ಕಾರವಾರ: ನೀವೇನಾದರೂ ತೆಂಗಿನ ಮರ (Coconut Tree) ಹತ್ತುವ ಕಾಯಕ ಮಾಡುತ್ತಿದ್ದೀರೆ? ಹಾಗಿದ್ರೆ ನಿಮಗೆ ಎಂದೇ ತೆಂಗು ಅಭಿವೃದ್ಧಿ ಮಂಡಳಿಯು ಒಂದು ವಿಶಿಷ್ಟ ಕಾರ್ಯಕ್ರಮ ಜಾರಿಗೆ ಮುಂದಾಗಿದೆ. ಅದುವೇ ತೆಂಗಿನ ಮರ ಹತ್ತುವವರಿಗೆ ಇನ್ಶೂರೆನ್ಸ್. ಹೌದು, ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯ ಜೊತೆಗೂಡಿ ಮಂಡಳಿಯು ತೆಂಗಿನ ಮರ ಹತ್ತುವವರಿಗೆ ವಿಮಾ ಸೌಲಭ್ಯ ಜಾರಿಗೆ (Insurance) ತಂದಿದೆ. ಇದರ ಅಡಿ ಅಪಘಾತ ಮತ್ತು ಸಾವಿಗೆ ವಿಮಾ ಪಾಲಿಸಿಯ ಗರಿಷ್ಠ ಮೊತ್ತ ಅನ್ವಯಿಸಲಿದೆ.
ವಿಮಾ ಮೊತ್ತ ಹೀಗಿರಲಿದೆ.
ತೆಂಗಿನ ಮರ ಹತ್ತುವ ವೇಳೆ ಸಂಭವಿಸುವ ಅವಘಡದಿಂದ ಸಾವನ್ನಪ್ಪಿದ್ದಲ್ಲಿ ಅಂತಹ ವ್ಯಕ್ತಿಯ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಸಿಗಲಿದೆ. ಒಂದು ವೇಳೆ ಆಸ್ಪತ್ರೆಗೆ ದಾಖಲಾದರೆ ₹1 ಲಕ್ಷ ನೆರವು ಸಿಗುತ್ತದೆ.
ಇವರಿಗೆ ಉಚಿತ ವಿಮೆ
ಮಂಡಳಿಯು ತನ್ನ ' ಫ್ರೆಂಡ್ಸ್ ಆಫ್ ಕೊಕೊನಟ್ ಟ್ರಿ ' ಮತ್ತು ನೀರಾ ತಂತ್ರಜ್ಞ ತರಬೇತಿ ಯೋಜನೆಗಳ ಅಡಿ ತರಬೇತಿ ಪಡೆಯುತ್ತಿರುವವರಿಗೆ ಒಂದು ವರ್ಷದ ಅವಧಿಗೆ ವಿಮಾ ಸೌಲಭ್ಯವನ್ನು ಉಚಿತವಾಗಿ ಒದಗಿಸಲಿದೆ ಎಂದು ತೆಂಗು ಅಭಿವೃದ್ಧಿ ಮಂಡಳಿಯು ತಿಳಿಸಿದೆ.
ವಿಮೆ ಪ್ರೀಮಿಯಂ ಹೀಗಿರಲಿದೆ
ವಿಮೆಯ ವಾರ್ಷಿಕ ಪ್ರೀಮಿಯಂ ಮೊತ್ತ ₹375. ಇದರಲ್ಲಿ ₹281 ನ್ನು ಮಂಡಳಿಯು ಪಾವತಿಸಲಿದೆ. ಇನ್ನುಳಿದ ₹ 94 ನ್ನು ಮಾತ್ರ ವಿಮೆ ಪಡೆಯುವವರು ಪಾವತಿಸಬೇಕು
ಯಾವೆಲ್ಲ ವಯೋಮಿತಿಯವರು ಅರ್ಹರು?
ತೆಂಗಿನ ಮರ ಹತ್ತುವ ಕೆಲಸದಲ್ಲಿ ತೊಡಗಿಸಿಕೊಂಡಿರುವ 18 ರಿಂದ 65 ವರ್ಷ ವಯಸ್ಸಿನೊಳಗಿನವರು ಈ ವಿಮೆ ಪಡೆಯಲು ಅರ್ಹರಾಗಿರುತ್ತಾರೆ.
ವಿಮೆ ಮೊತ್ತ ಪಾವತಿ ಹೇಗೆ?
ವಿಮೆ ಪಾಲಿಸಿಯ ಪ್ರೀಮಿಯಂ ಮೊತ್ತವನ್ನು ಫಲಾನುಭವಿಗಳು ಆನ್ಲೈನ್ ಮೂಲಕ ಪಾವತಿಸಬಹುದು ಅಥವಾ ಕೊಕೊನಟ್ ಡೆವಲಪ್ಮೆಂಟ್ ಬೋರ್ಡ್, ಎರ್ನಾಕುಲಂ ಹೆಸರಿನಲ್ಲಿ ಡಿ.ಡಿ. ಮೂಲಕ ಪಾವತಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ
ಆಸಕ್ತ ಅರ್ಹ ಫಲಾನುಭವಿಗಳು ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ 0484-2377266 ಸಂಪರ್ಕಿಸುವುದು ಅಥವಾ ವೆಬ್ ಸೈಟ್ ಲಿಂಕ್ www.coconutboard.gov.in ಮೂಲಕ ಮಾಹಿತಿ ಪಡೆಯಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ