ಕಾರವಾರ(ಜ.05): ನೋಡೋದಕ್ಕೇನೋ ಸೇಮ್ ಟು ಸೇಮ್ ಆ್ಯಪಲ್!. ಗಾತ್ರದಲ್ಲೇನೋ ಕೊಂಚ ವ್ಯತ್ಯಾಸ. ಆದ್ರೆ ಕಾಶ್ಮೀರಿ ಹಣ್ಣಿಗೂ ಈ ಕರಾವಳಿಗೂ ಏನಯ್ಯಾ ಸಂಬಂಧ ಅಂತೀರಾ? ಅದೇ ನೋಡಿ, ಈ ಹಣ್ಣು ಬೆಳೆಯ ಬಗೆಗಿನ ಕ್ಯೂರಿಯಾಸಿಟಿ. ಇದು ಸೇಬಿನಂತೆ ಫಳಫಳನೆ ಹೊಳೆಯುವ ಆ್ಯಪಲ್ ಬೇರ್. ಆದ್ರೆ ಈ ಆ್ಯಪಲ್ ಬೇರ್ ಈಗ ಕರಾವಳಿಯಲ್ಲೂ ಸಖತ್ ಸುದ್ದಿ ಮಾಡ್ತಿದೆ.
ರುಚಿರುಚಿಯಾದ ಈ ಹಣ್ಣನ್ನ ಉತ್ತರ ಕನ್ನಡದ ಬಾರ್ಡೋಲಿಯ ಅಂಕೋಲಾದಲ್ಲಿ ಬೆಳೆಯಲಾಗುತ್ತೆ. ಅಪರೂಪದ ಈ ಹಣ್ಣು ಕರಾವಳಿಯಲ್ಲಿ ಉತ್ತಮ ಫಲ ನೀಡಿದ್ದು ಕಂಡು ಸ್ವತಃ ಅದನ್ನ ನೆಟ್ಟು ಪೋಷಿಸಿದ ಯಜಮಾನನೇ ಅಚ್ಚರಿಯಾಗಿದ್ದಾರೆ. ಅಷ್ಟೇ ಅಲ್ಲ, ಕರಾವಳಿಯ ತೋಟಗಾರಿಕಾ ಕ್ಷೇತ್ರದಲ್ಲಿ ಹೊಸ ಬೆಳೆಯ ಪರಿಚಯವನ್ನೂ ಮಾಡಿದ್ದಾರೆ. ಹೌದು, ಅಂಕೋಲಾ ಪುರಸಭೆ ಅಧ್ಯಕ್ಷೆ ಶಾಂತಲಾ ನಾಡಕರ್ಣಿಯ ಪತಿ ಅರುಣ ನಾಡಕರ್ಣಿಯವರು ತಮ್ಮ ಮನೆಯ ತೋಟದಲ್ಲಿಯೇ ಈ ರೀತಿ ಆ್ಯಪಲ್ ಬೇರ್ ಹಣ್ಣನ್ನು ಬೆಳೆದು ಸಕ್ಸಸ್ ಕಂಡಿದ್ದಾರೆ.
ಇದನ್ನೂ ಓದಿ: Uttara Kannada: ಅಂಕೋಲಾ ತರಕಾರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು! ಬೆಲೆಯೂ ಕಡಿಮೆ
ಅರುಣ ನಾಡಕರ್ಣಿ ಕುಟುಂಬ ರಾಜಕೀಯದಲ್ಲಿದ್ರೂ ಅದರ ಹೊರತಾಗಿ ಕೃಷಿಯಲ್ಲಿಯೂ ಎತ್ತಿದ ಕೈ. ಪಟ್ಟಣ ವ್ಯಾಪ್ತಿಯಲ್ಲಿಯೇ ತಮ್ಮ ಮನೆಯಿದ್ರೂ ಅಲ್ಲಿಯೇ ಹಲವಾರು ಕೃಷಿ ಚಟುವಟಿಕೆಯನ್ನು ನಡೆಸಿ ಸೈ ಎನಿಸಿಕೊಂಡಿದ್ದಾರೆ. ತಮ್ಮ ತೋಟದಲ್ಲಿ ಅನೇಕರು ತೋಟಗಾರಿಕೆ ಬೆಳೆಯನ್ನು ಬೆಳೆಯುವುದರ ಜೊತೆಗೆ ಹಲವಾರು ಆವಿಷ್ಕಾರಗಳಿಗೂ ಕೈ ಹಾಕಿ ಯಶಸ್ಸು ಕಂಡಿದ್ದಾರೆ. ಈಗ ಆ್ಯಪಲ್ ಬೇರ್ ಹಣ್ಣನ್ನು ಕರಾವಳಿಯ ಮಣ್ಣಿನಲ್ಲಿ ಬೆಳೆದು ಮತ್ತೆ ಅಂಕೋಲಾ ತಾಲೂಕು ಸುದ್ದಿಯಾಗಿದೆ.
ಸಾಂಗ್ಲಿಯಿಂದ ಆ್ಯಪಲ್ ಬೇರ್ ಗಿಡಗಳನ್ನು ತಂದು ನೆಡುವ ಮೂಲಕ ಅರುಣ ನಾಡಕರ್ಣಿ ಪ್ರಯೋಗಕ್ಕೆ ಮುಂದಾಗಿದ್ರು. ಎರಡು ವರ್ಷಗಳ ಪರಿಶ್ರಮ ಈಗ ಕೈ ಹಿಡಿದಿದೆ. ಕೇವಲ ಸಾಮಾನ್ಯ ಗೊಬ್ಬರ ಮತ್ತು ನೀರನ್ನೇ ಹಾಕಿ ಸರಿಸುಮಾರು ನೂರಕ್ಕೂ ಹೆಚ್ಚು ಹಣ್ಣುಗಳು ಬೆಳೆದುನಿಂತಿವೆ. ಸಣ್ಣ ರೈತರು ತಮ್ಮ ತೋಟಗಳಲ್ಲೂ ಆ್ಯಪಲ್ ಬೇರ್ ಪ್ರಯೋಗ ಮಾಡಬಹುದು ಅಂತಾರೆ ಅರುಣ್ ನಾಡಕರ್ಣಿ.
ಇದನ್ನೂ ಓದಿ: Uttara Kannada: ಅಂಕೋಲಾ ಪಂಚೆ, ರುಮಾಲಿಗೆ ಹೊರ ರಾಜ್ಯಗಳಲ್ಲೂ ಡಿಮ್ಯಾಂಡ್!
ಒಟ್ಟಿನಲ್ಲಿ ಕೃಷಿ ಮೇಲಿನ ಪ್ರಯೋಗ ಸಕ್ಸಸ್ ಕೊಡುತ್ತಿದ್ದು, ಕರಾವಳಿಯಲ್ಲೂ ಕಾಶ್ಮೀರಿ ಆ್ಯಪಲ್ ನಳ ನಳಿಸುವ ದಿನಗಳು ದೂರವಿಲ್ಲ ಎಂಬ ಲಕ್ಷಣ ಚಿಗುರುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ