Uttara Kannada: ಅರರೇ! ಕುಮಟಾದ ಈ ಊರಿನ ಗಣಪಂದ್ರೆಲ್ಲ ಒಟ್ಟಿಗೆ ಮುಳುಗ್ತಾರೆ!

ಬೊಗ್ರಿಬೈಲಲ್ಲಿ ಎಲ್ರೂ ಒಟ್ಟಿಗೆ ಗಣಪತಿ ವಿಸರ್ಜನೆಗೆ ಮಾಡೋದಕ್ಕೂ ಒಂದೊಳ್ಳೆ ಹಿಸ್ಟರಿ ಇದೆ. ಮೊದಲು ಈ ಊರಲ್ಲಿ ಗಣೇಶನ ಹಬ್ಬವನ್ನೇ ಆಚರಿಸುತ್ತಿರಲಿಲ್ವಂತೆ!

ಇಲ್ಲಿ ವಿಡಿಯೋ ನೊಡಿ

"ಇಲ್ಲಿ ವಿಡಿಯೋ ನೊಡಿ"

  • Share this:
    ಉತ್ತರ ಕನ್ನಡ: ಗಣೇಶ ಚತುರ್ಥಿ ದಿನಾನೇ ಎಲ್ರೂ ಗಣಪತಿ ಕೂರಿಸ್ತಾರೆ. ಆದ್ರೆ ಎಲ್ರೂ ಒಂದೇ ದಿನ ಗಣಪತಿ ವಿಸರ್ಜಿಸೋದನ್ನ ನೋಡಿದ್ದೀರಾ? ಹೀಗೊಂದು ಸ್ಪೆಷಲ್ ಆಚರಣೆ ಉತ್ತರ ಕನ್ನಡ ಜಿಲ್ಲೆಯಲ್ಲಿ (Uttara Kannada) ನಡೆಯುತ್ತೆ. ಕುಮಟಾ ತಾಲೂಕಿನ (Kumta) ಮೂರೂರು  ಗ್ರಾಮ ವ್ಯಾಪ್ತಿಯಲ್ಲಿ ಬರುವ ಬೊಗ್ರಿಬೈಲ್ ಎಂಬ ಗ್ರಾಮದಲ್ಲೇ ಊರವ್ರೆಲ್ಲ ಒಟ್ಟಿಗೆ ಗಣಪತಿ ವಿಸರ್ಜನೆ  (Ganapati Visarjan) ಮಾಡ್ತಾರೆ! ಸಾಮೂಹಿಕವಾಗಿ ಪೂಜೆ ಮಾಡಿ ನದಿಯಲ್ಲಿ ಮುಳುಗಿಸ್ತಾರೆ. ಸ್ವಂತ ಮನೆಯವರೇ ಕಚ್ಚಾಡೋ ಈ ಕಾಲ್ದಲ್ಲಿ ಗಣೇಶ ಜಾತಿ-ಮತದ ಹಂಗಿಲ್ಲದೇ ಊರನ್ನೇ ಒಂದು ಮಾಡುತ್ತಾನೆ ನೋಡಿ.

    ಗಣಪತಿ ಹಬ್ಬ ಶುರುವಾಗಿದ್ದು ಹೀಗೆ!
    ಬೊಗ್ರಿಬೈಲಲ್ಲಿ ಎಲ್ರೂ ಒಟ್ಟಿಗೆ ಗಣಪತಿ ವಿಸರ್ಜನೆಗೆ ಮಾಡೋದಕ್ಕೂ ಒಂದೊಳ್ಳೆ ಹಿಸ್ಟರಿ ಇದೆ. ಮೊದಲು ಈ ಊರಲ್ಲಿ ಗಣೇಶನ ಹಬ್ಬವನ್ನೇ ಆಚರಿಸುತ್ತಿರಲಿಲ್ವಂತೆ. ಪಕ್ಕದ ಕಲ್ಲಬ್ಬೆಗೆ ಹೋಗಿ ಗಣೇಶನ ನೋಡಿ ಬರುವ ಪರಿಪಾಠವಿತ್ತಂತೆ.

    ಇದನ್ನೂ ಓದಿ: Dodda Ganapathi Temple: ಮದುವೆ, ಕಳ್ಳತನ ಎಲ್ಲ ಸಮಸ್ಯೆಗೂ ಪರಿಹಾರ! ಶಿರಸಿ ದೊಡ್ಡ ಗಣಪತಿಯ ಮಹಿಮೆಯೂ ದೊಡ್ಡದು

    ಒಂದು ದಿನ ಊರಿನ ಶಿಕ್ಷಕರೊಬ್ಬರು ಗಣಪತಿ ಮೂರ್ತಿ ತಂದಾಗ ಎಲ್ಲರೂ ಕೂಡ ಅಲ್ಲಿಯೇ ಹಬ್ಬ ಆಚರಿಸಿದ್ದರಂತೆ. ಆಮೇಲೆ ಎಲ್ರೂ ಗಣಪತಿ ಕೂರ್ಸೋಕೆ ಶುರು ಮಾಡಿದ್ರು, ಆದ್ರೆ ಗಣಪತಿ ವಿಸರ್ಜನೆ ಮಾತ್ರ ಎಲ್ರೂ ಒಟ್ಟಿಗೆ ಮಾಡೋ ರೂಢಿ ಮಾಡ್ಕೊಂಡ್ರಂತೆ ಅನ್ನುತ್ತೆ ಇತಿಹಾಸದ ಕಥೆ.

    ಇದನ್ನೂ ಓದಿ: Ganesha in Tree: ಮರದಲ್ಲಿ ಮೂಡಿದ ಗಣಪ! ಪ್ರಕೃತಿ ವಿಸ್ಮಯಕ್ಕೆ ಗಣೇಶನೇ ಸಾಕ್ಷಿ!

    ಅಘನಾಶಿನಿಯಲ್ಲಿ ವಿಸರ್ಜನೆ
    ಅಂದ್ಹಾಗೆ ಸುಮಾರು 25 ವರ್ಷಗಳಿಂದ ಚತುರ್ಥಿಗೆ ಗಣೇಶನನ್ನು ತಂದು ಷಷ್ಠಿಯ ದಿನ ಎಲ್ಲಾ ಮನೆಯ ಗಣೇಶನನ್ನು ಅಘನಾಶಿನಿ ತೀರಕ್ಕೆ ತರ್ತಾರೆ. ಅಲ್ಲೇ ಒಟ್ಟಿಗೆ ಎಲ್ರೂ ಗಣೇಶನ್ನ ಮುಳುಗಿಸ್ತಾರೆ. ನೋಡಿ ಗಣೇಶ ಹೇಗೆ ಎಲ್ರನ್ನೂ ಒಂದ್ ಮಾಡ್ತಾನೆ ಅಲ್ವಾ?

    ವರದಿ: ಎ.ಬಿ.ನಿಖಿಲ್, ಮುಂಡಗೋಡು
    Published by:guruganesh bhat
    First published: