ಉತ್ತರ ಕನ್ನಡ: ಅಂದ ಚೆಂದದ ಕಲರ್ಫುಲ್ (Colorful) ಜೋಳಿಗೆಗಳು, ತೊಟ್ಟಿಲು, ತೂಗುಯ್ಯಾಲೆಗಳು ( cradle). ಹಗ್ಗದಿಂದ ಎಳೆದು ಕಟ್ಟಿದ ಈ ಸುಖಾಸನಗಳು ನೋಡಲಿಕ್ಕೂ ಚೆಂದ, ಕೈ ಕಾಲು ಚಾಚಿ ಆರಾಮದಾಯಕವಾಗಿ ಆಸೀನ ಆಗೋದಕ್ಕೂ ಚೆಂದ. ಇದೊಂಥರಾ ಹವ್ಯಾಸವೇ (Hobby) ಸ್ಟಾರ್ಟ್ ಅಪ್ ಕಂಪೆನಿ ಆಗಿ ಬದಲಾಯಿಸಿಕೊಂಡ ಗೃಹಿಣಿಯೋರ್ವರ ಸಕ್ಸಸ್ ಕಥೆ.
ಕಲರ್ ಫುಲ್ ತೊಟ್ಟಿಲುಗಳ ಲೋಕ
ಹೌದು, ಹವ್ಯಾಸಕ್ಕಾಗಿ ಉಯ್ಯಾಲೆ ತಯಾರಿಸಲು ಆರಂಭಿಸಿದ್ದ ಉತ್ತರ ಕನ್ನಡದ ಶಿರಸಿಯ ಕೊಡೆ ಮನೆಯ ಆಶಾ ದಿನೇಶ್ ಹೆಗಡೆ ಅವರೇ ಈಗ ಈ ಕಲರ್ ಫುಲ್ ತೊಟ್ಟಿಲುಗಳ ವ್ಯಾಪಾರಿ. ಹೂವನ್ನು ಪೋಣಿಸುವ ಹಾಗೆ ಆಶಾ ಅವ್ರು ದಾರ ಹೊಸೆಯುತ್ತಿದ್ದರೆ ನಾನಾ ಆಕಾರ ಪಡೆದುಕೊಳ್ಳುವ ಈ ವಸ್ತುಗಳು ಗೃಹೋಪಯೋಗಿ, ಪರಿಸರ ಸ್ನೇಹಿ, ಪ್ರವಾಸ ಸ್ನೇಹಿ ಆಸೀನಗಳಾಗಿ ಮಾರ್ಪಾಡಾಗುತ್ತವೆ.
ಹೀಗಿದೆ ಅಂದ ಚೆಂದದ ಜೋಕಾಲಿಗಳು
ಎರಡು ಬಣ್ಣದ ಹಗ್ಗ ಹಾಗೂ ತೆಳ್ಳನೆಯ ದಾರಗಳ ಬೆಸುಗೆಯೊಂದಿಗೆ ಈ ವಸ್ತುಗಳು ತಯಾರಾಗಲ್ಪಡುತ್ತವೆ. ನಡು ನಡುವೆ ಹರಳುಗಳು, ಮಣಿಗಳು ತೂಗುಯ್ಯಾಲೆಗಳ ಅಲಂಕಾರ ಹೆಚ್ಚಿಸುತ್ತವೆ. ಸಣ್ಣ ಜೋಕಾಲಿಯಾದ್ರೆ 100 ಕೆಜಿ ತನಕ ಭಾರವನ್ನೂ ತಡೆಕೊಳ್ಳುತ್ತವೆ. ಇನ್ನು ಅಳತೆ ಹೆಚ್ಚುತ್ತಾ ಇದರ ತೂಕ ಹೊರುವ ಸಾಮರ್ಥ್ಯವೂ ಹೆಚ್ಚುತ್ತದೆ. ಪ್ಲಾಸ್ಟಿಕ್ ಅಥವಾ ಉಳಿದ ಬಟ್ಟೆಗಳ ಜೋಕಾಲಿ ಗಿಂತ ಇದು ಆರಾಮದಾಯಕ ಹಾಗೂ ಸುರಕ್ಷಿತವಾದಂತಹ ರಚನೆಯನ್ನೂ ಹೊಂದಿದೆ.
ಪತಿ ನೀಡಿದ ಸಲಹೆ
ಹಾಗಂತ ಈ ಐಡಿಯಾ ಅವರಿಗೆ ಒಮ್ಮೆಲೇ ಬಂದಿದ್ದಲ್ಲ. ಐದೂವರೆ ವರ್ಷದ ಹಿಂದೆ ಆಶಾ ಅವರ ಗಂಡ ದಿನೇಶ್ ಅವರು ಮರದಿಂದ ಬಿದ್ದು ಬೆನ್ನು ಮೂಳೆ ಮುರಿದು ಹಾಸಿಗೆಯಿಂದ ಏಳದ ಪರಿಸ್ಥಿತಿಗೆ ತಲಪುತ್ತಾರೆ. ಆಗ ದಿನೇಶ್ ತನ್ನ ಪತ್ನಿಗೆ ಈ ರೀತಿಯ ಸಲಹೆ ನೀಡಿದ್ದರು.
ಇದ್ರಿಂದ ಹವ್ಯಾಸಕ್ಕಾಗಿ ಆರಂಭವಾದ ಈ ಸ್ಟಾರ್ಟ್ ಅಪ್ ಬ್ಯುಸಿನೆಸ್ ಈಗ ಆಶಾ ಅವರ ಕುಟುಂಬದ ನಿರ್ವಹಣೆಗೂ ದಾರಿ ಮಾಡಿಕೊಟ್ಟಿದೆ. ಸಣ್ಣ ಗಾತ್ರದ ಉಯ್ಯಾಲೆ ₹3,500 ದಿಂದ ಶುರುವಾಗಿ ₹6,500ದ ತನಕದ್ದು ಇದೆ. ಜನರಿಂದ ಉತ್ತಮ ಬೇಡಿಕೆಯೂ ಇದೆ. ಆಶಾ ಅವ್ರು 20 ತಾಸಲ್ಲಿ ಒಂದು ಜೋಕಾಲಿಗೆ ರೂಪ ನೀಡಬಲ್ಲರು.
ಒಟ್ಟಿನಲ್ಲಿ ಆಶಾ ಅನ್ನೋ ಗೃಹಿಣಿ ಕಂಡುಕೊಂಡ ಈ ಪುಟ್ಟದಾದ ಪ್ರಯತ್ನ ಅವರ ಬದುಕಿಗೊಂದು ಉತ್ತಮ ಭವಿಷ್ಯ ನೀಡುವ ಕಾತರದಲ್ಲಿದೆ.
ನಿಮಗೂ ಸುಖಾಸೀನರಾಗಲು ಇಂತಹ ಉಯ್ಯಾಲೆಗಳು ಬೇಕಿದ್ದಲ್ಲಿ ನೀವೂ ಆಶಾ ಅವರನ್ನು ಸಂಪರ್ಕಿಸಬಹುದಾಗಿದೆ. ದೂರವಾಣಿ ಸಂಖ್ಯೆ:94839 63274
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ