Uttara Kannada: ಅಡಿಕೆ ಕೊಳೆರೋಗಕ್ಕೆ ಮನೆಮದ್ದು! ಇಲ್ಲಿದೆ ನೋಡಿ ಸಿಂಪಲ್ ಟ್ರಿಕ್

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಅಡಿಕೆ ಕೊಳೆ ರೋಗ ಅನ್ನೋದು ಎಲ್ಲ ರೈತರ ಚಿಂತೆ. ಎಷ್ಟೇ ಆಧುನಿಕ ಕ್ರಿಮಿನಾಶಕಗಳನ್ನು ಸಿಂಪಡಿಸಿದರೂ ಅಪಾಯ ತಪ್ಪಿದ್ದಲ್ಲ. ಆದರೆ, ಶಿರಸಿಯ ರೈತರೊಬ್ಬರು ಕಂಡು ಹಿಡಿದ ಸಾವಯವ ಕ್ರಿಮಿನಾಶಕ ಒಳ್ಳೇ ರಿಸಲ್ಟ್ ನೀಡಿದೆ.

  • Share this:

ಉತ್ತರ ಕನ್ನಡ: ಅಡಿಕೆ ಬೆಳೆಯೋರಿಗೆ ಮನೆ ಮಂದಿಗಿಂತ ಮರಗಳದ್ದೇ ಚಿಂತೆ. ಫಲ ನೀಡುವ ಹೊತ್ತಿಗೆ ಇನ್ನೆಲ್ಲಿ ಕೊಳೆ ರೋಗಗಳು ಬಂದು ಶ್ರಮ ವ್ಯರ್ಥವಾಗುತ್ತದೋ ಅನ್ನೋ ಆತಂಕ. ಇದು ಸಾಮಾನ್ಯವಾಗಿ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಅಡಿಕೆ ಬೆಳೆಯುವ ಕೃಷಿಕರ ಗೋಳು. ಯಾವುದೇ ಕ್ರಿಮಿನಾಶಕಗಳಿಗೂ ಜಗ್ಗದ ಕೀಟಭಾದೆಗಳು ರೈತರ ಪರಿಶ್ರಮವನ್ನ ಬಹುತೇಕ ನುಂಗಿ ನೀರು ಕುಡಿಯುತ್ತದೆ. ಮಾತ್ರವಲ್ಲದೇ ರಾಸಾಯನಿಕ ತಂದು ಸಿಂಪಡಿಸಿದ್ರೆ ಅದ್ರಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿ. ಈ ಎಲ್ಲ ನಿರಾಶೆಗಳ ಮಧ್ಯೆ ಉತ್ತರ ಕನ್ನಡ ಜಿಲ್ಲೆಯ (Uttara Kannada) ಶಿರಸಿಯ ರೈತರೊಬ್ಬರು (Sirsi Farmer) ಕೊನೆಗೂ ಕೊಳೆರೋಗಕ್ಕೆ ಔಷಧ ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.. ಅದುವೇ ಸಾವಯವ ದ್ರಾವಣ.


ಸಾವಯವದ ಮೊರೆ
ಹೌದು, ಇವರು ನೀರ್ನಳ್ಳಿಯ ರಾಮಚಂದ್ರ ಹೆಗಡೆ. ಅಡಿಕೆ ತೋಟಗಳನ್ನ ನಡೆಸುತ್ತಿರುವವರು, 2019ರಲ್ಲಿ ಅಡಿಕೆ ಮರಗಳಿಗೆ ಬೊರ್ಡೋ ಸಿಂಪಡಿಸಿದ್ದರು. ಆದ್ರೆ ಇದ್ರಿಂದಾಗಿ ರಾಮಚಂದ್ರ ಹೆಗಡೆ ಅವ್ರ ತೋಟದಲ್ಲಿದ್ದ 60ಕ್ಕೂ ಹೆಚ್ಚು ಸಸಿಗಳು ನಾಶವಾಗಿದ್ದವು. ಇದ್ರಿಂದ ಕಂಗಾಲಾಗಿದ್ದ ಹೆಗಡೆ ಅವರು, ಆದರೆ ನಿರಾಶರಾಗದೇ ಹೊಸ ದಾರಿಯನ್ನ ಹುಡುಕಿದರು. ಹೀಗೆ ಸಾವಯವ ಕ್ರಿಮಿನಾಶಕ ತಯಾರು ಮಾಡಲು ಮುಂದಾದರು.


ಯಾವುದು ಈ ದ್ರಾವಣ?
ಜೀವಾಮೃತ, ಬಯೋಮಾಸ್ಕ್, ಮಜ್ಜಿಗೆ ಹುಳಿ ಎಂಬ ಮೂರು ದ್ರಾವಣವನ್ನು ಮೊದಲು ಇವರು ಪ್ರಾಯೋಗಿಕವಾಗಿ ಅಡಿಕೆ ಬೆಳೆಗಳಿಗೆ ಸಿಂಪಡಿಸಿ ಆ ಮೂಲಕ ಯಶಸ್ಸು ಪಡೆಯುತ್ತಿದ್ದಂತೆ ಮಾರಕವಾದ ರಾಸಾಯನಿಕ ತೊರೆದು ಸಾವಯವ ಕ್ರಿಮಿನಾಶಕದ ಮೊರೆ ಹೋದರು.


ಇದನ್ನೂ ಓದಿ: Gadi Mari: ಈ ದೇವಿಗೆ ರಸ್ತೆಬದಿಯೇ ಗತಿ! ಊರಿಂದೂರಿಗೆ ಕಸ ಸಾಗಿಸುವ ದೇವರು!


ದ್ರಾವಣ ತಯಾರಿ ಹೀಗೆ
ಜೀವಾಮೃತ, ಬಯೋಮಾಸ್ಕ್, ಮಜ್ಜಿಗೆ ಹುಳಿಯೇ ಇವರ ಪರಿಸರ ಪ್ರೇಮಿ ಕ್ರಿಮಿನಾಶಕ. ಇವುಗಳಲ್ಲಿ ಮಜ್ಜಿಗೆ ಹುಳಿಯನ್ನು ಹತ್ತು ದಿನಗಳ ಕಾಲ ಫರ್ಮಂಟೇಶನ್ ಮಾಡಿ ಬಳಸಿದ್ರೆ, ನೀರು, ಸಗಣಿ, ಗೋಮೂತ್ರ, ದ್ವಿದಳ ಧಾನ್ಯ ಹಾಕಿ ಫರ್ಮಂಟೇಶನ್ ಮಾಡಿ "ಜೀವಾಮೃತ" ಮಾಡುತ್ತಾರೆ. ಇನ್ನು, ಬೆಲ್ಲ, ಬಿದ್ದ ಅಡಿಕೆ ಹಾಗೂ ನೀರನ್ನು ಸೇರಿಸಿ ಫರ್ಮಂಟೇಶನ್ ಮಾಡಿದರೆ ಅದುವೇ "ಬಯೋಮಾಸ್ಕ್" ಆಗುತ್ತದೆ. ಹೀಗೆ ಸಾವಯವ ಕ್ರಿಮಿನಾಶಕ ಬಳಸೋದರಿಂದ ಇವರ ತೋಟದಲ್ಲಿನ ಅಡಿಕೆ ಇಳುವರಿಯೂ ಹೆಚ್ಚಾಗಿದೆ. ಜೊತೆಗೆ ಕೊಳೆ, ಕಳೆ ಬಾಧೆಗಳೂ ಮಾಯವಾಗಿದೆ.


ಇದನ್ನೂ ಓದಿ: PM Narendra Modi Birthday: ವಾವ್! ಇದು ಮೋದಿ ರಂಗೋಲಿ! ಪ್ರಧಾನಿ ಹುಟ್ಟಿದ್ದು ಹಬ್ಬವಾಗಿದ್ದು ಹೀಗೆ


ಹೆಗ್ಡೆಯವರ ಸಾಧನೆ
ವಯಸ್ಸು 60 ದಾಟಿದ್ದರೂ ಕೃಷಿಯಲ್ಲಿ ವೈಜ್ಞಾನಿಕತೆ ಬಳಸುವ ಮೂಲಕವೂ ರಾಮಚಂದ್ರೆ ಹೆಗಡೆ ಅವರು ಸುದ್ದಿಯಲ್ಲಿರುತ್ತಾರೆ. ಹೀಗೆ ಕೃಷಿಯಲ್ಲಿ ಸದಾ ಬದಲಾವಣೆ ಜೊತೆಗೆ ಕೈಯಲ್ಲಿ ಬೆಣ್ಣೆ ಹಿಡಿದು ತುಪ್ಪಕ್ಕಾಗಿ ಊರೂರು ಅಲೆಯೋದ್ ಸರಿಯಲ್ಲ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ.


ವರದಿ: ಎ.ಬಿ.ನಿಖಿಲ್, ಮುಂಡಗೋಡ್

First published: