Uttara Kannada: ಅಂಕೋಲಾದ ಮಣ್ಣಿನ ಮಡಿಕೆಗೆ ಗೋವಾದಲ್ಲಿ ಡಿಮ್ಯಾಂಡಪ್ಪೋ ಡಿಮ್ಯಾಂಡ್!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಅಂಕೋಲಾದಲ್ಲಿ ತಯಾರಾಗುವ ಮಣ್ಣಿನ ಮಡಿಕೆ, ಮಣ್ಣಿನ ಒಲೆಗಳಿಗೆ ಗೋವಾದಲ್ಲಿ ಸಖತ್ ಡಿಮ್ಯಾಂಡ್ ಇದೆ. ಅದು ಬೇರೆ ಈ ಸೀಸನ್ ನಲ್ಲಿ ಮಾತ್ರ. ಯಾಕೆ ಗೊತ್ತಾ?

  • News18 Kannada
  • 2-MIN READ
  • Last Updated :
  • Ankola, India
  • Share this:

    ಉತ್ತರ ಕನ್ನಡ: ತರಾತುರಿಯಲ್ಲಿ ತಯಾರಾಗ್ತಿವೆ ಮಣ್ಣಿನ ಮಡಿಕೆಗಳು. ಅಷ್ಟಕ್ಕೂ ಇಷ್ಟೊಂದು ಮಣ್ಣಿನ ಪರಿಕರಗಳಿಗೆ (Ankola Pots) ಮಾರ್ಕೆಟಿಂಗ್ ಇರೋದು ನಮ್ಮಲ್ಲಲ್ಲ. ಬದಲಿಗೆ ನೆರೆಯ ಗೋವಾ (Goa) ರಾಜ್ಯದಲ್ಲಿ. ಕೇವಲ ಮಾರ್ಕೆಟಿಂಗ್ ಮಾತ್ರವಲ್ಲ ಈ ಸೀಸನ್ ಗೆ ಹೇಳ್ಬೇಂದ್ರೆ ಕರುನಾಡ ಈ ಮಡಿಕೆ, ಒಲೆಗಳಿಗೂ ಗೋವಾದ ಉತ್ಸವವೊಂದಕ್ಕೆ (Goa Festivals) ಅವಿನಾಭಾವ ಸಂಬಂಧವಿದೆ.


    ಫೀಸ್ಟ್​ಗಾಗಿ ಮಣ್ಣಿನ ಮಡಿಕೆ
    ಹೌದು, ಗೋವಾ ರಾಜ್ಯದಲ್ಲಿ ಸಂತ ಫ್ರಾನ್ಸಿಸ್ ಕ್ಸೇವಿಯರ್ ಸ್ಮರಣಾರ್ಥ ವರ್ಷಕ್ಕೊಮ್ಮೆ ನಡೆಯುವ ಫೀಸ್ಟ್​ಗೆ ನಮ್ಮ ಕರುನಾಡಿನ ಉತ್ತರ ಕನ್ನಡದ ಅಂಕೋಲಾದಲ್ಲಿ ತಯಾರಾಗೋ ಮಣ್ಣಿನ ಮಡಿಕೆಗೆ ಎಲ್ಲಿಲ್ಲದ ಬೇಡಿಕೆಯಿದೆ. ಕುಂಬಾರಕೇರಿ ಗ್ರಾಮದಲ್ಲಿ ಕುಂಬಾರಿಕೆ ಮಾಡುವವರು ಕಳೆದ ಹಲವಾರು ವರ್ಷಗಳಿಂದ ಪ್ರತಿ ವರ್ಷ ಜನವರಿ ಕೊನೆಯ ವಾರ ಇಲ್ಲವೇ ಫೆಬ್ರವರಿ ಮೊದಲ ವಾರದಲ್ಲಿ ಗೋವಾದಲ್ಲಿ ನಡೆಯುವ ಸಂತ ಫ್ರಾನ್ಸಿಸ್ ಕ್ಸೇವಿಯರ್ ಫೀಸ್ಟ್​ಗೆ ಮಣ್ಣಿನ ಮಡಿಕೆ ಮತ್ತು ಉರುವಲು ಒಲೆಗಳನ್ನು ತಯಾರಿಸುತ್ತಾ ಬಂದಿದ್ದಾರೆ. ನಂತರ ಇದನ್ನ ಗೋವಾಕ್ಕೆ ಕಳುಹಿಸಿಕೊಡಲಾಗುತ್ತದೆ.




    ಮಣ್ಣಿನ ಮಡಿಕೆಯೇ ಉಡುಗೊರೆ
    ಅಂಕೋಲಾದಲ್ಲಿ ತಯಾರಾದ ಮಣ್ಣಿನ ಮಡಿಕೆಗಳು ಹೆಚ್ಚಿನ ಬಾಳಿಕೆ ಬರುತ್ತವೆ ಅನ್ನೋ ಕಾರಣಕ್ಕೆ ಗೋವಾ ಫೀಸ್ಟ್ ನಲ್ಲಿ ಹೆಚ್ಚಿನ ಡಿಮ್ಯಾಂಡ್ ಕುದುರಿಸಿಕೊಳ್ಳುತ್ತವೆ. ವಿಶೇಷ ಅಂದ್ರೆ ಈ ಹಬ್ಬದ ನೆನಪಿಗೆ ಜನರು ತಮ್ಮ ಇಷ್ಟಾರ್ಥರಿಗೆ, ಅತಿಥಿಗಳಿಗೆ ಹೀಗೆ ಪರಸ್ಪರ ಕಾಣಿಕೆಯಾಗಿ ಈ ಮಣ್ಣಿನ ಮಡಿಕೆ, ಒಲೆ ನೀಡುವ ಸಂಪ್ರದಾಯವಿದೆ.


    ಇದನ್ನೂ ಓದಿ: Ulavi Jatre: ಮನೆಯಲ್ಲಿ ಕಾರ್ ಇದ್ರೂ ಎತ್ತಿನ ಗಾಡಿಯಲ್ಲೇ ಜಾತ್ರೆಗೆ ಬರುವ ಭಕ್ತರು!


    ಸಖತ್ ವ್ಯಾಪಾರ
    ಅಂಕೋಲಾದಿಂದ ಕಳೆದ ಹತ್ತು ವರ್ಷಗಳ ಹಿಂದೆ ಮೂರರಿಂದ ನಾಲ್ಕು ವಾಹನದಲ್ಲಿ ಮಡಿಕೆ ಮತ್ತು ಒಲೆಗಳನ್ನು ಹೇರಿಕೊಂಡು ಹೋಗುತ್ತಿದ್ದರು. ಆದರೆ ಇತ್ತೀಚಿನ ದಿನದಲ್ಲಿ 500 ಮಡಿಕೆ ಮತ್ತು 300 ಒಲೆಗಳನ್ನು ಒಂದು ಕುಟುಂಬ ಖರೀದಿಸಿಕೊಂಡು ಹೋಗಿ ವ್ಯಾಪಾರ ಮಾಡಿ ಬರುತ್ತಿದ್ದಾರೆ.


    ಗೋವಾದಲ್ಲಿ 7 ದಿನ ನಡೆಯುವ ಈ ಫೀಸ್ಟ್ ಸಂದರ್ಭದಲ್ಲಿ ಅಂಕೋಲಾದ ಮಣ್ಣಿನ ಮಡಿಕೆ, ಒಲೆಗಳು ಕೂಡಾ ಹೆಚ್ಚಿನ ಗಮನ ಸೆಳೆಯುತ್ತದೆ.


    ಇದನ್ನೂ ಓದಿ: Karwar: ಮದುವೆಗೂ ಮುನ್ನ ಹೊಕ್ಕಳ ಬಳಿ ಸೂಜಿಯಿಂದ ದಾರ ಪೋಣಿಸುವ ಜಾತ್ರೆ!


    ಒಟ್ಟಿನಲ್ಲಿ ಒಂದು ಕಡೆ ಮಣ್ಣಿನ ಮಡಿಕೆ ಅಳಿವಿನಂಚಿನಲ್ಲಿದ್ದರೆ, ಇನ್ನೊಂದೆಡೆ ಗೋವಾದಂತಹ ವಿಲಾಸಿ ರಾಜ್ಯದಲ್ಲಿ ಇಂತಹ ಪರಿಕರಗಳಿಗೆ ಬೇಡಿಕೆ ಇರೋದು ವಿಶೇಷವೇ ಸರಿ.

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು