ಉತ್ತರ ಕನ್ನಡ: ಪುಟ್ಟ ಪುಟಾಣಿ ಮಕ್ಕಳ ಕೈಯಲ್ಲಿ ನಟ್ಟು-ಬೋಲ್ಟು, ಫ್ಯಾನ್, ಮೋಟಾರ್! ಎಲ್ಲವನ್ನು ಚಕ್ ಚಕಾಂತ ಜೋಡಿಸಿ ರೆಡಿಯಾದ ಉಪಕರಣವನ್ನು ಆಕಾಶಕ್ಕೇ ಹಾರಿಸೇಬಿಟ್ರು ಈ ಚಿನ್ನಾರಿಗಳು! ಗಾಳಿಪಟ ಹಾರಿಸೋ ಈ ಚಿಕ್ಕ ವಯಸ್ಸಲ್ಲಿ ಈ ಮಕ್ಕಳು ಹಾರಿಸ್ತಿದ್ದಾರೆ ಡ್ರೋನ್!
ಡ್ರೋನ್ ಎಂದರೆ ಕೇವಲ ಸೈನ್ಯ, ಪೊಲೀಸ್, ಸರ್ವೇಗಳೇ ನೆನಪಾಗೋದು ಸಹಜ. ಆದರೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಈ ಗ್ರಾಮೀಣ ಪ್ರದೇಶದ ಮಕ್ಕಳು ಚಿಕ್ಕ ವಯಸ್ಸಲ್ಲೇ ಡ್ರೋನ್ ಅಆಇಈ ಕಲಿತುಬಿಟ್ಟಿದ್ದಾರೆ.
ಡ್ರೋನ್ ತರಬೇತಿ ನೀಡಿದ್ಯಾರು?
ಆಗಸ್ 360 ಎಂಬ ವಿಜ್ಞಾನಾಸಕ್ತರ ತಂಡವೊಂದು ಶಾಲಾ ಮಕ್ಕಳಿಗೆ ಡ್ರೋನ್ ತಯಾರಿ ತರಬೇತಿ ನೀಡಿತು. ಶನಿವಾರ ಭಾನುವಾರದ ರಜಾದಿನವನ್ನು ಯಾಕೆ ವೇಸ್ಟ್ ಮಾಡೋದು? ಏನಾದ್ರೂ ಹೊಸದನ್ನ ಕಲಿಯಬಹುದಲ್ವಾ? ಎಂಬ ಪ್ರಶ್ನೆಗೆ ಉತ್ತರವಾಗಿ ಈ ಕ್ಯಾಂಪ್ ಹಮ್ಮಿಕೊಳ್ಳಲಾಗಿತ್ತು.
ಡ್ರೋನ್ ಹಾರಿಸೋದು ಹೇಗೆ? ಈ ಮಕ್ಕಳನ್ನು ಕೇಳಿ
ಯಲ್ಲಾಪುರದ ಯುಕೆ ನೇಚರ್ ಸ್ಟೇಯಲ್ಲಿ ನಡೆದ ಈ ಡ್ರೋನ್ ಟ್ರೇನಿಂಗ್ ಕ್ಯಾಂಪ್ನಲ್ಲಿ ಹತ್ತಾರು ಮಕ್ಕಳು ಡ್ರೋನ್ ಹೇಗೆ ಹಾರುತ್ತೆ? ಡ್ರೋನ್ ಹಾರಿಸೋದು ಹೇಗೆ? ಎಲ್ಲರೂ ಡ್ರೋನ್ ತಯಾರಿಸಬಹುದೇ? ಎಂಬ ಮಾಹಿತಿ ಪಡೆದರು. ಮಕ್ಕಳು ತಮ್ಮ ಕೈಯಿಂದಲೇ ಡ್ರೋನ್ ತಯಾರಿಸಿ ಅವರೇ ಹಾರಿಸಿ ಹಾರಿಸಿ ಖುಷಿಪಟ್ಟರು.
ಕಲಿಯೋಕಾದ್ರೂ ಡ್ರೋನ್ ಸಿಕ್ಕಿದ್ದೆಲ್ಲಿಂದ?
ಇಷ್ಟೆಲ್ಲ ತರಬೇತಿ ಕೊಡೋಕೆ ಡ್ರೋನ್ ಎಲ್ಲಿಂದ ಸಿಕ್ತು ಅನ್ನೋ ಪ್ರಶ್ನೆ ಏಳೋದು ಸಹಜ. ಮಕ್ಕಳಿಗೆ ತರಬೇತಿ ನೀಡೋಕೆ ಎಂದೇ ಆಗಸ್ 360 ತಂಡದ ಸದಸ್ಯರು ಡ್ರೋನ್ನ ಬಿಡಿಭಾಗಗಳನ್ನು ಸಂಗ್ರಹಿಸಿ ತಂದಿದ್ದರು. ಇದೇ ಬಿಡಿಭಾಗಗಳನ್ನು ಸೇರಿಸಿ, ಜೋಡಿಸಿ ಕಂಪ್ಲೀಸ್ ರೆಡಿ ಮಾಡಿ ಮಕ್ಕಳು ಹಾರಿಸಿ ಖುಷಿಪಟ್ಟರು.
ಇದನ್ನೂ ಓದಿ: House Lifting Technology: ಕಟ್ಟಿದ ಮನೆಯೇ ನೆಲದಿಂದ 6 ಅಡಿ ಎತ್ತರಕ್ಕೆ ಲಿಫ್ಟ್!
ಏನಿದು ಆಗಸ್ 360?
ಆಗಸ್ 360 ಅನ್ನೋದು ವಿಜ್ಞಾನವನ್ನು ಅಧ್ಯಯನ ಮಾಡೋಕೆ ಯುವಕರೇ ಕಟ್ಟಿಕೊಂಡಿರೋ ಪುಟ್ಟ ತಂಡ. ಶಿರಸಿಯ ಭೈರುಂಬೆಯ ಶಾರದಾಂಬಾ ಹೈಸ್ಕೂಲ್ ಹೆಡ್ ಮಾಸ್ಟರ್ ವಸಂತ ಹೆಗಡೆ ಸ್ಥಾಪಿಸಿದ ಈ ಸಂಸ್ಥೆ ಗ್ರಾಮೀಣ ಭಾಗದಲ್ಲಿ ವಿಜ್ಞಾನ ಅಧ್ಯಯನ ವಾತಾವರಣ ಹುಟ್ಟುಹಾಕುತ್ತಿದೆ. ಈ ತರಬೇತಿ ಶಿಬಿರದಲ್ಲಿ ಶಿರಸಿ ಮತ್ತು ಸಿದ್ದಾಪುರದ ಸರ್ಕಾರಿ ಶಾಲೆಗಳನ್ನು ಸೇರಿ ಖಾಸಗಿ ಶಾಲೆಗಳ ಹತ್ತಾರು ವಿದ್ಯಾರ್ಥಿಗಳು ಡ್ರೋನ್ ತರಬೇತಿ ಪಡೆದಿದ್ದಾರೆ.
ಇದನ್ನೂ ಓದಿ: Uttara Kannada: ಜೇನು ಮೇಣದಿಂದ ಪೇಪರ್ ತಯಾರಿ! ಯಲ್ಲಾಪುರದ ಕೃಷಿಕರ ವಿಶಿಷ್ಟ ಬ್ಯುಸಿನೆಸ್
ಒಟ್ಟಾರೆ ಈ ಆಗಸ್ 360 ಇದೇ ಮೊದಲ ಬಾರಿಗೆ ಗ್ರಾಮೀಣ ಭಾಗದಲ್ಲಿ ಪ್ರಾಯೋಗಿಕ ಡ್ರೋನ್ ತಯಾರಿಕಾ ಶಿಬಿರ ಸಖತ್ ಸುದ್ದಿ ಮಾಡುತ್ತಿದೆ. ಜೊತೆಗೆ ಮಕ್ಕಳಲ್ಲಿ ವಿಜ್ಞಾನ ಕಲಿಯಲು ಪ್ರೇರಣೆಯನ್ನಂತೂ ನೀಡಿದೆ.
ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ