• Home
  • »
  • News
  • »
  • uttara-kannada
  • »
  • Arecanut: ಅಡಿಕೆ ಎಲೆ ಚುಕ್ಕೆ ರೋಗಕ್ಕೆ ಔಷಧ! ಉಪಾಯ ಕಂಡುಕೊಂಡ ಉತ್ತರ ಕನ್ನಡದ ಕೃಷಿಕ

Arecanut: ಅಡಿಕೆ ಎಲೆ ಚುಕ್ಕೆ ರೋಗಕ್ಕೆ ಔಷಧ! ಉಪಾಯ ಕಂಡುಕೊಂಡ ಉತ್ತರ ಕನ್ನಡದ ಕೃಷಿಕ

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಇವರು ಯಾವುದೇ ಇಲಾಖೆ, ಕಚೇರಿಯಿಂದ ಔಷಧಿ ತಂದಿಲ್ಲ. ಬದಲಿಗೆ ಇವರೇ ಕಂಡು ಹಿಡಿದ ಜೀವಾಮೃತ ಅಡಿಕೆ ತೋಟವನ್ನು ಹಸನಾಗಿಸಿದೆ.

  • News18 Kannada
  • Last Updated :
  • Uttara Kannada, India
  • Share this:

    ಶಿರಸಿ:  ಅಡಿಕೆ ಕೃಷಿಕರಿಗೆ (Areca Nut Farmers) ಈಗಂತೂ ಎಲೆ ಚುಕ್ಕೆ ರೋಗದ್ದೇ ತಲೆಬಿಸಿ..ಆದ್ರೆ ಇಲ್ಲೊಂದು ಅಡಿಕೆ ತೋಟ ಇದೆ ನೋಡಿ.ಎಲೆ ಚುಕ್ಕೆ ರೋಗದ ಸುಳಿವೇ ಇಲ್ಲ! ನಮ್ ತೋಟದಲ್ಲೂ ಹೀಗೇ ಮಾಡ್ಬೇಕಿತ್ತಲ್ಲ! ಏನ್ಮಾಡೋದು? ಹಚ್ಚ ಹಸಿರ ಗಿಡ, ಮರಗಳನ್ನ ಯಾವುದೇ ರಾಸಾಯನಿಕ ಬಳಸದೇ ಎಲೆ ಚುಕ್ಕೆ ರೋಗದಿಂದ ರಕ್ಷಿಸಬೇಕಲ್ಲ..ಅಂದ್ಕೊಂಡ್ರಾ? ಉತ್ತರ ಕನ್ನಡದ (Uttara Kannada) ರೈತರೊಬ್ರು ಎಲೆ ಚುಕ್ಕೆ ರೋಗ ನಿವಾರಿಸೋಕೆ ಉಪಾಯ ಕಂಡ್ಕೊಂಡಿದ್ದಾರೆ. ಈ ಮೂಲಕ ಇನ್ನಿತರ ಅಡಿಕೆ ಬೆಳೆಗಾರರಿಗೂ ಈ ಕೃಷಿಕರು ಮಾದರಿಯಾಗಿದ್ದಾರೆ.


    ಇದು ಉತ್ತರ ಕನ್ನಡದ ಶಿರಸಿಯ ನೀರ್ನಳ್ಳಿಯ ರಾಮಚಂದ್ರ ಹೆಗಡೆ ಅವರ ಅಡಿಕೆ ತೋಟ. ಇವ್ರು ಮಾಡಿರೋ ಸಾವಯವ ದ್ರಾವಣದ ಐಡಿಯಾವೇ ಇವತ್ತು ಅಡಿಕೆ ಮರಗಳನ್ನು ರೋಗದಿಂದ ಮುಕ್ತವಾಗಿಸಿದೆ. ಅಷ್ಟಕ್ಕೂ ಇವರು ಮಾಡಿದ್ದು ಸಿಂಪಲ್ ಐಡಿಯಾ! ಅಂದಹಾಗೆ ಇವರು ಯಾವುದೇ ಇಲಾಖೆ, ಕಚೇರಿಯಿಂದ ಔಷಧಿ ತಂದಿಲ್ಲ. ಬದಲಿಗೆ ಇವರೇ ಕಂಡು ಹಿಡಿದ ಜೀವಾಮೃತ ಅಡಿಕೆ ತೋಟವನ್ನು ಹಸನಾಗಿಸಿದೆ.


    ಇದನ್ನೂ ಓದಿ: Uttara Kannada: ಜಬರ್ದಸ್ತ್ ಹೋರಿ ಬೆದರಿಸೋ ಸ್ಪರ್ಧೆ! ನೋಡೋರ ಎದೆಯಲ್ಲೂ ಗಢಗಢ!


    ಹೇಗೆ ತಯಾರಿಸೋದು?
    ಹಸುವಿನ ಸೆಗಣಿ, ನೀರು ಹಾಗೂ ದ್ವಿದಳ ಧಾನ್ಯದ ಹಿಟ್ಟನ್ನು ಫರ್ಮಂಟೇಶನ್ ಮಾಡಿ ಅದಕ್ಕೊಂಚೂರು ಬೆಲ್ಲ ಹಾಕಿ ತಯಾರಿಸೋದು ಈ‌ ಜೀವಾಮೃತ. ಇದು ಗಿಡಗಳು ಚೆನ್ನಾಗಿ ಬೆಳೆಯೋಕೂ ಕಾರಣವಾಗ್ತದೆ. ಜೊತೆಗೊಂಚೂರು ಬಯೋ ಆಕ್ಟಿವಿಟಿ ಹೊಂದಿರುವ ಎರೆಹುಳು ವಾಸಿಸುವ ಮಣ್ಣಿನ ಭಾಗವನ್ನು ಈ ಜೀವಾಮೃತಕ್ಕೆ ಬೆರೆಸಲಾಗಿತ್ತು. ಅದರಲ್ಲಿರೋ ಟ್ರೈಕೋಡರ್ಮಾ ಫಂಗಸ್ ರೋಗಕಾರಕ ಫಿಲೋಸ್ಟಿಕಾ ಅರೇಕಾವನ್ನು ಆಕ್ರಮಿಸಿಕೊಂಡು ಎಲೆ ಚುಕ್ಕಿರೋಗವನ್ನು ಕಡಿಮೆ ಮಾಡಿತು ಎನ್ನುತ್ತಾರೆ ರಾಮಣ್ಣ.


    ಇದನ್ನೂ ಓದಿ: Haliyal Wrestlers: ಕುಸ್ತಿಪಟುಗಳ ಕಾರ್ಖಾನೆ ಹಳಿಯಾಳ; ನೀವೂ ಇಲ್ಲಿ ಕುಸ್ತಿ ಕಲಿಯಬಹುದು ನೋಡಿ!


    ಹೀಗೆ ಕಡಿಮೆ ಬೆಲೆಯಲ್ಲಿ ಕಡಿಮೆ ಸಮಯ
    ಹೀಗೆ ಕಡಿಮೆ ಬೆಲೆಯಲ್ಲಿ ಕಡಿಮೆ ಸಮಯದಲ್ಲಿ ರಾಮಣ್ಣನವ್ರು ಪರಿಣಾಮಕಾರಿ ಪರಿಹಾರವನ್ನು ಕಂಡುಕೊಂಡಿದ್ದಾರೆ. ಜೊತೆಗೆ ಸ್ವಾವಲಂಬಿ ಕೃಷಿ ಪದ್ಧತಿ ಅಳವಡಿಸಿಕೊಂಡ ಅವರು ನಿಜಕ್ಕೂ ಮಾದರಿಯಾಗಿದ್ದಾರೆ.


    ರಾಮಣ್ಣನವರನ್ನು ನೀವೂ ಸಂಪರ್ಕಿಸೋಕೆ ಈ ನಂಬರ್‌ಗೆ ಡೈಲ್ ಮಾಡಿ :+91 94811 31451


    ವರದಿ: ಎ.ಬಿ.ನಿಖಿಲ್, ಮುಂಡಗೋಡು

    Published by:ಗುರುಗಣೇಶ ಡಬ್ಗುಳಿ
    First published: