• Home
  • »
  • News
  • »
  • uttara-kannada
  • »
  • Uttara Kannada: ಕರೆಲಾಡು ಮತ್ತು ಖಾಜಿಮಿಜಿ! ಬಾಯಲ್ಲಿ ನೀರೂರಿಸೋ ಅಂಕೋಲಾ ಸ್ಪೆಷಲ್ ತಿಂಡಿಗಳು!

Uttara Kannada: ಕರೆಲಾಡು ಮತ್ತು ಖಾಜಿಮಿಜಿ! ಬಾಯಲ್ಲಿ ನೀರೂರಿಸೋ ಅಂಕೋಲಾ ಸ್ಪೆಷಲ್ ತಿಂಡಿಗಳು!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

Ankola Special Food: ಅಂಕೋಲಾ ತಾಲೂಕಿನ ಈ ಎರಡು ಹೋಟೆಲ್​ಗಳಲ್ಲಿ ಸಿಹಿತಿಂಡಿ ತುಂಬಾನೇ ಫೇಮಸ್. ಕರಿದು, ಬೇಯಿಸಿ, ಕುದಿಸಿ ಹಿಂಗೆ ಏನೇನೋ ಮಾಡಿ ಆಗೋದೆ ಈ ಎರಡು ಸ್ವೀಟ್ಸ್. ಆ ಸ್ವೀಟ್ಸ್ ಹೆಸರೇನು? ಹೇಗಿರುತ್ತೆ ಟೇಸ್ಟಿ ಅನ್ನೋದನ್ನು ನಾವ್ ಹೇಳ್ತೀವಿ ನೋಡಿ.

  • News18 Kannada
  • Last Updated :
  • Uttara Kannada, India
  • Share this:

    ಅಂಕೋಲಾ ಅಂದ್ರೆ ಉಪ್ಪು ನೆನಪಾಗುತ್ತೆ. ಆದ್ರೆ ಇಲ್ಲಿನ ಈ ಹೋಟೆಲ್​ಗಳನ್ನ ನೀವೇನಾದ್ರೂ ನೋಡಿದ್ರೆ ಸ್ವೀಟ್ ನೆನಪಾಗುತ್ತೆ ಕಣ್ರೀ.. ಉತ್ತರ ಕನ್ನಡ ಜಿಲ್ಲೆಯ (Uttara Kannada)  ಅಂಕೋಲಾ ತಾಲೂಕಿನ (Ankola Special Food) ಈ ಎರಡು ಹೋಟೆಲ್​ಗಳಲ್ಲಿ ಸಿಹಿತಿಂಡಿ ತುಂಬಾನೇ ಫೇಮಸ್. ಕರಿದು, ಬೇಯಿಸಿ, ಕುದಿಸಿ ಹಿಂಗೆ ಏನೇನೋ ಮಾಡಿ ಆಗೋದೆ ಈ ಎರಡು ಸ್ವೀಟ್ಸ್. ಆ ಸ್ವೀಟ್ಸ್ ಹೆಸರೇನು? ಹೇಗಿರುತ್ತೆ ಟೇಸ್ಟಿ ಅನ್ನೋದನ್ನು ನಾವ್ ಹೇಳ್ತೀವಿ ನೋಡಿ.


    ಹೀಗೆ ಕಡ್ಲೆಹಿಟ್ಟಿನ ಸೇವು ಮತ್ತು ಬೆಲ್ಲದ ಪಾಕದಿಂದ ತಯಾರಾಗೋ ಈ ಲಡ್ಡು ಹೆಸರು ಕರೆಲಾಡು ಅಂತ. ಬೆಲ್ಲದ ಪಾಕದಲ್ಲಿ ಈ ಲಡ್ಡು ತಯಾರಿಸೋದ್ರಿಂದ ಮತ್ತೆ ಇದರ ಸ್ವೀಟ್ ಕೇಳಬೇಕೆ? 120 ವರ್ಷಗಳ ಇತಿಹಾಸ ಹೊಂದಿರೋ ಮಹಾಲೆ ಹೋಟೆಲ್ ಈ ಕರೆಲಾಡಿಗೆ ಫೇಮಸ್. ನಾರಾಯಣ್ ಮಹಾಲೆಯವರು ಕಟ್ಟಿಸಿದ್ದ ಈ ಹೋಟೆಲಿನ ಕರೆಲಾಡಿಗೆ ವಿದೇಶದಲ್ಲೂ ಬೇಡಿಕೆ ಇದೆ.


    ರೆಸಿಪಿ ಇಲ್ಲಿದೆ ನೋಡಿ!
    ಕಡ್ಲೆಹಿಟ್ಟಿನ ಸೇವನ್ನುಅಚ್ಚಿನ ಮೂಲಕ ತಯಾರಿಸಿಕೊಂಡು ಬೆಲ್ಲದ ಪಾಕದಲ್ಲಿ ದುಂಡಗೆ ಕಲಸಿ ಒಣಗಿಸಿಡ್ತಾರೆ. ಪಾಕವು ಸೇವಿಗೆ ಅಂಟಿಕೊಂಡ ಅಂದಾಜಿನ ಮೇಲೆ ಈ ಲಡ್ಡುವನ್ನು ರೆಡಿಮಾಡಿ ಪ್ಯಾಕ್ ಮಾಡ್ತಾರೆ. ಲಡ್ಡು ರೇಟ್ ಎಷ್ಟು ಅಂತ ಕೇಳಿದ್ರೆ ಒಂದಕ್ಕೆ ಆರು ರೂಪಾಯಿ ಮಾತ್ರ.


    ಹೋಟೆಲ್ ಹೆಸ್ರೇ ಇದು ವೆಲ್ ಕಮ್!
    ಅಂಕೋಲೆಯ ಇನ್ನೊಂದು ಹೋಟೆಲ್ ಒಳಹೊಕ್ಕೋಣ, ಈ ಹೋಟೆಲ್ ಹೆಸ್ರೇ ಇದು ವೆಲ್ ಕಮ್ ಅಂತ. ಈ ಹೊಟೇಲ್ ಇಲ್ಲಿ ಕಾಣ್ತಿರೋ ಖಾಜಿಮಜಿಗೆ ಫೇಮಸ್.. ಹೌದು, ಖಾಜಿಮಜಿ ಅಂದ್ರೆ ಬೆಲ್ಲದ ಜೊತೆಗೆ ಶುಂಠಿ ಮಿಶ್ರಣ. ಹೀಗಾಗಿ ಡಯಾಬಿಟೀಸ್ ಪೇಷಂಟ್​ಗಳಿಗೂ ಈ ತಿಂಡಿ ಅಂದ್ರೆ ಬಲು ಇಷ್ಟ.


    ಖಾಜಿಮಜಿ ರೆಸಿಪಿನೂ ತುಂಬಾ ವಿಶಿಷ್ಟ!
    ಮೊದಲಿಗೆ ಕಡಲೆಹಿಟ್ಟಿನ ಉದ್ದನೆಯ ಆಕೃತಿಯನ್ನು ಮಾಡಿಕೊಂಡು ಅದನ್ನು ಒಣಗಿಸಿಕೊಳ್ಳಬೇಕು. ಚೆನ್ನಾಗಿ ಒಣಗಿದ ಗಡುಸಾದ ನಂತರ ಶುಂಠಿಯ ಪೇಸ್ಟ್, ಬೆಲ್ಲದ ಪಾಕ ಹಾಕಿ ನಂತರ ಮೇಲೆ ಏಲಕ್ಕಿ ಪೌಡರ್ ಉದುರಿಸಿ ಎಣ್ಣೆಯಲ್ಲಿ ಕರಿಯಬೇಕು. ಇದು ಸಂಜೆಹೊತ್ತಲ್ಲಿ ತಿನ್ನೋಕೆ ಒಳ್ಳೆ ಸ್ನ್ಯಾಕ್ಸ್ ಆಗಿದ್ರೆ ಕಾರವಾರದ ಬಹುಲು ಕೊಂಕಣಿ ಸಮುದಾಯದ ಜನರಿಗೆ ಇದು ಬೆಳಗಿನ ಅಪಹಾರವಂತೆ!


    ಇದನ್ನೂ ಓದಿ: Arecanut: ಅಡಿಕೆ ಎಲೆ ಚುಕ್ಕೆ ರೋಗಕ್ಕೆ ಔಷಧ! ಉಪಾಯ ಕಂಡುಕೊಂಡ ಉತ್ತರ ಕನ್ನಡದ ಕೃಷಿಕ


    ಯಾರೇ ಈ ತಿಂಡಿಗಳನ್ನು ಮಾಡಬಹುದು. ಆದರೆ ಈ ಹೋಟೆಲ್ಗಳಲ್ಲಿ ಮಾಡೋ ರುಚಿ ಎಲ್ಲೂ ಸಿಗಲ್ಲ ಅಂತಾರೆ. ಅಂದ್ಹಾಗೆ ಅಂಕೋಲೆಯಲ್ಲಿ ಈ ಎರಡೂ ಹೋಟೆಲ್ಗಳು ವರ್ಡ್ ಫೇಮಸ್. ಹಬ್ಬಹರಿದಿನಗಳಲ್ಲಿ ಈ ತಿಂಡಿಗಳನ್ನು ಖರೀದಿಸೋಕೆ ಜನರು ಮುಗಿಬಿಳ್ತಾರೆ. ದೂರದ ಊರಿಂದ ಆರ್ಡರ್ ಮಾಡ್ತಾರೆ. ಹಾಗಿದ್ರೆ ಇನ್ನೇಕೆ ತಡ, ನೀವೂ ಸ್ವೀಟ್ ಪ್ರಿಯರಾಗಿದ್ರೆ ಖಾಜಿಮಜಿ, ಕರೆಲಾಡು ತಿಂದು ಎಂಜಾಯ್ ಮಾಡಿ.


    ಇದನ್ನೂ ಓದಿ: Uttara Kannada: ಕರಾವಳಿಯಲ್ಲಿ ಹೊಂಡೆ ಆಟದ ಸಂಭ್ರಮ! ಈ ಆಟ ಆಡೋದು ಹೀಗೆ!


    ವಿಳಾಸ: ಅಂಕೋಲೆಯ ದುರ್ಗಾ ಮಾತಾಜಿ ಎದುರುಗಡೆಯೇ ಎರಡೂ ಹೋಟೆಲ್ಗಳಿವೆ.
    ನಾರಾಯಣ್ ಮಹಾಲೆ:+91 94832 99255


    ವರದಿ: ಎ.ಬಿ.ನಿಖಿಲ್, ಮುಂಡಗೋಡು

    Published by:ಗುರುಗಣೇಶ ಡಬ್ಗುಳಿ
    First published: