ಉತ್ತರ ಕನ್ನಡ: ಕಲ್ಲಿನಲ್ಲಿ ಕೆತ್ತಿದ ಪುರಾತನ ಕೆತ್ತನೆ. ಭಾರೀ ಹಳೆಯದಾದ ದೇವಸ್ಥಾನ ಅನ್ನೋದನ್ನ ಸಾರಿ ಹೇಳುವ ಶಿಲ್ಪಕಲೆ. ಹಲಸಿನ ಮರವೇ ಇಲ್ಲಿನ ಗರುಡಗಂಭ, ಯಕ್ಷಗಾನವೇ (Yakshagana) ಇಲ್ಲಿನ ದೇವರಿಗೆ ಪ್ರಿಯವಾದ ಹರಕೆ. ಇದುವೇ ಉತ್ತರ ಕನ್ನಡದ ಯಲ್ಲಾಪುರದ (Analagar Gopalakrisha Temple) ಅಣಲಗಾರು ಶ್ರೀಗೋಪಾಲಕೃಷ್ಣ ದೇವಸ್ಥಾನ.
ಅಣಲಗಾರು ಕ್ಷೇತ್ರವು ಸೋಂದಾ ಅರಸರು ಹಾಗೂ ಹಾನಗಲ್ ಕದಂಬರ ಕಾಲದ ಪ್ರಮುಖ ಕ್ಷೇತ್ರವಾಗಿತ್ತು. ಈಗ ಮಾಗೋಡು ಹೋಗುವ ಮಾರ್ಗದ ಕೆಲವೇ ಕೆಲವು ಮನೆಗಳ ಸಣ್ಣ ಹಳ್ಳಿಯಾಗಿರುವ ಈ ಅಣಲಗಾರು ಕಾಡಿನ ಮಧ್ಯೆ ಇರುವ ಶ್ರೀಕೃಷ್ಣನ ದೇವಸ್ಥಾನ ಆಸ್ತಿಕರ ಬದುಕಿಗೊಂದು ದಾರಿ ತೋರುತ್ತಾ ಬಂದಿದೆ.
ವಿಶಿಷ್ಟ ರೀತಿಯ ವಿಗ್ರಹ
ಚಂದನ ಶಿಲೆಯಿಂದ ನಿರ್ಮಿತವಾದ ಗೋಪಾಲಕೃಷ್ಣನ ಮೂರ್ತಿಯು 17ನೇ ಶತಮಾನಕ್ಕೆ ಸೇರಿದ್ದು ಅನ್ನೋ ಐತಿಹ್ಯವಿದೆ. ಇಲ್ಲಿನ ಮೂರ್ತಿಯ ವಿಶೇಷತೆ ಏನೆಂದರೆ ಇದು ಯಾವುದೇ ಉಬ್ಬು ಶಿಲ್ಪದ ರೀತಿ ಇಲ್ಲ. ಆಧುನಿಕ ಕೃಷ್ಣನ ವಿಗ್ರಹವಿರುವಂತೆ ಅಲ್ಲಲ್ಲಿ ಕಂದುಕಗಳಿರುವ ದೇವರ ಮೂರ್ತಿಯಾಗಿದೆ.
ಇದನ್ನೂ ಓದಿ: Business Idea: ಬೇಸಿಗೆ ರಜೆ ಬ್ಯುಸಿನೆಸ್! ಮಾವಿನ ಹಣ್ಣು ಮಾರಿ ದಿನಕ್ಕೆ 5 ಸಾವಿರ ದುಡಿಯುವ ಮಕ್ಕಳು
ಯಕ್ಷಗಾನದ ಹರಕೆ
ಈ ಕೃಷ್ಣನಿಗೆ ಯಕ್ಷಗಾನ ಅಂದ್ರೆ ಬಲು ಇಷ್ಟ. ಹೀಗಾಗಿ ಯಕ್ಷಗಾನದ ಸೇವೆ ಕೊಟ್ಟರೆ ಭಕ್ತರು ಬೇಡಿಕೊಂಡಿದ್ದು ಈಡೇರುತ್ತೆ ಅನ್ನೋ ನಂಬಿಕೆಯಿದೆ.
ಯುಗಾದಿ, ಕೃಷ್ಣಾಷ್ಟಮಿ ಪರ್ವದಿನಗಳಂದು ನೆರೆಯ ರಾಜ್ಯದಿಂದಲೂ ಭಕ್ತರು ಬರುತ್ತಾರೆ. ವಿಶೇಷ ಅಂದ್ರೆ ಈ ದೇಗುಲಕ್ಕೆ ಯಾವುದೇ ಗರುಡಗಂಭವಿಲ್ಲ. ಪಕ್ಷಿ ಆಕಾರದ ಹಲಸಿನ ಮರವಿದ್ದು, ಇದನ್ನೇ ಗರುಡಗಂಭವೆಂದು ಮಾನ್ಯ ಮಾಡಲಾಗಿದೆ. ಸುಮಾರು 500 ವರ್ಷ ಹಳೆಯ ಮರವೂ ಇದಾಗಿದ್ದು, ಇದರ ಅಡಿಯಲ್ಲಿ ಶಾಸನ ರೂಪಿ ಗರುಡ ಲಾಂಛನವಿದೆ.
ಇದನ್ನೂ ಓದಿ: Leaf Helmet: ನೇರಳೆ ಮರದ ಎಲೆಯಿಂದ ಹೆಲ್ಮೆಟ್! ಇದರಿಂದ ತಲೆ ಆಗುತ್ತೆ ಕೂಲ್
ಹೀಗೆ ಬನ್ನಿ
ಇಲ್ಲಿಗೆ ಬರಬೇಕೆಂದರೆ ಯಲ್ಲಾಪುರಕ್ಕೆ ಬಂದು ಮಾಗೋಡು ಮಾರ್ಗದಲ್ಲಿ 12 ಕಿಲೋಮೀಟರ್ ಕ್ರಮಿಸಿದರೆ ಈ ಅಣಲಗಾರು ಗೋಪಾಲಕೃಷ್ಣ ದೇವಸ್ಥಾನ ಸಿಗುತ್ತದೆ. ದಟ್ಟ ಅಡವಿಯ ನಡುವೆ ಇರುವ ಮುದ್ದು ಕೃಷ್ಣನನ್ನು ಕಂಡು ನೀವೂ ಧನ್ಯರಾಗೋದು ಖಂಡಿತಾ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ