• Home
  • »
  • News
  • »
  • uttara-kannada
  • »
  • Animation Course: ಅನಿಮೇಷನ್ ಕಲಿಯಬೇಕೇ? 2 ತಿಂಗಳ ಕೋರ್ಸ್ ಪ್ರಾರಂಭ

Animation Course: ಅನಿಮೇಷನ್ ಕಲಿಯಬೇಕೇ? 2 ತಿಂಗಳ ಕೋರ್ಸ್ ಪ್ರಾರಂಭ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹುಬ್ಬಳಿಯ ಅರೇನಾ ಆನಿಮೇಶನ್ ಸಂಸ್ಥೆಯ ಜೊತೆ ಒಪ್ಪಂದದೊಂದಿಗೆ ಅನಿಮೇಶನ್ ಕೋರ್ಸ್ ಅನ್ನು ಆರಂಭಿಸಲಾಗುತ್ತಿದೆ.

  • Share this:

    ಶಿರಸಿ: ಡಿಜಿಟಲ್ ಜಗತ್ತು ಹಾಗೂ ದೃಶ್ಯ ಮಾಧ್ಯಮದಲ್ಲಿ ರಾಶಿ ರಾಶಿ ಉದ್ಯೋಗಗಳು ಸೃಷ್ಟಿಯಾಗುತ್ತಿವೆ, ಹಾಗೂ ಎಲ್ಲವೂ ಕೂಡ ಕುಳಿತಲ್ಲೇ ಜಗತ್ತನ್ನು ತಲುಪುವ ಗಟ್ಟಿ ನೆಲೆಯನ್ನು ಹೊಂದಿರುವ ಕೆಲಸಗಳಿಗಾಗಿ ದ್ದು ಯುವ ಪೀಳಿಗೆ ಈ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಹಾತೊರೆಯುತ್ತಿದೆ! ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ (Animation Course In Sirsi) ಯುವಕರಿಗೆ ಶುಭಸುದ್ದಿಯೊಂದನ್ನು ಎಂಇಎಸ್ ಶಿಕ್ಷಣ ಸಂಸ್ಥೆಯು (MES Education Institute) ನೀಡುತ್ತಿದೆ. ಹೌದು, ಎಂಇಎಸ್ ಸಂಸ್ಥೆಯ ಎಂ.ಎಂ. ಕಲಾ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ (MM Arts And Science Collage) ಇದೇ ಡಿಸೆಂಬರ್​ನಿಂದ (December) ಎರಡು ತಿಂಗಳ ಅನಿಮೇಶನ್ ಸರ್ಟಿಫಿಕೇಟ್ ಕೋರ್ಸ್ ಅನ್ನು ಪ್ರಾರಂಭಿಸಲಾಗುತ್ತಿದೆ.

    ಶಿರಸಿಯಂತಹ ಪೇಟೆಗಳಲ್ಲಿ ಈಗೀಗ ನವೋದ್ಯಮಗಳು ಡಿಜಿಟಲ್ ಮೀಡಿಯಾದ ರೂಪದಲ್ಲಿ ಕಾರ್ಯಾರಂಭಗೊಳ್ಳುತ್ತಿದ್ಜು ಅದಕ್ಕೆ ಪೂರಕವಾಗಿ ಉದ್ಯೋಗ ಸೃಷ್ಟಿಗೆ ಮಾರ್ಗದರ್ಶನಕ್ಕೆ ಕೋರ್ಸುಗಳ ಲಭ್ಯತೆ ಸರಿಯಾಗಿ ಇಲ್ಲ ಎಲ್ಲರೂ ಕೂಡ ದೂರದ ಧಾರವಾಡವನ್ನು ತಲುಪಬೇಕಾದ ಅನಿವಾರ್ಯತೆ ಇದೆ.


    ಅರೇನಾ ಆನಿಮೇಶನ್ ಸಂಸ್ಥೆಯ ಸಹಯೋಗ
    ಈಗಾಗಲೇ ಶಿರಸಿಯ ಎಂ.ಎಂ. ಕಲಾ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕಂಪ್ಯೂಟರ್, ಬಯೋಟೆಕ್ನಾಲಜಿ, ಪತ್ರಿಕೋದ್ಯಮ ಹಾಗೂ ಪ್ರವಾಸೋದ್ಯಮದ ಕುರಿತು ಪಠ್ಯಗಳು ಚಾಲ್ತಿಯಲ್ಲಿವೆ. ಅದರ ಜೊತೆ ಹುಬ್ಬಳಿಯ ಅರೇನಾ ಆನಿಮೇಶನ್ ಸಂಸ್ಥೆಯ ಜೊತೆ ಒಪ್ಪಂದದೊಂದಿಗೆ ಅನಿಮೇಶನ್ ಕೋರ್ಸ್ ಅನ್ನು ಆರಂಭಿಸಲಾಗುತ್ತಿದೆ.


    ಇದನ್ನೂ ಓದಿ: Ulavi Jatre: ಉಳವಿಗೆ ಪಾದಯಾತ್ರೆ ಹೊರಟ ಅಸಂಖ್ಯಾತ ಭಕ್ತರು!


    ಆದ್ಯತೆಯ ಮೇರೆ ಅನಿಮೇಷನ್ ಬೋಧನೆ
    ಸದ್ಯದ ಮಟ್ಟಿಗೆ ಇದೇ ವರ್ಷದ ಡಿಸೆಂಬರ್ ಒಂದನೇ ತಾರೀಕಿಂದ ಆರಂಭಗೊಳ್ಳುತ್ತಿರುವ ಈ ಕೋರ್ಸ್​ಗಳು ಎಂ‌.ಇ.ಎಸ್ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಆದ್ಯತೆಯ ಮೇರೆಗೆ ಬೋಧನೆಗೆ ಅವಕಾಶ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಬೇಡಿಕೆಯನ್ನು ನೋಡಿಕೊಂಡು ಉಳಿದವರಿಗೆ ಪ್ರವೇಶಾವಕಾಶವನ್ನು ನೀಡಲಾಗುವುದು ಎಂದು ಸಂಸ್ಥೆಯ ಪ್ರಾಚಾರ್ಯರಾದ ಡಾ‌. ಟಿ ಎಸ್ ಹಳೆಮನೆ ಅವರು ಮಾಹಿತಿ ನೀಡಿದ್ದಾರೆ.


    ಇದನ್ನೂ ಓದಿ: Football League: ಕರ್ನಾಟಕದಲ್ಲಿ ಫೀಮೇಲ್ ಫುಟ್​ಬಾಲ್ ಸುಗ್ಗಿ! ಕಾಲ್ಚೆಂಡಿನ ಚಾಲಾಕಿಗಳ ಬೊಂಬಾಟ್ ಆಟ


    ಇನ್ನೂ ಹೆಚ್ಚಿನ ಅವಧಿಗೆ ಅನಿಮೇಷನ್ ಕೋರ್ಸ್ ಅನ್ನು ವಿಸ್ತರಿಸುವ ಆಲೋಚನೆಯನ್ನು ಹೊಂದಿದ್ದು ಆಸಕ್ತರು ಎಂ.ಎಂ ಕಾಲೇಜಿಗೆ ಮುಂದಿನ ಶೈಕ್ಷಣಿಕ ವರ್ಷದ ಸಮಯದಲ್ಲಿ ಸಂಸ್ಥೆಯನ್ನು ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ: 08384236377


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು