Positive Story: 81 ರ ಹರೆಯದ ಅಜ್ಜಿಯ ಕೈ ಚಳಕ, ಟೂತ್​ ಪೇಸ್ಟ್ ಮುಚ್ಚಳದಿಂದ ತಯಾರಾಯ್ತು ಬಾಗಿಲ ತೋರಣ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

81 ನೇ ವಯಸ್ಸಿನ ಇವರ ಜೀವನೋತ್ಸಾಹ ಕಂಡ್ರೆ ಯಾರೇ ಆದ್ರೂ ತಲೆದೂಗಬೇಕು. ಬೇಕಿದ್ರೆ ನೀವೇ ಈ ವೃದ್ಧೆಯ ಸಾಧನೆ ನೋಡಿ!

  • Share this:

ಉತ್ತರ ಕನ್ನಡ: ಅಡಿಕೆ ಹೂವಿನ ಹೊದಿಕೆಯಿಂದ ಕಾಶಿಯಾತ್ರೆಯ ಕೊಡೆ, ಆರತಿ ತಟ್ಟೆ, ಕವಳದ ಡಬ್ಬಿ, ಅರಿಶಿನ-ಕುಂಕುಮದ ಹರಿವಾಣ, ಚೀಲ, ತೊಟ್ಟಿಲುಗಳು. ಅಬ್ಬಬ್ಬಾ ನೋಡುತ್ತಿದ್ದರೆ ಇಲ್ಲಿ ಕಲಾ ಪ್ರಪಂಚವೇ (Art Work) ಮೇಳೈಸಿಬಿಟ್ಟಿದೆ. ಯಾರೋ ಹತ್ತೋ ಇಪ್ಪತ್ತೋ ಜನ ಸೇರಿ ಇದನ್ನೆಲ್ಲಾ ಮಾಡಿದ್ದಾರೆ ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಇದನ್ನು ಮಾಡಿರೋದು ಓರ್ವ ಮಹಿಳೆ. ಮಹಿಳೆ ಅನ್ನೋದಕ್ಕಿಂತಲೂ 81 ವರ್ಷ ಪ್ರಾಯದ (Old Lady) ಇಳಿವಯಸ್ಸಿನ ವೃದ್ಧೆ.


ಹೌದು, ಉತ್ತರ ಕನ್ನಡದ ಶಿರಸಿಯ ಕಲಗಾರ ಒಡ್ಡುವಿನ ನಿವಾಸಿ ಕುಸುಮಾ ವೆಂಕಟರಮಣ ಭಟ್ ಅವರೇ ಈ ಕಲಾಕೃತಿಗಳ ತಯಾರಕರು. 81 ನೇ ವಯಸ್ಸಿನ ಇವರ ಜೀವನೋತ್ಸಾಹ ಕಂಡ್ರೆ ಯಾರೇ ಆದ್ರೂ ತಲೆದೂಗಬೇಕು. 60 ವರ್ಷದವರಿದ್ದಾಗ ಕೊಟ್ಟಿಗೆಯಲ್ಲಿದ್ದ ಅಡಿಕೆ ಹೂವಿನ ಹಾಳೆಗಳಿಂದ ಇಂತಹ ಕಲಾಕೃತಿಗಳ ತಯಾರಿಕೆ ಆರಂಭಿಸಿದರು.




ವಿವಿಧ ಕಲಾಪ್ರಕಾರಗಳು
ಒಂದೊಂದಾಗಿ ಮಾಡ್ತಾ ಈಗ ಅದ್ಭುತ ಕಲಾಪ್ರಪಂಚವನ್ನೇ ಸೃಷ್ಟಿಸಿದ್ದಾರೆ. ತಮ್ಮ ಈ ಕಲಾಚಾತುರ್ಯದಿಂದ ಕುಸುಮಾ ಅವರು ಆರತಿ ತಟ್ಟೆ, ಹರಿವಾಣ, ತೊಟ್ಟಿಲು, ಸಂಚಿ, ಬುಟ್ಟಿ, ಕಾಶಿಯಾತ್ರೆಯ ಕೊಡೆ, ಚಪ್ಪಲಿ, ವರಗಾಯಿ, ಆಭರಣಗಳನ್ನೆಲ್ಲಾ ತಯಾರಿಸಿದ್ದಾರೆ. ಕಳೆದ ಇಪ್ಪತ್ತು ವರ್ಷದಿಂದ ಎಲೆಮರೆಯ ಕಾಯಿಯಂತೆ ಈ ಕಲಾಸೇವೆ ಮುಂದುವರೆಸಿಕೊಂಡು ಬಂದಿದ್ದಾರೆ.




ಇದನ್ನೂ ಓದಿ: Gopalakrisha Temple: ಯಕ್ಷಗಾನ ಪ್ರಿಯ ಗೋಪಾಲಕೃಷ್ಣ! ಅಣಲಗಾರು ಕ್ಷೇತ್ರದ ಮಹಿಮೆಯಿದು


ಪೇಸ್ಟ್‌ ಸ್ಯಾಶೆಯಲ್ಲಿ ಬ್ಯಾಗ್
ಅಷ್ಟೇ ಅಲ್ಲದೇ, ಕುಸುಮಾ ಅವರು ಟೂತ್ ಪೇಸ್ಟ್ ಖಾಲಿ ಸ್ಯಾಶೆಗಳನ್ನು ಬಳಸಿ ಚೆಂದದ ಬ್ಯಾಗ್​ಗಳನ್ನು ಹೆಣೆದಿದ್ದಾರೆ.  ಟೂತ್ ಪೇಸ್ಟ್ ಮುಚ್ಚಳದಿಂದ ಬಾಗಿಲ ತೋರಣ ಮಾಡಿದ್ದಾರೆ.




ಒಟ್ಟಿನಲ್ಲಿ ಪ್ರಕೃತಿಗೆ ಯಾವುದು ಹಾನಿಕರವೋ ಅಥವಾ ವೇಸ್ಟ್ ಎಂದು ಯಾವುದು ಪ್ರಕೃತಿಯ ಮಡಿಲಿಗೆ ಹೋಗುತ್ತದೆಯೋ ಅದರ ಮೇಲೆ ಕುಸುಮಾ ಅವರ ಕಣ್ಣಿರುತ್ತದೆ. ನಂತರ ಅವರ ಕೈ ತಾಕಿ ಅದು ಉಪಯೋಗಕ್ಕೆ ಬರುತ್ತದೆ.




ಇದನ್ನೂ ಓದಿ: Business Idea: ಬೇಸಿಗೆ ರಜೆ ಬ್ಯುಸಿನೆಸ್! ಮಾವಿನ ಹಣ್ಣು ಮಾರಿ ದಿನಕ್ಕೆ 5 ಸಾವಿರ ದುಡಿಯುವ ಮಕ್ಕಳು




ಹೀಗೆ ಪ್ರತಿ ನಿರುಪಯುಕ್ತ ವಸ್ತುಗಳೂ ಕುಸುಮಾ ವೆಂಕಟರಮಣ ಭಟ್ ಅವರ ಕೈಯಲ್ಲಿ ಕುಸುಮದಂತೆ ಅರಳುವುದು ವಿಶೇಷ.

top videos
    First published: