ಶಿರಸಿ: ನಿಧಾನವಾಗಿ ಹರಿದಾಡ್ತಿರೋ ಉಡಗಳು. ಈಗಷ್ಟೇ ಪೊರೆ ಕಳಚಿದ ಉರಗ. ಗಿಳಿಗಳ ಕೂಗು, ಹಸಿರು ಹುಲ್ಲು ತಿನ್ನುತ್ತಿರುವ ಮೊಲ, ಮುಂಗುಸಿ, ಕುದುರೆ ಇನ್ನೂ ಹತ್ತು ಹಲವು ಪ್ರಾಣಿ. ಪಕ್ಷಿಗಳ ಜೀವವೈವಿಧ್ಯ ನೋಡಲು ಸಿಗುವುದು ಯಾವುದೋ ಝೂನಲ್ಲಿ ಅಂದುಕೊಂಡ್ರೆ ನಿಮ್ಮ ಊಹೆ ತಪ್ಪು. ಇದು ಉತ್ತರ ಕನ್ನಡ ಜಿಲ್ಲೆಯ (Uttara Kannada News) ಶಿರಸಿಯಲ್ಲಿನ ಪೆಟ್ ಪ್ಲಾನೆಟ್ (Amazing Pet Planet) ಹೆಸರಿನ ಅನಾಥಾಶ್ರಮ.
ಬೀದಿಯಲ್ಲಿ ಬಿದ್ದಿರೋ ಪ್ರಾಣಿಗಳನ್ನ ರಾಜೇಂದ್ರ ಶಿರಸಿಕರ್ ದಂಪತಿ ಸಂರಕ್ಷಿಸಿ ಕಾಪಾಡೋ ಈ ತಾಣ ಎಲ್ಲರ ಜನಮನ ತಲುಪಿದೆ.
ಪ್ರಾಣಿ ಪಕ್ಷಿಗಳಿಗೆ ಮರುಜೀವ
ಬೀದಿಯಲ್ಲಿ ಅನ್ನ ಆಹಾರ ಇಲ್ಲದೆ ನಿತ್ರಾಣವಾಗಿ ಬಿದ್ದಿರುವ ಪ್ರಾಣಿಗಳು, ರಸ್ತೆ ಅಪಘಾತದಲ್ಲಿ ಗಾಯಗೊಂಡ ಪ್ರಾಣಿಗಳನ್ನ, ಪಕ್ಷಿಗಳನ್ನ ಚಿಕಿತ್ಸೆ ನೀಡಿ ಮರುಜೀವ ನೀಡುವ ತಾಣ ಇದಾಗಿದೆ.
ಇಲ್ಲಿವೆ ಮುದ್ದು ಮುದ್ದು ಪ್ರಾಣಿಗಳು
ಇನ್ನು ಪ್ರಾಣಿಪ್ರಿಯ ವೈದ್ಯ ರಾಜೇಂದ್ರ ಶಿರಸಿಕರ್ ಹಾಗೂ ಅವರ ಪತ್ನಿ ನಡೆಸುತ್ತಿರುವ ಅಮೇಜಿಂಗ್ ಪೆಟ್ ಪ್ಲಾನೆಟ್ ಕೇಂದ್ರ. ಹೆಸರಿಗೆ ತಕ್ಕಂತೆ ಇಲ್ಲಿರೋ ಪ್ರಾಣಿ-ಪಕ್ಷಿಗಳೆಲ್ಲ ನೋಡುಗರಿಗೆ ಪೆಟ್ ಎನಿಸೋದ್ರಲ್ಲಿ ಸಂಶಯವೇ ಇಲ್ಲ.
ಇದನ್ನೂ ಓದಿ: Mundgod Marikamba Jatre: ತೇರನೇರಿ ಬಂದ ದ್ಯಾಮವ್ವ! ಮುಂಡಗೋಡಿನ ಮಾರಿಕಾಂಬಾ ಜಾತ್ರೆಯ ವೈಭವವಿದು
5 ವರ್ಷಗಳ ಹಿಂದೆ ಆರಂಭವಾದ ಪೆಟ್ ಪ್ಲಾನೆಟ್
ಇಲ್ಲಿರೋ ಬಹುತೇಕ ಪ್ರಾಣಿಗಳು ಹಾದಿಬೀದಿಲಿ ಗಾಯ ಮಾಡ್ಕೊಂಡಿದ್ದವು. ಇವನ್ನು ಚಿಕಿತ್ಸೆಗಾಗಿ ತಂದ ಮೇಲೆ ಈಗ ಅವೆಲ್ಲ ಗುಣಮುಖವಾಗಿ ಈ ಪ್ಲಾನೆಟ್ ಸದಸ್ಯರಾಗಿ ಬಿಟ್ಟಿವೆ. 5 ವರ್ಷಗಳಿಂದ ಪಶುವೈದ್ಯ ರಾಜೇಂದ್ರ ಶಿರಸಿಕರ್ ಅವರ ಪ್ರಯತ್ನದ ಫಲವಾಗಿ ಈ ಪ್ಲಾನೆಟ್ ಹಲವು ಜೀವ ವೈವಿಧ್ಯತೆಗಳ ತಾಣವಾಗಿದೆ. ಜೊತೆಗೆ ನಿತ್ರಾಣದ ಸ್ಥಿತಿಯಲ್ಲಿರುವ ಜೀವಿಗಳಿಗೆ ಮರುಜೀವ ಸಿಕ್ಕಿದೆ.
ಇದನ್ನೂ ಓದಿ: Uttara Kannada: ತಾಳೆ ಮರದಿಂದ ತುಂಬಿ ಹೋದ ವರದಾ ದಂಡೆ! ಬಂಡವಾಳದ 3 ಪಟ್ಟು ಲಾಭ ಗಳಿಸಿದ ಬನವಾಸಿ ಕೃಷಿಕರು
ಪೆಟ್ ಪ್ಲಾನೆಟ್ಗೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಒಟ್ಟಾರೆ ಗಾಯಗೊಂಡು ನಿತ್ರಾಣ ಸ್ಥಿತಿಯಲ್ಲಿರುವ ಪ್ರಾಣಿಗಳನ್ನ ಕಂಡ ಕ್ಷಣ ಅಲ್ಲಿಗೆ ಧಾವಿಸುವ ರಾಜೇಂದ್ರ ಹಾಗೂ ಅವರ ಪತ್ನಿ ಪೂಜಾ ಅವುಗಳಿಗೊಂದು ನೆಲೆ ಒದಗಿಸುವ ಕೆಲಸ ಮಾಡುತ್ತಿದ್ದು ತಮ್ಮ ಸ್ವಂತ ಜಾಗವನ್ನೇ ಉದ್ಯಾನವನವನ್ನಾಗಿ ಪರಿವರ್ತಿಸಿ ಉಚಿತ ಸಮಾಜ ಸೇವೆ ಮಾಡುತ್ತಿದ್ದಾರೆ.
ವರದಿ: ದರ್ಶನ್ ನಾಯ್ಕ್, ನ್ಯೂಸ್ 18 ಕನ್ನಡ, ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ