Uttara Kannada News: ಈ 88ರ ಹರೆಯದ ಅಜ್ಜಿಯ ಜೀವನ ಪ್ರೀತಿಗೆ ಬಿಗ್‌ ಸೆಲ್ಯೂಟ್!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಹೂವಿನ ಜೊತೆಗಿನ ಇವರ ಸಂಬಂಧ 75 ವರ್ಷದ್ದು. ಅಜ್ಜಿ ಯಾಕೆ ಇಷ್ಟು ಕಷ್ಟ ಪಡ್ತೀರ? ಅಂತ ಕೇಳಿದ್ರೆ, "ನಮ್ಮ ಗಂಜಿ ನಾವೇ ಬೇಯ್ಸಬೇಕು, ಯಾರ್ ಹಂಗಲೂ ಇರೋದಲ್ಲ" ಅಂತಾರಿವರು.

  • News18 Kannada
  • 4-MIN READ
  • Last Updated :
  • Ankola, India
  • Share this:

ಉತ್ತರ ಕನ್ನಡ: ನೆಲದ ಮೇಲೆ ಕೂತು ಕನಕಾಂಬರದ ಮಾಲೆ ಕಟ್ಟುತ್ತಿರೋ ಈ ಅಜ್ಜಿಯ (Old Lady) ಜೀವನ ಪ್ರೀತಿ ನೋಡಿದ್ರೆ ಆಶ್ಚರ್ಯ ಪಡ್ಲೇಬೇಕು. ಬರೇ ಒಂದೆರಡು ನಿಮಿಷ ಅಲ್ಲ, ಹಗಲಲ್ಲಿ ಬಹುತೇಕ ಈ ಮಹಾತಾಯಿಯ ಕಾಯಕವೇ (Work is Worship) ಈ ಹೂವಿನ ಜೊತೆಗೆ. ಇದೇ ಹೂ ತಾನೇ ತನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದ್ದು ಅನ್ನೋ ಹಿರಿಮೆ ತಾಯಿಗಾದ್ರೆ, ಇವ್ರ ಕೈಯಿಂದ ಮಾರಾಟವಾಗುತ್ತ ಎಪ್ಪತೈದು ವರ್ಷ ಆಯ್ತು ಅನ್ನೋ ಹೆಗ್ಗಳಿಕೆ ಈ ಕನಕಾಂಬರದಂತಹ ಹೂವಿಗೆ!




ಹೂವಾಡಗಿತ್ತಿ ಈ ಅಜ್ಜಿ!
ಅಂದಹಾಗೆ ಇವರ ಹೆಸರು ಯಂಕು ನಾಯ್ಕ್ ಅಂತಾ. 88 ವರ್ಷದ ಇವರು ಅಂಕೋಲಾದ ಬಂಡಿಕಟ್ಟೆಯವರು. ಸ್ವಾಭಿಮಾನಕ್ಕೆ ಇನ್ನೊಂದು ಹೆಸ್ರು ಹೇಳೋದಿದ್ರೆ ಈ ಯಂಕು ನಾಯ್ಕ್ ಅದಕ್ಕೆ ಪರ್ಫೆಕ್ಟ್ ಆಗಿ ಮ್ಯಾಚ್ ಆಗಬಲ್ಲರು. ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆ ತನಕ ಈಗಲೂ ಗಮ್ಮತ್ತಿಂದ ಯಾವ ಯುವಕ-ಯುವತಿಯರಿಗೂ ಕಮ್ಮಿ ಇಲ್ಲದಂತೆ ಹೂವನ್ನು ಮಾರುವ ಹೂವಾಡಗಿತ್ತಿ ಈ ಯಂಕು ನಾಯ್ಕ್.


ಇದನ್ನೂ ಓದಿ: Paper File Business: ನಾವು ನೀವು ಬಳಸೋ ಪೇಪರ್‌ ಫೈಲ್ ತಯಾರಾಗೋದು ಉತ್ತರ ಕನ್ನಡದ ಈ ಊರಲ್ಲೇ!




ಹೂ ಮಾರಾಟಕ್ಕೆ ಅಮೃತ ಮಹೋತ್ಸವ
ಅಂಕೋಲಾದ ಜೈ ಹಿಂದ್ ಹೋಟೇಲ್ ಬಳಿ ದಿನವೆಲ್ಲ, ಅಬ್ಬಲಿಗೆ, ಸೇವಂತಿಗೆ, ಮಲ್ಲಿಗೆ ಮಾಲೆಗಳನ್ನು ಕಟ್ಟಿ ವ್ಯಾಪಾರ ನಡೆಸುವ ಇವರ ಹೂವಿನ ವ್ಯಾಪಾರಕ್ಕೆ ಈಗ ಅಮೃತ ಮಹೋತ್ಸವದ ಸಂಭ್ರಮ. ಸುಮಾರು 75 ವರ್ಷದಿಂದ ಹೂ ಕಟ್ಟಿ ಆರು ಗಂಡುಮಕ್ಕಳನ್ನ ಓದಿಸಿ ಮದುವೆ ಮಾಡಿಸಿದ ಶ್ರೇಯಸ್ಸು ಇವರಿಗಿದೆ. ಹೀಗೆ ಜೀವನವಿಡೀ ಇವ್ರದ್ದು ಹೂವಿನ ಜೊತೆಗಿನ ಸಂಬಂಧ ಕಡಿಮೆಯದ್ದಲ್ಲ.




ಅಜ್ಜಿಗೆ ಬಿಗ್‌ ಸೆಲ್ಯೂಟ್!
ಒಂದು ಮಾಲೆಗೆ 20 ರಿಂದ 30 ರೂಪಾಯಿ ಮಾರಾಟ ಮಾಡುವ ಯಂಕು ನಾಯ್ಕ್, ವಿಶೇಷ ದಿನಗಳಲ್ಲಿ ಭರ್ಜರಿ ವ್ಯಾಪಾರ ಪಡೆಯುತ್ತಾರೆ. ಹಾಗಂತ ನೋಡಿದರೆ ಇವರದು ಕೂಡು ಕುಟುಂಬ, ಇವರಿಗೆ ದುಡಿಯಬೇಕಾದ ಅನಿವಾರ್ಯತೆಗಳಿಲ್ಲ.


ಇದನ್ನೂ ಓದಿ: Sirsi News: ಬತ್ತಿ ಹೋಗಿದ್ದ ದೇವರ ಕಲ್ಯಾಣಿಗೆ ಮರುಜೀವ ನೀಡಿದ ಯುವ ಪಡೆ!


ಅಜ್ಜಿ ಯಾಕೆ ಇಷ್ಟು ಕಷ್ಟ ಪಡ್ತೀರ? ಅಂತ ಕೇಳಿದ್ರೆ "ನಮ್ಮ ಗಂಜಿ ನಾವೇ ಬೇಯ್ಸಬೇಕು, ಯಾರ್ ಹಂಗಲೂ ಇರೋದಲ್ಲ, ಜೀವದಲ್ ಉಸಿರ್ ಇರೋ ತನಕ ದುಡಿಯೋದು ಬದುಕಿನ ಲಕ್ಷಣ" ಅಂತ ಹೇಳ್ತಾರೆ. ಇವ್ರ ಜೀವನ ಪ್ರೀತಿಗೆ ನಿಜಕ್ಕೂ ಸೆಲ್ಯೂಟ್ ಹೇಳಲೇಬೇಕು.

top videos
    First published: