ಇಲ್ಲಿ ಗಂಗೆಯೂ ಇವಳೇ, ಶಿವನೂ ಇವಳೇ! ಗೌರಿ, ಭಗೀರಥರೂ ಇವಳೇ! ಇರೋ ಎಲ್ಲಾ ಪಾತ್ರಗಳಲ್ಲೂ ಕಾಣಿಸಿಕೊಳ್ಳುವವರು ಒಬ್ಬರೇ! ಭಾಗವತಿಕೆಗೆ ತಕ್ಕ ಹಾಗೆ ಹೆಜ್ಜೆ ಹಾಕ್ತಾ, ಪಾತ್ರಗಳನ್ನು ನಿಭಾಯಿಸ್ತಾ ಜನರಿಗೆ ಮನ ಮುಟ್ಟುವಂತೆ ಪುರಾಣವನ್ನ ತಿಳಿಸಿಕೊಡ್ತಿರೊ ಈ ಪುಟ್ಟ ಬಾಲಕಿಯದ್ದು ಏಕಪಾತ್ರಾಭಿನಯದ ಯಕ್ಷಗಾನ! ಯಕ್ಷಗಾನ (Yakshagana Artist) ಅತ್ಯಂತ ಶಿಸ್ತುಬದ್ಧ ಕಲೆ. ಅಷ್ಟೇ ಅಲ್ಲ ಅದರಲ್ಲಿನ ಪಾತ್ರಗಳನ್ನ ನಿಭಾಯಿಸೋದು ಅಷ್ಟೇ ಕಷ್ಟ. ಆದ್ರೆ ಉತ್ತರ ಕನ್ನಡ ಜಿಲ್ಲೆಯ (Uttara Kannada) ಶಿರಸಿಯ (Sirsi) ಬೆಟ್ಟಕೊಪ್ಪ ಗ್ರಾಮದ ಬಾಲಕಿ ತುಳಸಿ ಹೆಗಡೆ (Tulasi Hegde) ಒಂದೇ ಸಮಯಕ್ಕೆ ಎರಡೆರಡು ಪಾತ್ರಗಳನ್ನ ನಿಭಾಯಿಸಬಲ್ಲರು.
ಏಕಪಾತ್ರಾಭಿನಯದ ಮೂಲಕ ಏಕವ್ಯಕ್ತಿ ಯಕ್ಷಗಾನ ಅನ್ನೋ ಕಾನ್ಸೆಪ್ಟ್ಗೆ ಜೀವ ತುಂಬಬಲ್ಲಳು. ಯಕ್ಷ ಗೆಜ್ಜೆ ಕಟ್ಟಿ ಒಂದೇ ಸಮಯಕ್ಕೆ ಶಿವ, ಗಂಗೆ, ಗೌರಿ, ಭಗೀರಥನಾಗಬಲ್ಲರು. ಶಿರಸಿಯ ಮಾರಿಕಾಂಬಾ ಹೈಸ್ಕೂಲ್ನಲ್ಲಿ 8ನೇ ಕ್ಲಾಸ್ನ ವಿದ್ಯಾರ್ಥಿನಿಯಾಗಿರೋ ತುಳಸಿ ಹೆಗಡೆ ಏಕವ್ಯಕ್ತಿ ಯಕ್ಷಗಾನಕ್ಕೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗೌರವಕ್ಕೂ ಭಾಜನರಾಗಿದ್ದಾರೆ.
ಇದನ್ನೂ ಓದಿ: Uttara Kannada: ಗುಡಿಗಾರ ಕುಟುಂಬದ ಕೆತ್ತನೆಯ ಚಮತ್ಕಾರ! ಇಲ್ಲಿದೆ ನೋಡಿ ಅದ್ಭುತ ವಿಡಿಯೋ
ಯಕ್ಷಗಾನ ಪ್ರೇಮಿಗಳಿಗೆ ಇವರೆಂದ್ರೆ ಭಾರೀ ಇಷ್ಟ
ಯಕ್ಷಗಾನದಲ್ಲಿ ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ಲಯ-ಭಾವ-ರಸಗಳಿರುತ್ತೆ. ಎಲ್ಲವನ್ನೂ ಒಬ್ಬರೇ ಭರಿಸಲಿಕ್ಕೆ ಸಾಧ್ಯವಿಲ್ಲವಾದರೂ, ತುಳಸಿ ಹೆಗಡೆ ಸಾಧಿಸಿ ತೋರಿಸಿದ್ದಾರೆ. ಏಕವ್ಯಕ್ತಿ ಯಕ್ಷಗಾನವಾದ್ರೂ ಎಲ್ಲಿಯೂ ರಸಭಂಗಕ್ಕೆ ಆಸ್ಪದ ಕೊಡದೇ ಯಕ್ಷಗಾನ ಪ್ರೇಮಿಗಳ ಮನ ತಣಿಸುತ್ತಾರೆ.
ಇದನ್ನೂ ಓದಿ: Inspiration: ಇಡೀ ಊರಿಗೇ ಅಗರಬತ್ತಿ ಪರಿಮಳ ಹರಡುವ ಸಾಧಕ! ಇವರದ್ದು ಸ್ಫೂರ್ತಿ ನೀಡುವ ಜೀವನ
ಚಿಕ್ಕ ವಯಸ್ಸಲ್ಲೇ ಅಸಾಮಾನ್ಯ ಸಾಧನೆ
ಹೀಗೆ ಏಕವ್ಯಕ್ತಿ ಯಕ್ಷಗಾನದ ಮೂಲಕ ಚಿಕ್ಕ ವಯಸ್ಸಲ್ಲೇ ಅಸಾಮಾನ್ಯ ಸಾಧನೆ ಮಾಡ್ತಿರೋ ತುಳಸಿ ಹೆಗಡೆ ಯಕ್ಷಗಾನ ರಂಗದಲ್ಲಿ ಹೊಸ ಛಾಪು ಮೂಡಿಸಿದ್ದಾರೆ. ಇವರ ಈ ಪ್ರಯತ್ನಕ್ಕೆ ಇನ್ನಷ್ಟು ಪ್ರಶಸ್ತಿ, ಪುರಸ್ಕಾರಗಳು ಅರಸಿ ಬರಲಿ ಅನ್ನೋ ಹಾರೈಕೆ ನಮ್ಮದು.
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ