• Home
  • »
  • News
  • »
  • uttara-kannada
  • »
  • Amar Jawan Park: ಈ ಪಾರ್ಕ್ ಸೈನಿಕರ ಸ್ಮರಣೆಗೆ ಮೀಸಲು! ಉದ್ಯಾನವನಕ್ಕೆ ಬಂದರೆ ದೇಶಾಭಿಮಾನ ಮೂಡುತ್ತೆ

Amar Jawan Park: ಈ ಪಾರ್ಕ್ ಸೈನಿಕರ ಸ್ಮರಣೆಗೆ ಮೀಸಲು! ಉದ್ಯಾನವನಕ್ಕೆ ಬಂದರೆ ದೇಶಾಭಿಮಾನ ಮೂಡುತ್ತೆ

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಕಾರ್ಗಿಲ್ ವಿಜಯೋತ್ಸವ ಹಾಗೂ ಹುತಾತ್ಮರ ದಿನಾಚರಣೆಯಂದು ಈ ಪಾರ್ಕ್​ಗೆ ಮಾಜಿ ಸೈನಿಕರನ್ನು ಕರೆಸಲಾಗುತ್ತೆ. ದೇಶಕ್ಕಾಗಿ ಹುತಾತ್ಮರಾದ ಸೈನಿಕರ ಕಥೆಗಳನ್ನು, ದೇಶದ ಬಗ್ಗೆ ಅಭಿಮಾನ ಮೂಡಿಸುವ ಇತಿಹಾಸವನ್ನ ವಿದ್ಯಾರ್ಥಿಗಳಿಗೆ ತಿಳಿಸಿಕೊಡ್ತಾರೆ.

ಮುಂದೆ ಓದಿ ...
  • Local18
  • Last Updated :
  • Uttara Kannada, India
  • Share this:

    ಶಿರಸಿ: ಶುಭ್ರ ಪರಿಸರ, ಸ್ವಚ್ಛಂದ ವಾತಾವರಣ, ಮಧ್ಯೆ ಅಮರ್ ಜವಾನ್ ಸ್ಮಾರಕ. ಇನ್ನೊಂದೆಡೆ, ಖುಷಿಯಿಂದ ಆಟವಾಡುತ್ತಿರೋ ಮಕ್ಕಳು. ಪಾರ್ಕ್​ಗೆ ಆಗಮಿಸುವವರ ದೇಶಪ್ರೇಮವನ್ನು ಬಡಿದೆಚ್ಚರಿಸುತ್ತೆ ಇಲ್ಲಿರೋ ಸ್ಮಾರಕ. ಇಂಥದ್ದೊಂದು ಉದ್ಯಾನವನ ಇರೋದು ಉತ್ತರ ಕನ್ನಡದ ಶಿರಸಿಯಲ್ಲಿ. ಮಂಗಳೂರಿನಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಶಿರಸಿಯಲ್ಲಿ Parks In Sirsi) ನಿರ್ಮಿಸಿದ ಈ ಉದ್ಯಾನವನ ಕೇವಲ ಪಾರ್ಕ್ ಆಗಷ್ಟೇ ಇಲ್ಲದೇ ಹುತಾತ್ಮ ಯೋಧರಿಗೆ ಅರ್ಪಿಸಿದ "ಅಮರ ಜವಾನ್" ಸ್ಮಾರಕವನ್ನೂ ಹೊಂದಿದೆ. ಅಲ್ಲದೇ, ಸೈನಿಕರ ಸ್ಮರಣೆಗೆ ಮೀಸಲಿಟ್ಟ ಉತ್ತರ ಕನ್ನಡದ (Uttara Kannada) ಏಕೈಕ ಉದ್ಯಾನವನವೂ (Amar Jawan Park) ಆಗಿದೆ.


    ಅಷ್ಟೇ ಅಲ್ಲ ಕಣ್ರೀ, ಈ ಪಾರ್ಕ್​​ಗೆ ಮಕ್ಕಳನ್ನ ಕರೆತಂದ್ರೆ ಖುಷಿಯಿಂದ ಕಾಲ ಕಲೆಯಬಹುದು. ಸುಸಜ್ಜಿತವಾದ ಆಸನ ವ್ಯವಸ್ಥೆ ಹಾಗೂ ಆಟದ ಉಪಕರಣಗಳು, ಹೂದೋಟ, ಮರಗಿಡಗಳು ಗಮನ ಸೆಳೆಯುತ್ತವೆ.


    ಇದನ್ನೂ ಓದಿ: Success Story: ಸಾವಿರಾರು ಮಹಿಳೆಯರ ತಿಂಗಳ ರಗಳೆಗೆ ಪರಿಹಾರ! ಸ್ಟಾರ್ಟಪ್ ಮಾಡಿ ಸಕ್ಸಸ್ ಕಂಡ ಗೋಕರ್ಣದ ಯುವತಿ


    ಮಾಜಿ ಸೈನಿಕರಿಂದ ದೇಶಾಭಿಮಾನದ ಪಾಠ
    ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಕಾರ್ಗಿಲ್ ವಿಜಯೋತ್ಸವ ಹಾಗೂ ಹುತಾತ್ಮರ ದಿನಾಚರಣೆಯಂದು ಈ ಪಾರ್ಕ್​ಗೆ ಮಾಜಿ ಸೈನಿಕರನ್ನು ಕರೆಸಲಾಗುತ್ತೆ. ದೇಶಕ್ಕಾಗಿ ಹುತಾತ್ಮರಾದ ಸೈನಿಕರ ಕಥೆಗಳನ್ನು, ದೇಶದ ಬಗ್ಗೆ ಅಭಿಮಾನ ಮೂಡಿಸುವ ಇತಿಹಾಸವನ್ನ ವಿದ್ಯಾರ್ಥಿಗಳಿಗೆ ತಿಳಿಸಿಕೊಡ್ತಾರೆ.


    ಇದನ್ನೂ ಓದಿ: Swarnavalli Mutt: ಪರಿಸರ ಮಂತ್ರ ಜಪಿಸುವ ಹಸಿರು ಸ್ವಾಮೀಜಿ! ಸ್ವರ್ಣವಲ್ಲಿ ಮಠದ ಇಂಟರೆಸ್ಟಿಂಗ್ ಕಥೆ


    amar jawan park sirsi
    ಈ ಉದ್ಯಾನವನಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


    ಈ ಅಮರ್ ಜವಾನ್ ಸ್ಮಾರಕ ನೋಡೋಕೆ ಶಿರಸಿಯ ಮರಾಠಿ ಕೊಪ್ಪದ ವಿಶಾಲ್ ನಗರ ಕ್ರಾಸಿನಿಂದ ನೇರವಾಗಿ ಸಾಗಬೇಕು. ಬೆಳಿಗ್ಗೆ 6 ರಿಂದ 10.30 ಗೆ ಹಾಗೂ ಸಂಜೆ 4 ರಿಂದ 8ರವರೆಗೆ ಈ ಪಾರ್ಕ್ ಸಾರ್ವಜನಿಕರಿಗೆ ಓಪನ್ ಇರುತ್ತದೆ. ವಾಯು ವಿಹಾರಕ್ಕೂ ಇದು ಹೇಳಿ ಮಾಡಿಸಿದ ಉದ್ಯಾನವನ ಆಗಿರೋದಕ್ಕೆ ಶಿರಸಿಯ ನಾಗರಿಕರೂ ಒಂದೊಳ್ಳೆ ತಾಣವಾಗಿ ಮಾರ್ಪಟ್ಟಿದೆ.


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: