• Home
  • »
  • News
  • »
  • uttara-kannada
  • »
  • Areca nut Leaf Spot Disease: ಅಡಿಕೆ ಎಲೆ ಚುಕ್ಕೆ ರೋಗಕ್ಕೆ ಔಷಧ; ಇಲ್ಲಿದೆ ಮಹತ್ವದ ಮಾಹಿತಿ

Areca nut Leaf Spot Disease: ಅಡಿಕೆ ಎಲೆ ಚುಕ್ಕೆ ರೋಗಕ್ಕೆ ಔಷಧ; ಇಲ್ಲಿದೆ ಮಹತ್ವದ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ರೋಗದಿಂದ ಅಡಿಕೆ ಸೋಗೆಗಳು ಸೊರಗಿ, ಒಣಗಿ ಅಡಕೆ ಮರ ಬಲಹೀನಗೊಳ್ಳುತ್ತಾ ಹೋಗುತ್ತದೆ. ಅಡಕೆ ಇಳುವರಿ ಕಡಿಮೆಯಾಗುತ್ತದೆ. 

  • News18 Kannada
  • Last Updated :
  • Uttara Kannada, India
  • Share this:

    ಶಿರಸಿ: ಮಲೆನಾಡ ಪ್ರಮುಖ ಬೆಳೆ ಅಡಿಕೆ. ಅಡಿಕೆ ಇಲ್ಲಿಯ ಜನರ ಜೀವನಾಡಿಯೇ ಆಗಿದೆ, ಆದರೆ ಹವಾಮಾನ ವೈಪರೀತ್ಯದಿಂದ ಅಡಿಕೆಗೆ ಎಲೆ ಚುಕ್ಕೆ ರೋಗ (Areca nut Leaf Spot Disease) ತಗುಲುತ್ತಿದ್ದು ಬೆಳೆಗಾರರು ಕಂಗಾಲಾಗಿದ್ದಾರೆ. ಕೊಲ್ಲೇಟೋಟ್ರೈಕಮ್ ಗ್ಲಿಯೋಸ್ಪೊರೈಡ್ಸ್ ಹಾಗೂ ಫಿಲೋಸ್ಟಿಕಾ ಅರೇಕಾ ಎಂಬ ಶಿಲೀಂಧ್ರಗಳು ಅಡಿಕೆಯ ಗರಿಗಳ ಮೇಲೆ ಬೆಳೆಯುವ ಕಾರಣಕ್ಕಾಗಿ ಈ ರೋಗ ಉಂಟಾಗುತ್ತದೆ ಎಂದು ತಜ್ಞರ ಅಭಿಪ್ರಾಯ. ಬಿದ್ದ ಗರಿಗಳ ಮೇಲೆ ಸಂತಾನೋತ್ಪತ್ತಿ ಮಾಡಿ ಗಾಳಿಯಿಂದ ಹರಡುವ ಈ ಶಿಲೀಂಧ್ರಗಳು ಇಳುವರಿಗೆ ಮಾರಕವಾಗಿ ಪರಿಣಮಿಸುತ್ತದೆ ಹಾಗೂ ಅಡಿಕೆ ಮರಗಳ ಜೀವಿತಾವಧಿಯನ್ನು ಹಾಳು ಮಾಡುತ್ತದೆ. ಇಂತಹ ಅಡಿಕೆ ಎಲೆ ಚುಕ್ಕೆ ರೋಗಕ್ಕೆ ಔಷಧದ ಕುರಿತು ಮಹತ್ವದ ಮಾಹಿತಿ ಇಲ್ಲಿದೆ.


    ಎಲ್ಲೆಲ್ಲಿ ರೋಗ?
    ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ತೋಟಗಳಲ್ಲಿ ಈ ರೋಗವು ಅಧಿಕವಾಗಿ ಕಾಣಿಸಿಕೊಂಡಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ಧಾಪುರ,ಯಲ್ಲಾಪುರ, ಮುಂಡಗೋಡ, ಹೊನ್ನಾವರ, ಭಟ್ಕಳ ಭಾಗದಲ್ಲಿ ಈ ಸಮಸ್ಯೆ ಅಷ್ಟು ತೀವ್ರವಾಗಿ ಕಾಣಿಸಿಕೊಂಡಿಲ್ಲ.


    ಕರ್ನಾಟಕದಲ್ಲಿ 35,000 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆಯನ್ನು ಬೆಳೆಯುತ್ತಾರೆ. ಅದರಲ್ಲಿ 3500 ಹೆಕ್ಟೇರ್ ಪ್ರದೇಶ ರೋಗಕ್ಕೆ ತುತ್ತಾಗಿದೆ ಎಂದು ತೋಟಗಾರಿಕಾ ಇಲಾಖೆಯ ಮಾಹಿತಿ ನೀಡಿದೆ.


    ಅಡಕೆ ಎಲೆ ಚುಕ್ಕಿ ರೋಗ ಉಪಶಮನ ಹೇಗೆ?
    ಈ ಕುರಿತು ವಿಶೇಷವಾಗಿ ತೋಟಗಾರಿಕಾ ಇಲಾಖೆಯು ಮುತುವರ್ಜಿ ವಹಿಸಿದ್ದು ಓರ್ವ ರೈತನಿಗೆ ಒಂದು ಹೆಕ್ಟೇರ್​ಗೆ ಉಪಯೋಗವಾಗುವಷ್ಟು ಔಷಧಿಯನ್ನು ಒದಗಿಸುತ್ತಿದೆ.
    ಮೊದಲನೇ ಕಂತಿನಲ್ಲಿ 20 ಲಕ್ಷ ಯುನಿಟ್​ನಷ್ಟು ವಿತರಣೆಗೆ ಮುಂದಾಗಿದ್ದು, ಈಗಾಗಲೇ 90 ಪ್ರತಿಶತ ರೈತರಿಗೆ ಔಷಧಿಯು ತಲುಪಿದೆ. ಉತ್ತರ ಕನ್ನಡಕ್ಕೆ 63 ಲಕ್ಷ ಯುನಿಟ್​ನಷ್ಟು ಔಷಧಿಯನ್ನು ನೀಡಲು ಸೂಚಿಸಲಾಗಿದೆ.


    ಇದನ್ನೂ ಓದಿ: KSRTC ಬಸ್​ಗಳಲ್ಲಿ ಇಷ್ಟು ಕೆಜಿ ಲಗೇಜ್​ ಸಾಗಣೆ ಉಚಿತ! ನಾಯಿ ಸಾಗಣೆಗೆ ಶುಲ್ಕವೆಷ್ಟು?


    ಔಷಧಿ ಪಡೆಯುವುದು ಹೇಗೆ?
    ನೀವು ಅಡಿಕೆ ಬೆಳೆಗಾರರಾಗಿದ್ದರೆ ಪಹಣಿ ಪತ್ರದ ಪ್ರತಿಯನ್ನು ಹತ್ತಿರದ ತೋಟಗಾರಿಕಾ ಇಲಾಖೆಗೆ ನೀಡಿ ಔಷಧಿ ಪಡೆಯಬಹುದು ಎಂದು ತೋಟಗಾರಿಕಾ ಇಲಾಖೆಯ ಶಿರಸಿ ವಿಭಾಗದ ಉಪ ನಿರ್ದೇಶಕ ಸತೀಶ್ ಅವರು ತಿಳಿಸಿದ್ದಾರೆ.


    ಇದನ್ನೂ ಓದಿ: Horanadu Annapoorneshwari: ಅಡಿಕೆ ಎಲೆ ಚುಕ್ಕಿ ರೋಗ ನಿವಾರಣೆಗೆ ಹೊರನಾಡು ಅನ್ನಪೂರ್ಣೇಶ್ವರಿ ಮೊರೆ!


    ಏನಿದು ಅಡಕೆ ಎಲೆ ಚುಕ್ಕಿ ರೋಗ?
    ಅಡಿಕೆ ಎಲೆ ಚುಕ್ಕೆ ರೋಗಕ್ಕೆ ತುತ್ತಾದ ಮರಗಳ ಸೋಗೆಗಳ ಮೇಲ್ಭಾಗದಲ್ಲಿ ಹಳದಿ ಮತ್ತು ಕಪ್ಪು  ಚುಕ್ಕೆ ಹುಟ್ಟಿಕೊಳ್ಳುತ್ತವೆ. ಈ ಚಿಕ್ಕ ಚಿಕ್ಕ ಚುಕ್ಕೆಗಳು ಒಂದಕ್ಕೊಂದು ಕೂಡಿಕೊಳ್ಳುತ್ತಾ ಇಡೀ ಅಡಕೆ ಮರದ ಸೋಗೆಗಳಿಗೆ ವ್ಯಾಪಿಸುತ್ತವೆ. ಇದೇ ಅಡಕೆ ಮರದ ಅವನತಿಗೆ ಕಾರಣವಾಗುತ್ತದೆ. ಅಡಿಕೆ ಸೋಗೆಗಳು ಸೊರಗಿ, ಒಣಗಿ ಅಡಕೆ ಮರ ಬಲಹೀನಗೊಳ್ಳುತ್ತಾ ಹೋಗುತ್ತದೆ. ಅಡಕೆ ಇಳುವರಿ ಕಡಿಮೆಯಾಗುತ್ತದೆ. 

    Published by:ಗುರುಗಣೇಶ ಡಬ್ಗುಳಿ
    First published: