ಉತ್ತರ ಕನ್ನಡ: ಕಿಚ್ಚ ಸುದೀಪ್, ಟೈಗರ್ ಶ್ರಾಫ್, ರಾಕಿ ಬಾಯ್ ಯಶ್ ಹೀಗೆ ಯಾರೇ ಇರ್ಲಿ ಈ ಹುಡುಗನ ಕೈಯ್ಯಲ್ಲಿ ಯಥಾವತ್ತಾಗಿ ಮೂಡಿಬರ್ತಾರೆ. ಎದುರುಗಡೆ ನಿಂತ್ರೆ ಸಾಕು, ಇಲ್ಲಾಂದ್ರೆ ಫೋಟೋ ಕೊಟ್ರೆ ಸಾಕು, ಪೆನ್ಸಿಲ್ ಸಹಾಯದಿಂದ ಕಾಪಿ ಪೇಸ್ಟ್ ಮಾಡಿಕೊಡುವ ಟ್ಯಾಲೆಂಟ್ (Talented Boy) ಈತ. ಅಷ್ಟಕ್ಕೂ ಈ ಹುಡುಗನ ಟ್ಯಾಲೆಂಟ್ ಅದೆಂತಹದ್ದು ಅಂತೀರಾ? ಸಣ್ಣ ವಯಸ್ಸಿಗೆ ಈತನ ಸಾಧನೆಗೆ (Success Story) ತಲೆದೂಗ್ತೀರ.
ಯೆಸ್, ಹೀಗೆ ಮೊಬೈಲ್ನಲ್ಲಿ ಚಿತ್ರ ನೋಡುತ್ತಾ ಕಾಗದದಲ್ಲಿ ಪೆನ್ಸಿಲ್ ಟಚ್ ನೀಡ್ತಿರೋ ಈ ಹುಡುಗನ ಹೆಸರು ಶ್ರೇಯಾಂಕ್ ಪಾಟೀಲ್. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಶ್ರೇಯಾಂಕ್ ಯಾರದ್ದೇ ಭಾವಚಿತ್ರ ಕಂಡರೂ ಅದಕ್ಕೊಂದು ಚೆಂದದ ರೂಪು ನೀಡಬಲ್ಲರು. ವಿವಿ ಸ್ಕೂಲ್ ಆಫ್ ಎಕ್ಸೆಲೆನ್ಸ್ ಅಲ್ಲಿ ಒಂಬತ್ತನೇ ತರಗತಿ ಓದುತ್ತಿರುವ ಶ್ರೇಯಾಂಕ್, ತನ್ನ ಕೈಚಳಕದ ಮೂಲಕ ಚಮತ್ಕಾರ ಮೂಡಿಸಬಲ್ಲ ಚಾಕಚಕ್ಯತೆಯನ್ನ ಹೊಂದಿದ್ದಾರೆ.
ಸೇಮ್ ಟು ಸೇಮ್ ಚಿತ್ರ ಬಿಡಿಸ್ತಾರೆ!
ಸ್ಟಾರ್ ನಟರಿಂದ ಹಿಡಿದು ತಮ್ಮದೇ ಸ್ನೇಹಿತರ, ಮನೆ ಮಂದಿಯ, ಕುಟುಂಬಿಕರ ಚಿತ್ರವನ್ನು ಸೇಮ್ ಟು ಸೇಮ್ ಅಚ್ಚು ತೆಗೆದ ಮಾದರಿಯಲ್ಲಿ ಚಿತ್ರ ಮೂಡಿಸಿಬಿಡ್ತಾರೆ ಈ ಬಾಲಕ!
ಇದನ್ನೂ ಓದಿ: Snake Viral Video: ನಾಗರಹಾವು ರಸ್ತೆ ದಾಟಲು ಹೆದ್ದಾರಿಯೇ ಅರ್ಧ ಗಂಟೆ ಬಂದ್!
ಹಲವು ಪುರಸ್ಕಾರಗಳೂ ದೊರೆತಿವೆ
ಶ್ರೇಯಾಂಕ್ ಪಾಟೀಲ್ ತನ್ನ 5ನೇ ವಯಸ್ಸಿನಲ್ಲಿ ಗಣೇಶನ ಹಬ್ಬಕ್ಕೆ ಕೂರಿಸೋ ಗಣಪತಿಯ ಚಿತ್ರ ಬಿಡಿಸುವ ಮೂಲಕ ತನ್ನ ಆಸಕ್ತಿಯನ್ನು ಚಿತ್ರಕಲೆಯಲ್ಲಿ ತೋರಿಸಿದ್ದರು. ಈಗ ಅದೇ ಮುಂದುವರೆದು ವ್ಯಕ್ತಿಗಳ ಚಿತ್ರಗಳನ್ನು ಬರೆಯುವ ಮಟ್ಟಕ್ಕೆ ಬೆಳೆದಿದ್ದಷ್ಟೇ ಅಲ್ಲದೇ ಯಾವ ಗುರುವೂ ಇಲ್ಲದೇ ಕಲಿತ ವಿದ್ಯೆಗೆ ಹಲವು ಪುರಸ್ಕಾರವೂ ಸಂದಿವೆ.
ಔರಂಗಾಬಾದ್ನಲ್ಲಿ ಕಲಾವಿದರಿಗೆ ಕೊಡುವ ಬಾಲ ಕಲಾರತ್ನ ಪ್ರಶಸ್ತಿಯನ್ನೂ ಹಾಗೂ ಜಿಲ್ಲೆಯ ಪ್ರತಿಷ್ಠಿತ ಪುರಸ್ಕಾರಗಳಲ್ಲಿ ಒಂದಾದ ಗಾಂವ್ಕರ್ ಮೆಮೋರಿಯಲ್ ಟ್ರಸ್ಟ್ ನ ಪುರಸ್ಕಾರವನ್ನು ಪಡೆದಿದ್ದಾರೆ.
ಇದನ್ನೂ ಓದಿ: Uttara Kannada: 2 ಸಾವಿರಕ್ಕಿಂತ ಕಡಿಮೆ ಹಣಕ್ಕೆ ಅದ್ಭುತ ಕೃಷಿ ಉಪಕರಣ ತಯಾರಿಸಿದ ವಿದ್ಯಾರ್ಥಿಗಳು!
ಶ್ರೇಯಾಂಕ್ ಪೋರ್ಟ್ರೇಟ್ ಕಲೆಯಲ್ಲಿ ಗಣಪತಿ, ದುರ್ಗೆ, ರಾಕಿ ಭಾಯ್, ಟೈಗರ್ ಶ್ರಾಫ್ ಅಲ್ಲದೇ ತನ್ನ ಅಪ್ಪ, ಅಮ್ಮ, ಅಕ್ಕಂದಿರು, ಗೆಳೆಯರು, ನೆಂಟರು-ಇಷ್ಟರು ಎಲ್ಲರೂ ಚಿತ್ರವಾಗಿದ್ದಾರೆ. ಕಲಾ ಸರಸ್ವತಿಯ ಕೃಪೆ ಶ್ರೇಯಾಂಕ್ ಪಾಟೀಲ್ ಮೇಲೆ ಸದಾ ಹೀಗೆ ಇರಲಿ ಎಂದು ನಾವು ಕೂಡಾ ಶುಭ ಹಾರೈಸೋಣ.
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ