ಕಾರವಾರ: ವೃತ್ತಿಪರ ಕೋರ್ಸುಗಳಿಗೆ ಆದ್ಯತೆ ಹೆಚ್ಚಾಗಿದೆ. ಈಗತಾನೇ SSLC ಎಕ್ಸಾಮ್ ಮುಗಿಸಿ ವಿದ್ಯಾರ್ಥಿಗಳು ಮುಂದೇನು? ಎಂಬ ವಿಶ್ಲೇಷಣೆಯಲ್ಲಿದ್ದಾರೆ. ಅದಕ್ಕೆ ಸರಿಯಾಗಿ ಕಾರವಾರದ (Karwar) ಪಾಲಿಟೆಕ್ನಿಕ್ ಕಾಲೇಜು ಆಫ್ಲೈನ್ನಲ್ಲಿ ಆಕಾಂಕ್ಷಿಗಳಿಗೆ (Polytechnic College Karwar) ಪ್ರವೇಶಕ್ಕೆ ಆಹ್ವಾನಕ್ಕೆ ಅರ್ಜಿ ಸಲ್ಲಿಸಲು ಪ್ರಕಟಣೆ ಹೊರಡಿಸಿದೆ.
ಪ್ರಸಕ್ತ ಸಾಲಿನ 2023-24 ರ ಶೈಕ್ಷಣಿಕ ವರ್ಷದ ಪ್ರಥಮ ಸೆಮಿಸ್ಟರ್ನ ಡಿಪ್ಲೊಮಾ ಕಲಿಕೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಕಾರವಾರ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಅರ್ಜಿ ಸ್ವೀಕರಿಸಲಾಗುತ್ತದೆ.
ಕಾಲೇಜಿನ ಹೆಸರು | ಕಾರವಾರದ ಪಾಲಿಟೆಕ್ನಿಕ್ ಕಾಲೇಜು |
ಅರ್ಜಿ ಸಲ್ಲಿಸಲು ಇರುವ ನಿಯಮಾವಳಿಗಳು | SSLCಯಲ್ಲಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ 35% ಅಂಕ |
ಕೊನೆಯ ದಿನಾಂಕ | ಮೇ 31 |
ಸಂಪರ್ಕ ಸಂಖ್ಯೆ | 08383-226343 |
ಹೆಚ್ಚಿನ ಮಾಹಿತಿಗಾಗಿ ವಿಳಾಸ | Government Polytechnic KarwarMG Rd, Kodibag, Karwar, Karnataka |
ಮೇ 31 ರವರೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ
ಎಲ್ಲಾ ಸೀಟುಗಳು ಭರ್ತಿಯಾದಲ್ಲಿ ಯಾವುದೇ ಶಿಫಾರಸ್ಸಿನ ಮೇರೆಗೆ ಅರ್ಜಿ ಸ್ವೀಕರಿಸಲಾಗುವುದಿಲ್ಲ. ಸ್ಪಾಟ್ ಅಡ್ಮಿಷನ್ ರೂಪದಲ್ಲಿ ವಿದ್ಯಾರ್ಥಿಗಳ ಭರ್ತಿ ಆಗಲಿದೆ.
ಇದನ್ನೂ ಓದಿ: Yakshagana In America: ಅಮೆರಿಕಾ ನೆಲದಲ್ಲಿ ಯಕ್ಷ ಕಲೆ ಉಣಬಡಿಸಿದ ಶಿರಸಿ ಮಹಿಳೆ!
ಲಭ್ಯವಿರುವ ಕೋರ್ಸುಗಳ ವಿವರ
ಆಟೋಮೊಬೈಲ್ ಇಂಜಿನಿಯರಿಂಗ್
ಸಿವಿಲ್ ಇಂಜಿನಿಯರಿಂಗ್
ಕಮರ್ಷಿಯಲ್ ಪ್ರಾಕ್ಟಿಸ್
ಕಂಪ್ಯೂಟರ್ ಸೈನ್ಸ್ ಎಂಡ್ ಇಂಜಿನಿಯರಿಂಗ್
ಎಲೆಕ್ಟ್ರಿಕಲ್ ಎಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್
ಮೆಕ್ಯಾನಿಕಲ್ ಇಂಜಿನಿಯರಿಂಗ್ ಇಷ್ಟು ಕೋರ್ಸುಗಳಿಗೆ ಆಹ್ವಾನ ಕರೆಯಲಾಗಿದೆ. ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂರವಾಣಿ ಸಂಖ್ಯೆಯಾದ 08383-226343 ಕರೆ ಮಾಡಬಹುದು.
ಇದನ್ನೂ ಓದಿ: Jackfruit Recipe: ಶಿರಸಿ ಸ್ಪೆಷಲ್ ಹಲಸಿನ ಕಾಯಿಯ ಚಕ್ಕೆ ಪೊಳ್ಜ ಮಾಡೋದು ಹೇಗೆ? ರೆಸಿಪಿ ಇಲ್ಲಿದೆ
ಹೆಚ್ಚಿನ ಮಾಹಿತಿಗಾಗಿ ವಿಳಾಸ: Government Polytechnic Karwar
MG Rd, Kodibag, Karwar, Karnataka ಇದು ವಿಳಾಸವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ