ಉತ್ತರ ಕನ್ನಡ(ನ.26): ಅತ್ತ ಆಟೋನೂ ಅಲ್ಲ, ಇತ್ತ ಸ್ಕೂಟಿನೂ ಅಲ್ಲ. ಆದ್ರೂ ರಸ್ತೆ ಅಲ್ದಿರೋ ಕಡೆನೂ ನುಗ್ಗಿ ಸಾಗುತ್ತೆ, ತೋಟ, ಗದ್ದೆ, ಏರು, ದಿಣ್ಣೆ ಏನೇ ಇದ್ರೂ ಮುನ್ನುಗ್ಗಿ ಚಲಿಸುತ್ತೆ! ಮುನ್ನೂರು ಕೆಜಿವರೆಗಿನ ತೂಕ ಹೊತ್ತು ಸಂಚರಿಸುತ್ತೆ. ರೈತರ ಪಾಲಿಗಂತೂ ಇದು ಬಹುಪಯೋಗಿ ಈ ಸ್ಪೆಷಲ್ ವೆಹಿಕಲ್. ತ್ರಿಚಕ್ರ ಹೊಂದಿರುವ ಅಮೋಘ ಇ-ಕಾರ್ಟ್ನ ಈ ಇಲೆಕ್ಟ್ರಿಕ್ ವಾಹನ 300 ಕೆಜಿ ತನಕ ಸಾಮಾಗ್ರಿಗಳನ್ನ ಸಾಗಿಸುವ ಸಾಮರ್ಥ್ಯ ಹೊಂ್ದಿದ್ದು, ರೈತರ ಭಾರ ಮತ್ತಷ್ಟು ಇಳಿಸಿದೆ.
ರೈತರ ಭಾರ ಕಡಿಮೆ ಮಾಡೋ ಗಾಡಿ!
ಇತ್ತೀಚೆಗೆ ತೋಟಗಾರಿಕೆ ಕೆಲಸಕ್ಕೆ ಜನ ಸಿಗೋದೆ ಕಡಿಮೆ. ಕೂಲಿಯಾಳುಗಳನ್ನು ಹುಡುಕೋದು ಮಲೆನಾಡಿನ ರೈತರಿಗೆ ತೋಟ ಮಾಡಿದಷ್ಟೇ ಬೆವರಿಳಿಸುವ ಕೆಲಸ. ಹಾಗಾಗಿ ಯಾವುದೇ ವಸ್ತುಗಳನ್ನು ಸುಲಭವಾಗಿ ಗದ್ದೆ, ತೋಟಕ್ಕೆ ಕೊಂಡೊಯ್ಯೋದಾಗಲೀ, ತರೋದಾಗಲೀ ಕಷ್ಟ. ಆದ್ರೆ ಮಾರುಕಟ್ಟೆಗೆ ಬಂದ ಹೊಸ ಗಾಡಿಯೊಂದು ಈ ಭಾರವನ್ನು ಕಡಿಮೆ ಮಾಡಲಿದೆ. ತಾವೇ ಈ ವಾಹನವನ್ನ ರೈಡ್ ಮಾಡ್ತಾ ತೋಟಗಳಲ್ಲಿ ಬೇಕಾದ ಸಾಮಾಗ್ರಿ ಸಾಗಿಸಬಹುದು.
ಇದನ್ನೂ ಓದಿ: ಹಂಪಿಯ ಆಟೋ ಚಾಲಕನ ಜೊತೆ ಬೆಲ್ಜಿಯಂ ಸುಂದರಿಯ ಮದುವೆ!
ಅಮೋಘ ಇ-ಕಾರ್ಟ್ ಅನ್ನೋ ಅದ್ಭುತ!
ತ್ರಿಚಕ್ರ ಹೊಂದಿರುವ ಅಮೋಘ ಇ-ಕಾರ್ಟ್ನ ಈ ಇಲೆಕ್ಟ್ರಿಕ್ ವಾಹನ 300 ಕೆಜಿ ತನಕ ಸಾಮಾಗ್ರಿಗಳನ್ನ ಸಾಗಿಸುವ ಜೊತೆಗೆ ತೋಟ ಗದ್ದೆಗಳ ತಿರುವಲ್ಲೂ ಈಸಿಯಾಗಿ ರೈಡ್ ಮಾಡಬಲ್ಲದು. ಆರರಿಂದ ಎಂಟು ತಾಸು ಚಾರ್ಜ್ ಮಾಡಿದರೆ 60-70 ಕಿ.ಮೀ ಮೈಲೇಜ್ ಕೊಡುವ ಈ ಗಾಡಿ ಲಗೇಜ್ ಸಾಗಣಿಕೆಗೆ ತುಂಬಾ ಗಟ್ಟಿ ವಾಹನ. ಇನ್ನೂ ಹೆಚ್ಚಿನ ಮೊಡಿಫಿಕೇಶನ್ ಮಾಡಿಕೊಂಡರೆ ತಳ್ಳೋಗಾಡಿಗಳನ್ನು, ಹೆವಿ ಡ್ಯೂಟಿ ಗಾಡಿಗಳನ್ನು ತಳ್ಳಿ ಹಾಕಿ ಇದು ಪ್ರವರ್ಧಮಾನಕ್ಕೆ ಬರೋದು ಖಂಡಿತ ಅಂತಾರೆ ಬಳಕೆದಾರರು.
ಯೂಸರ್ ಫ್ರೆಂಡ್ಲಿ ವೆಹಿಕಲ್!
ಈ ವಾಹನವನ್ನು ಸಂತೋಷ್ ಹೆಬ್ಬಾರ್ ಎಂಬ ಮೆಕ್ಯಾನಿಕಲ್ ಇಂಜಿನಿಯರ್ ವಿನ್ಯಾಸ ಮಾಡಿದ್ದು ಅವರದ್ದೇ ಅಮೋಘ ಇ ಮೋಟಾರ್ಸ್ ನಲ್ಲಿ ಈ ಗಾಡಿಗಳು ಲಭ್ಯವಿದೆ. ಈ ತ್ರಿಚಕ್ರ ವಾಹನವು ಫ್ರಂಟ್ ಗೇರ್, ರಿವರ್ಸ್ ಗೇರ್ ಸೇರಿದಂತೆ ಎಲ್ಲವೂ ಯೂಸರ್ ಫ್ರೆಂಡ್ಲಿ ಆಗಿದೆ. ಮೂರು ಚಕ್ರಕ್ಕೂ ಡಿಸ್ಕ್ ಬ್ರೇಕ್ ಇದ್ದು ಕ್ಲಚ್ ಹಿಡಿದು ಎಕ್ಸಲೇಟರ್ ಕೊಟ್ಟರೆ ಸರಾಗವಾಗಿ ಸಾಗುತ್ತದೆ.
ಇದನ್ನೂ ಓದಿ: Freedom Fighter: 117 ವರ್ಷದ ಈ ಸ್ವಾತಂತ್ರ್ಯ ಹೋರಾಟಗಾರ ಕೇವಲ ಗಡ್ಡೆಗೆಣಸು ತಿಂದು ಬದುಕುತ್ತಿದ್ದಾರೆ!
ರಿಸ್ಕ್ ಲೆಸ್ ಗಾಡಿ
ಮೂರು ಚಕ್ರದ ಗಾಡಿ ಆದ್ದರಿಂದ ಬೀಳುವ ಸಾಧ್ಯತೆಯೂ ಕಮ್ಮಿ. ಈಗಾಗಲೇ ಗಮನ ಸೆಳೆದಿರುವ ಈ ಬಹುಪಯೋಗಿ ಸಾಧನ ಬಳಸಲು ಹಲವು ತೋಟಿಗರು ಮುಂದಾಗುತ್ತಿದ್ದಾರೆ. ಶಿರಸಿ ಬನವಾಸಿ ರಸ್ತೆಯ ಅಮೋಘ ಇ ಮೋಟಾರ್ಸ್ನಲ್ಲಿ ಈ ವಾಹನವನ್ನು ಖರೀದಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂತೋಷ್ ಹೆಬ್ಬಾರ್ ಅವರ ಸಂಪರ್ಕ ಸಂಖ್ಯೆ 91 85532 15557.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ