• Home
 • »
 • News
 • »
 • uttara-kannada
 • »
 • Apsarakonda: ಇಲ್ಲೇ ಅಪ್ಸರೆಯರು ಸ್ನಾನ ಮಾಡ್ತಾರಂತೆ! ಉತ್ತರ ಕನ್ನಡದ ಬೊಂಬಾಟ್ ಅಪ್ಸರಕೊಂಡ

Apsarakonda: ಇಲ್ಲೇ ಅಪ್ಸರೆಯರು ಸ್ನಾನ ಮಾಡ್ತಾರಂತೆ! ಉತ್ತರ ಕನ್ನಡದ ಬೊಂಬಾಟ್ ಅಪ್ಸರಕೊಂಡ

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಗಣೇಶ ಪಾರ್ವತಿಯ ತೊಡೆ ಮೇಲೆ ಇರುವ ಏಕೈಕ ಸನ್ನಿಧಾನ ಇದೊಂದೇ ಎಂದೇ ಹೇಳಲಾಗುತ್ತಿದೆ. ಇಡೀ ದೇಶದಲ್ಲಿ ಬೇರೆಲ್ಲೂ ಈ ರೀತಿಯ ವಿಗ್ರಹ ಕಾಣಸಿಗದು.

 • News18 Kannada
 • Last Updated :
 • Uttara Kannada, India
 • Share this:

  ಕಾರವಾರ: ಬೀಚ್, ದೇಗುಲ, ಫಾಲ್ಸ್, ಚಾರಣ ಇದೆಲ್ಲವೂ ಒಂದೇ ಪ್ಲೇಸ್​ನಲ್ಲಿದ್ರೆ? ಹೀಗಿದ್ರೆ, ಪೈಸಾ ವಸೂಲ್ ಟೂರ್ ಪ್ಯಾಕೇಜ್ ಆಗೋದಂತೂ ಪಕ್ಕಾ. ಇಲ್ನೋಡಿ ಬೀಚೂ ಇದೆ, ಕೈ ಮುಗಿಯೋಕೆ ಟೆಂಪಲ್ಲೂ ಇದೆ. ಚಾರಣಕ್ಕೆ ಹೋಗೋಕೆ ಬೆಟ್ಟವೂ ಇದೆ. ಆಟ ಆಡೋಕೆ ಜಲಪಾತವೂ ಇದೆ. ಇದಂತೂ ಪಕ್ಕಾ ಭೂಲೋಕದ ಸ್ವರ್ಗದಂತಿದೆ. ಹಾಗಿದ್ರೆ ಇದೆಲ್ಲ ಎಲ್ಲಿದೆ ಅನ್ನೋದಲ್ವ ನಿಮ್ ಪ್ರಶ್ನೆ? ಹೌದು, ಇದುವೇ ಉತ್ತರ ಕನ್ನಡ ಜಿಲ್ಲೆಯ (Uttara Kannada) ಹೊನ್ನಾವರ ತಾಲೂಕಿನ (Honnavar) ಅಪ್ಸರಕೊಂಡ. ಅಪ್ಸರಕೊಂಡ (Apsarakonda) ಹೆಸರಿಗೆ ತಕ್ಕಂತೆ ಅಪ್ಸರೆಯರು ಇದ್ದ ಕ್ಷೇತ್ರವಿದು. ಇಲ್ಲಿ ದೇವಸ್ಥಾನ, ವ್ಯೂ ಪಾಯಿಂಟ್, ಚಾರಣ, ಬೀಚ್, ಫಾಲ್ಸ್ ಎಲ್ಲವೂ ಇದೆ.


  ಹೀಗಾಗಿಯೇ ಸ್ವರ್ಗಲೋಕದ ಅಪ್ಸರೆಯರು ಭೂಲೋಕದ ಈ ಸ್ವರ್ಗದಂತಿರುವ ಈ ಸ್ಥಳವನ್ನು ಇಷ್ಟಪಟ್ಟಿದ್ದರಂತೆ. ಇಲ್ಲಿನ ಪ್ರಕೃತಿಗೆ ಮನ ಸೋತಿದ್ದ ಅವರು ಉಮಾಂಬಾ ಗಣೇಶ ಹಾಗೂ ಉಗ್ರ ನರಸಿಂಹನನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸ್ತಿದ್ದರಂತೆ. ಅದಕ್ಕಾಗಿ ತಾವೇ ಜಲಪಾತವನ್ನು ಸೃಷ್ಟಿಸಿದ್ದರಂತೆ.


  ಅದೃಶ್ಯವಾಗಿ ಬಂದು ಸ್ನಾನ ಮಾಡೋ ಅಪ್ಸರೆಯರು!
  ಇಂದಿಗೂ ಅದೃಶ್ಯವಾಗಿ ಇಲ್ಲಿಗೆ ಬಂದು ಅಪ್ಸರೆಯರು ಸ್ನಾನ ಮುಗಿಸ್ತಾರೆ ಅನ್ನೋ ನಂಬಿಕೆಯಿದೆ. ವಿಶೇಷವೆಂದರೆ, ಗಣೇಶ ಪಾರ್ವತಿಯ ತೊಡೆ ಮೇಲೆ ಇರುವ ಏಕೈಕ ಸನ್ನಿಧಾನ ಇದೊಂದೇ ಎಂದೇ ಹೇಳಲಾಗುತ್ತಿದೆ. ಇಡೀ ದೇಶದಲ್ಲಿ ಬೇರೆಲ್ಲೂ ಈ ರೀತಿಯ ವಿಗ್ರಹ ಕಾಣಸಿಗದು.


  ದೇವಸ್ಥಾನ, ಮಠ ಎಲ್ಲವೂ ಇದೆ
  ಇನ್ನೂ ಉಗ್ರ ನೃಸಿಂಹ ಸ್ವಾಮಿಯು ಇದ್ದು, ತ್ರಿಕಾಲ ಪೂಜೆ ನಡೆಯುತ್ತದೆ. ಅಷ್ಟೇ ಅಲ್ಲ, ದೇವಸ್ಥಾನದ ಜೊತೆಯೇ ಆದಿ ಶಂಕರಾಚಾರ್ಯರ ಪರಂಪರೆಯ ಮಠವೂ ಇದ್ದು ಹೋಮ ಹವನಗಳು ಜರುಗುತ್ತವೆ.


  ಸೂರ್ಯೋದಯ-ಸೂರ್ಯಾಸ್ತದ ಅದ್ಭುತ ಅನುಭವ
  ಅಪ್ಸರಕೊಂಡದ ಈ ದೇಗುಲವು ಬಂಡೆಯನ್ನು ಸೀಳಿ ರೂಪುಗೊಂಡಿದೆ. ಬಂಡೆಯ ಕೆಳಗೆ ದೇವಾಲಯ ಇದೆ. ಬಂಡೆ ಹಿಂದೆ ಸುಮಾರು 50 ಅಡಿ ಎತ್ತರದಿಂದ ಧುಮುಕುವ ಅಪ್ಸರಕೊಂಡ ಜಲಪಾತವಿದೆ.


  ಇದನ್ನೂ ಓದಿ: Uttara Kannada: ಗ್ರಹಣದ ನಂತರದ ಆಕಾಶ ಹೀಗಿರುತ್ತೆ! ಶಿರಸಿಯ ಆಗಸ 360 ತಂಡದಿಂದ ಹೊಸ ಪ್ರಯತ್ನ!


  ಇದೊಂತರ ನೈಸರ್ಗಿಕ ಸ್ವಿಮ್ಮಿಂಗ್ ಪೂಲ್​​ನಂತಿದ್ದು, ಯಾರು ಬೇಕಿದ್ರೂ ನೀರಿಗೆ ಇಳಿಯಬಹುದು. ಈ ಬಂಡೆಗಳಲ್ಲೇ ಪಾಂಡವರು ಇದ್ದ ಗುಹೆಯೂ ಇದೆ. ಇನ್ನೂ ಜಲಪಾತದ ಇಳಿಜಾರಿನಷ್ಟೇ ಮೇಲುಗಡೆ ಬೆಟ್ಟ ಹತ್ತಬೇಕು. ಅದಕ್ಕೆ ಮೆಟ್ಟಲುಗಳೂ ಇವೆ. ಹಾಗೆ ಚೂರು ಕಡಿದಾದ ದಾರಿಯನ್ನು ದಾಟಿದರೆ ಅದ್ಭುತವೆನಿಸುವ ವಿಹಂಗಮ ನೋಟ. ಬೆಟ್ಟದಲ್ಲಿ ನಿಂತರೆ ಅರಬ್ಬೀ ಸಮುದ್ರದದ ಜೊತೆಗೆ ಸೂರ್ಯೋದಯ-ಸೂರ್ಯಾಸ್ತದ ದರ್ಶನಗಳನ್ನೂ ಪಡೆಯಬಹುದಾದ ಅದ್ಭುತ ಅನುಭವ.


  ಇದನ್ನೂ ಓದಿ: Hanuman Tree: ಮರದಲ್ಲಿ ಮೂಡಿದ ಮಾರುತಿ! ಉತ್ತರ ಕನ್ನಡದ ವಿಡಿಯೋ ವೈರಲ್


  Apsarakonda
  ಅಪ್ಸರಕೊಂಡಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


  ಭಾರತದ ಅತೀ ಕ್ಲೀನ್ ಬೀಚ್​!
  ಇಲ್ಲಿಂದ ಎರಡು ಕಿ.ಮೀ ನಡೆದು ಸಾಗಿದರೆ, ಭಾರತದ ಅತೀ ಕ್ಲೀನ್ ಬೀಚ್​ಗಳಲ್ಲಿ ಒಂದಾದ ಕಾಸರಕೋಡು ಬೀಚ್ ಅನ್ನೂ ಕಣ್ತುಂಬಿಕೊಳ್ಳಬಹುದು. ಹೊನ್ನಾವರಕ್ಕೆ ಬಂದು ಲೋಕಲ್ ಕುಮಟಾ-ಭಟ್ಕಳ ಬಸ್ಸಿನಲ್ಲಿ ಅಪ್ಸರಕೊಂಡ ಸ್ಟಾಪಿಗೆ ಇಳಿದು ಅಲ್ಲಿಂದ ಎರಡು ಕಿ.ಮೀ ನಡೆದು ಸಾಗಿದರೆ ಈ ಸ್ಥಳದ ದರ್ಶನವಾಗುತ್ತದೆ. ಒಟ್ಟಿನಲ್ಲಿ ಅಪ್ಸರಕೊಂಡ ಎಂದರೆ ಧರೆಗಿಳಿದ ಸ್ವರ್ಗದಂತಹ ಸ್ಥಳ, ಒಂದೇ ಟೂರ್ ನಲ್ಲಿ ಪೈಸಾ ವಸೂಲ್ ಮಾಡಬಹುದಾದ ಟೂರಿಸಂ ಪ್ಲೇಸ್ ಕೂಡಾ.


  ವರದಿ: ಎ.ಬಿ.ನಿಖಿಲ್, ಮುಂಡಗೋಡ್

  Published by:ಗುರುಗಣೇಶ ಡಬ್ಗುಳಿ
  First published: