ಉತ್ತರ ಕನ್ನಡ: ಆಕೆಯದ್ದು ಆಫ್ರಿಕಾ ಮೂಲ. ಕರ್ನಾಟಕಕ್ಕೆ ಬಂದಾಗ ಆಕೆಗೆ ಎದುರಾಗಿದ್ದು ಕೂಡಾ ಅದೇ ಮೂಲದ ಜನರು. ಅಲ್ಲಿಯೇ ನೆಲೆ ನಿಂತ ಅಮೆರಿಕಾದ ಆ ಫ್ಯಾಶನ್ ಡಿಸೈನರ್ (Fashion Designer) ಕೌದಿ ಡಿಮ್ಯಾಂಡ್ ಹೆಚ್ಚಿಸಲು ರೆಡಿಯಾಗಿದ್ದಾರೆ. ಈ ಮೂಲಕ ಬುಡಕಟ್ಟು ಜನಾಂಗದ ಮಂದಿಗೆ ಆಸರೆಯಾಗುವ ಭರವಸೆ ಮೂಡಿಸಿದ್ದಾರೆ. ಹೌದು, ಚಳಿಗಾಲದಲ್ಲಿ (Winter) ಹೊದ್ದುಕೊಳ್ಳಲು ತಯಾರಿಸುವ ಕೌದಿ ಬಟ್ಟೆಯೇ ಅಮೆರಿಕಾದಲ್ಲಿ ನೆಲೆಸಿರುವ ಫೇಮಸ್ ಡಿಸೈನರ್ ಅಸ್ಮಾ ಹರ್ಷೀದ್ ಅವರನ್ನು ತಡೆದು ನಿಲ್ಲಿಸಿದೆ. ಭಾರತದ ಬಟ್ಟೆ ಬರೆಗಳ (Indian Dress) ಬಗ್ಗೆ ತಿಳಿದುಕೊಳ್ಳಲು ಬಂದಿದ್ದ ಇವರಿಗೆ, ಕರ್ನಾಟಕಕ್ಕೆ ಬರುತ್ತಿದ್ದಂತೆ ನೆನಪಾಗಿದ್ದೇ ಸಿದ್ಧಿ ಜನಾಂಗ.
ಆಫ್ರಿಕಾ ಮೂಲದವರ ಸಂಗಮ
ಮೂಲತಃ ಆಫ್ರಿಕಾದ ಟೋಕೋದವರಾದ ಅಸ್ಮಾರಿಗೂ ಸಿದ್ಧಿ ಜನಾಂಗದ ಬಟ್ಟೆ ಬರೆ ಆಸಕ್ತಿ ಮೂಡಿಸಿತ್ತು. ಸಿದ್ಧಿ ಜನಾಂಗದವರ ಮೂಲವೂ ಆಫ್ರಿಕಾವೇ ಆಗಿರುವುದರಿಂದ ಅಸ್ಮಾ ಅವರ ಆಸಕ್ತಿ ಹೆಚ್ಚಿಸಿತ್ತು. ಇಲ್ಲಿಗೆ ಬಂದು ನೋಡಿದಾಗ ಸಿದ್ಧಿ ಜನಾಂಗದವರು ತಯಾರಿಸುತ್ತಿದ್ದ ಕೌದಿ ಅವರನ್ನ ಆಕರ್ಷಿಸಿತು. ಚಳಿಗಾಲದಲ್ಲಿ ಜಾಕೆಟ್ಗಳಂತೆ ಧರಿಸುವ ಈ ಕೌದಿಗೆ ಇನ್ನಷ್ಟು ಮಾರ್ಕೆಟಿಂಗ್ ಮಾಡಿಸುವ ನಿಟ್ಟಿನಲ್ಲಿ ಅಸ್ಮಾ ಹೊಸ ಯೋಜನೆ ಕೈಗೆತ್ತಿಕೊಂಡಿದ್ದಾರೆ.
ಇದನ್ನೂ ಓದಿ: Ankola: ಮಡಿದ ಯೋಧನಿಗೆ ಕಂಬನಿ ಮಿಡಿದು ಬೀಳ್ಕೊಟ್ಟ ಅಂಕೋಲಾ
ಸಿದ್ಧಿ ಹೆಣ್ಮಕ್ಕಳಿಗೆ ತರಬೇತಿ
ಅಸ್ಮಾ ಹರ್ಷೀದ್ ಸದ್ಯ ಉತ್ತರ ಕನ್ನಡದ ಮುಂಡಗೋಡ-ಯಲ್ಲಾಪುರದ ಗುಂಜಾವತಿ ಭಾಗದಲ್ಲಿಯೇ ಬೀಡು ಬಿಟ್ಟಿದ್ದಾರೆ. ಇಲ್ಲಿರುವ ಸಿದ್ಧಿ ಜನಾಂಗದ ಹೈಸ್ಕೂಲು, ಕಾಲೇಜು ಹೆಣ್ಣುಮಕ್ಕಳನ್ನು ಒಟ್ಟುಗೂಡಿಸಿ ಅವರಿಗೆ ಕೌದಿಗಳಿಗೆ ಅಂತಾರಾಷ್ಟ್ರೀಯ ಬ್ರ್ಯಾಂಡಿಂಗ್ ಕೊಡಲು ಬೇಕಾದ ತರಬೇತಿ ನೀಡುತ್ತಿದ್ದಾರೆ. ಸಿದ್ಧಿ ಜನಾಂಗದ ಮಕ್ಕಳಿಗೆ ಇದೆಲ್ಲವೂ ಹೊಸತಾದರೂ, ಇದರಿಂದ ತಮ್ಮ ಜೀವನಕ್ಕೆ ಒಂದು ದಾರಿ ಆಗಬಹುದು ಎಂಬ ಆಶಯದಲ್ಲಿದ್ಧಾರೆ.
ಇದನ್ನೂ ಓದಿ: Uttara Kannada: ಅಂಕೋಲಾ ಪಂಚೆ, ರುಮಾಲಿಗೆ ಹೊರ ರಾಜ್ಯಗಳಲ್ಲೂ ಡಿಮ್ಯಾಂಡ್!
ಅಸ್ಮಾ ಅವರು ನ್ಯೂಯಾರ್ಕ್ ಪಟ್ಟಣದಲ್ಲಿ ತಮ್ಮದೇ ಆದ ಸ್ವಂತ ಫ್ಯಾಷನ್ ಡಿಸೈನಿಂಗ್ ಸಂಸ್ಥೆಯನ್ನು ಹೊಂದಿದ್ದಾರೆ. ಆದರೆ, ಸಿದ್ಧಿ ಜನಾಂಗದ ಬಗೆಗಿನ ಅವರ ಕುತೂಹಲ, ಇವರು ಧರಿಸುವ ಬಟ್ಟೆ ಬರೆಗಳು ಅವರಲ್ಲಿ ಇನ್ನಷ್ಟು ಕಲಿಕೆಗೆ ಪ್ರೇರಣೆ ನೀಡಿದೆ. ಅದರಲ್ಲೂ ಕೌದಿಗಳಿಗೆ ಡಿಮ್ಯಾಂಡ್ ಹೆಚ್ಚಿಸುವ ನಿಟ್ಟಿನಲ್ಲಿ ಅವರು ತೋರಿದ ಉತ್ಸುಕತೆ ನಿಜಕ್ಕೂ ಗ್ರೇಟ್ ಎನ್ನಲೇಬೇಕು.
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ