೇ ನಿಯಂತ್ರಿಸಿ ಆಕಾಶಕಾಯಗಳನ್ನು ಗುರುತಿಸುವ ಮೂಲಕ ಎಂಜಾಯ್ ಮಾಡಬಹುದಾಗಿದೆ.


ಇದನ್ನೂ ಓದಿ: Uttara Kannada: ದೇವರಿಗೇ ಚೆಂದದ ಮನೆ ಕಟ್ಟಿಸಿದ್ರು ನೋಡಿ ಭಕ್ತರು!


ಆಸ್ಟ್ರೋ ಫಾರ್ಮ್​ಗೆ ಹೀಗೆ ಸಾಗಿ ಬನ್ನಿ
ಇನ್ನು ಇಲ್ಲಿಯ ಫೈರ್ ಕ್ಯಾಂಪ್, ಸೂರ್ಯೋದಯ, ಸೂರ್ಯಾಸ್ತದ ದೃಶ್ಯಗಳು ಮನಸ್ಸಿಗೆ ಮುದ ನೀಡುತ್ತವೆ. ನೀವೂ ಈ ಆಸ್ಟ್ರೋ ಫಾರ್ಮ್​ಗೆ ಬರಬೇಕಿದ್ರೆ ಮುಂಡಗೋಡದ ತರ್ಲಘಟ್ಟ ಪೇಟೆಯಿಂದ 10 ಕಿಲೋಮೀಟರ್ ಅಥವಾ ಹಾವೇರಿ ಜಿಲ್ಲೆಯ ಗಡಿ ಹಳ್ಳಿಯಾದ ಕುನ್ನೂರಿಂದ 7 ಕಿಲೋಮೀಟರ್ ದೂರ ಸಾಗಿದರೆ ಈ ಆಸ್ಟ್ರೋ ಫಾರ್ಮ್ ತಲುಪಬಹುದು.


ಇದನ್ನೂ ಓದಿ: Uttara Kannada: 142 ವರ್ಷಗಳ ಲಿಖಿತ ಇತಿಹಾಸವಿರುವ ಬಗ್ಗೋಣ ಪಂಚಾಂಗ ಬರೆಯುವ ಕನ್ನಡತಿ!


ಒಟ್ಟಾರೆ ಜ್ಞಾನದ ಜೊತೆಗೆ, ಮನರಂಜನೆಯೂ ಸಿಗುವ ಈ ಆಸ್ಟ್ರೋ ಫಾರ್ಮ್​ನಲ್ಲಿ ಎಂಜಾಯ್ ಮಾಡಲು ನೀವು ಸಹ ಒಮ್ಮೆ ಭೇಟಿ ನೀಡಬಹುದು ನೋಡಿ. ಆಸ್ಟ್ರೋ ಫಾರ್ಮ್​ನ ನಿರಂಜನ್ ಅವರ ಸಂಪರ್ಕ ಸಂಖ್ಯೆ ಹೀಗಿದೆ ನೋಡಿ: 74113 35012


ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ

First published: