Karwar: ಕರ್ನಾಟಕದ ಕಾಶ್ಮೀರದಲ್ಲಿ ಏರ್​ ಕ್ರಾಫ್ಟ್ ಮ್ಯೂಸಿಯಂ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ನೌಕಾಪಡೆಯಿಂದ ನಿವೃತ್ತಿ ಹೊಂದಿರುವ ಯುದ್ಧವಿಮಾನ ಟುಪೆಲೊವ್ 142 ವನ್ನು ಕಾರವಾರದ ಚಾಪೆಲ್ ವಾರ್​ಶಿಪ್ ಮ್ಯೂಸಿಯಂ ಬಳಿ ಯುದ್ಧವಿಮಾನದ ಮ್ಯೂಸಿಯಂ ಆಗಿ ಸ್ಥಾಪಿಸಲಾಗ್ತಿದೆ.

  • News18 Kannada
  • 5-MIN READ
  • Last Updated :
  • Karwar, India
  • Share this:

    ಉತ್ತರ ಕನ್ನಡ: ಕಾರವಾರ! (Karwar) ಕರ್ನಾಟಕದ ಕಾಶ್ಮೀರ (Kashmir Of Karnataka) ಎಂದೇ ಫೇಮಸ್ ಆಗಿರೋ ಕಡಲ ನಗರಿಯಲ್ಲಿ ಈಗ ಇನ್ನೊಂದು ಸಂಭ್ರಮ. ಏಷ್ಯಾದಲ್ಲೇ ಅತಿದೊಡ್ಡ ನೌಕಾನೆಲೆಯನ್ನ ಹೊಂದಿರುವ ಕರಾವಳಿ ನಗರಿ ಕಾರವಾರದಲ್ಲಿ ಈಗಾಗಲೇ ಚಾಪೆಲ್ ವಾರ್​ಶಿಪ್ ಮ್ಯೂಸಿಯಂ ಸಾವಿರಾರು ಪ್ರವಾಸಿಗರನ್ನ ಆಕರ್ಷಿಸುತ್ತಿದೆ. ಇದೀಗ ಕಡಲತೀರದಲ್ಲಿರುವ ವಾರ್​ಶಿಪ್ ಮ್ಯೂಸಿಯಂ ಬಳಿಯೇ ಏರ್​ಕ್ರಾಫ್ಟ್​ ಮ್ಯೂಸಿಯಂ ನಿರ್ಮಾಣಕ್ಕೆ ತಯಾರಿ ನಡೆದಿದೆ.


    ಹೌದು, ನೌಕಾಪಡೆಯಿಂದ ನಿವೃತ್ತಿ ಹೊಂದಿರುವ ಯುದ್ಧ ವಿಮಾನ ಟುಪೆಲೊವ್ 142 ವನ್ನು ಕಾರವಾರದ ಚಾಪೆಲ್ ವಾರ್​ಶಿಪ್ ಮ್ಯೂಸಿಯಂ ಬಳಿ ಯುದ್ಧವಿಮಾನದ ಮ್ಯೂಸಿಯಂ ಆಗಿ ಸ್ಥಾಪಿಸಲಾಗ್ತಿದೆ. ಭಾರತೀಯ ನೌಕಾಪಡೆ ಹಾಗೂ ಉತ್ತರ ಕನ್ನಡ ಜಿಲ್ಲಾಡಳಿತ ಜಂಟಿಯಾಗಿ ಈ ಯೋಜನೆ ರೂಪಿಸಿಕೊಂಡಿದೆ. ಈಗಾಗಲೇ ಟುಪೆಲೊವ್ ಸ್ಥಳಾಂತರಕ್ಕೆ ಟೆಂಡರ್ ಕರೆಯಲಾಗಿದೆ.




    ಕಾರವಾರಕ್ಕೆ ಸ್ಥಳಾಂತರಿಸೋಕೆ 4 ತಿಂಗಳು ಬೇಕು!
    ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಯುದ್ಧ ವಿಮಾನವನ್ನ ಬಿಡಿ ಭಾಗಗಳನ್ನಾಗಿ ಬೇರ್ಪಡಿಸಲಾಗುತ್ತದೆ. ಸುಮಾರು ನಾಲ್ಕು ತಿಂಗಳ ಅವಧಿಯಲ್ಲಿ ಕಾರವಾರಕ್ಕೆ ವಿಮಾನವನ್ನ ಸ್ಥಳಾಂತರಿಸುವ ಪ್ರಕ್ರಿಯೆ ನಡೆಯಲಿದೆ.




    ಚಾಪೆಲ್ ಯುದ್ಧನೌಕೆ ಜೊತೆ ಇನ್ನೊಂದು ತಾಣ
    ಈಗಾಗಲೇ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಟುಪೊಲೆವ್ ಯುದ್ಧ ವಿಮಾನದ ಮ್ಯೂಸಿಯಂ ಸ್ಥಾಪನೆ ಮಾಡಲಾಗಿದೆ. ಅದು ಪ್ರವಾಸಿಗರ ಆಕರ್ಷಣೆಯ ತಾಣವಾಗಿದೆ. ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಈಗಿರುವ ಚಾಪೆಲ್ ಯುದ್ಧನೌಕೆ ವಸ್ತು ಸಂಗ್ರಹಾಲಯದ ಜೊತೆಗೆ ಟುಪೊಲೆವ್ ಯುದ್ಧನೌಕೆ ಮ್ಯೂಸಿಯಂ ಸಹ ನಿರ್ಮಾಣವಾಗುವುದರಿಂದ ಪ್ರವಾಸಿಗರ ಆಕರ್ಷಣೆಯ ತಾಣವಾಗಲಿದೆ.


    ಇದನ್ನೂ ಓದಿ: Uttara Kannada: ಪ್ರಾಣ ಪಣಕ್ಕಿಟ್ಟು ಬೆಕ್ಕಿನ ಮರಿ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ!




    ಕಡಲ ತೀರದಲ್ಲಿ ಯುದ್ಧವಿಮಾನ ನಿಲುಗಡೆಗೆ ಅಗತ್ಯ ಕಾಮಗಾರಿಗಳನ್ನ 2 ಕೋಟಿ ವೆಚ್ಚದಲ್ಲಿ ರಾಜ್ಯ ಸರ್ಕಾರ ನಿರ್ವಹಿಸಲಿದೆ. ಆದಷ್ಟು ಶೀಘ್ರದಲ್ಲಿ ನಿವಾರಿಸಿ ಯುದ್ಧ ವಿಮಾನವನ್ನ ತಂದೇ ತರುತ್ತೇವೆ ಎನ್ನುತ್ತಿದ್ದಾರೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ.




    ಇದನ್ನೂ ಓದಿ: Uttara Kannada: ತಾಳೆ ಮರದಿಂದ ತುಂಬಿ ಹೋದ ವರದಾ ದಂಡೆ! ಬಂಡವಾಳದ 3 ಪಟ್ಟು ಲಾಭ ಗಳಿಸಿದ ಬನವಾಸಿ ಕೃಷಿಕರು


    ಒಟ್ಟಿನಲ್ಲಿ ಕಾರವಾರ ಕಡಲತೀರಕ್ಕೆ ಹೊಸ ಆಕರ್ಷಣೆಯಾಗಿ ಟುಪೊಲೆವ್ ಯುದ್ಧ ವಿಮಾನ ಸೇರ್ಪಡೆಯಾಗುತ್ತಿರೋದು ಉತ್ತರ ಕನ್ನಡದ ಪ್ರವಾಸೋದ್ಯಮಕ್ಕೆ ಇನ್ನಷ್ಟು ಇಂಬು ನೀಡಲಿದೆ.

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು