Uttara Kannada: ಕುಮಟಾದಲ್ಲಿ ನಿಗೂಢ ಗುಹೆ ಪತ್ತೆ! ಗ್ರಾಮಸ್ಥರಲ್ಲಿ ಹೆಚ್ಚಾಯ್ತು ಕುತೂಹಲ

X
ಗುಹೆಯೊಳಗೆ ಇಲ್ಲಿ ಹೊಕ್ಕಿ!

"ಗುಹೆಯೊಳಗೆ ಇಲ್ಲಿ ಹೊಕ್ಕಿ!"

ಒಂದು ಅಂದಾಜಿನ ಪ್ರಕಾರ ಈ ಸುರಂಗ ಮಾರ್ಗವು ಎಂಟು ಕಿಲೋ ಮೀಟರ್​ನಷ್ಟು ಒಳಗೆ ವ್ಯಾಪ್ತಿ ಹೊಂದಿದೆ ಎನ್ನಲಾಗುತ್ತಿದೆ.

  • News18 Kannada
  • 5-MIN READ
  • Last Updated :
  • Uttara Kannada, India
  • Share this:

ಕೆಂಪು ಮಣ್ಣಿನ ಮಧ್ಯೆ ಅದೇನೋ ಸುರಂಗ. ಕುತೂಹಲದಿಂದ ಗುಹೆ ಒಳಗೆ ಕಿವಿಯಿಟ್ರೆ ಕೇಳುತ್ತೆ ವಿಶಿಷ್ಟ ಶಬ್ದ. ಈ ಗುಹೆ (Cave) ಬಗ್ಗೆ ಒಬ್ಬೊಬ್ಬರದ್ದು ಒಂದೊಂದು ಅಭಿಪ್ರಾಯ. ಕೆಲವರು ಇತಿಹಾಸದ ಜೊತೆ ಗುಹೆಯನ್ನು ಲಿಂಕ್ ಮಾಡಿದ್ರೆ ಇನ್ನು ಕೆಲವರದ್ದು ಪುರಾಣದ ಲಿಂಕ್. ಅಷ್ಟಕ್ಕೂ ಯಾವುದು ಈ ಗುಹೆ? ಇಲ್ಲಿದೆ ನೋಡಿ. ಉತ್ತರ ಕನ್ನಡ ಜಿಲ್ಲೆಯ (Uttara Kannada) ಕುಮಟಾದ (Kumta) ಮೂರುರಿನ ಮುಸ್ಗೊಪ್ಪದಲ್ಲಿ ರಸ್ತೆ ಅಗಲೀಕರಣ ವೇಳೆ, ಕಂದಕವೊಂದು ಬಾಯ್ದೆರೆದಿದೆ. ಕುತೂಹಲದಿಂದ ನೋಡಿದ್ರೆ ಸುರಂಗ ಮಾರ್ಗವೊಂದು ಪತ್ತೆಯಾಗಿದೆ.


ಒಂದು ಅಂದಾಜಿನ ಪ್ರಕಾರ ಈ ಸುರಂಗ ಮಾರ್ಗವು ಎಂಟು ಕಿಲೋ ಮೀಟರ್​ನಷ್ಟು ಒಳಗೆ ವ್ಯಾಪ್ತಿ ಹೊಂದಿದೆ ಎನ್ನಲಾಗ್ತಿದೆ. ಈ ಗುಹೆ ಒಳಗೆ ಕಿವಿಯಿಟ್ಟು ಆಲಿಸಿದರೆ, ನೀರಿನ ಶಬ್ಧ ಪ್ರತಿಧ್ವನಿಸುತ್ತದೆಯಂತೆ. ಆದ್ರೆ, ಈ ಸುರಂಗದ ಕುರಿತು ಕುತೂಹಲ ಇದ್ರೂ ಒಳಗೆ ಅಪಾಯ ಬೇಡ ಅಂತ ಪ್ರವೇಶ ದ್ವಾರ ಮುಚ್ಚಲಾಗಿದೆ.


ಇದನ್ನೂ ಓದಿ: Uttara Kannada: ಕಡಲಿನಲ್ಲಿಯೇ ಮೀನು ಸಾಕುವ ಕಡಲ ಮಕ್ಕಳ ಸಾಹಸ ಕಂಡೀರಾ?


ಮಿರ್ಜಾನ್ ಕೋಟೆಗೆ ಸುರಂಗ ಮಾರ್ಗ?
ಕುತೂಹಲ ಅಂದ್ರೆ ಈ ಸುರಂಗ ಪತ್ತೆ ಜೊತೆಗೆ ಹಲವು ಚಾರಿತ್ರಿಕ ಅಧ್ಯಾಯಗಳು ತೆರೆದುಕೊಂಡಿವೆ. ಕೆಲವರ ಪ್ರಕಾರ ಪೊಳ್ಳು ಭೂಮಿಯಿಂದ ಉಂಟಾದ ಸ್ವಾಭಾವಿಕ ಪ್ರದೇಶ ಇದಾದರೆ ಇನ್ನೂ ಕೆಲವರು ಇಲ್ಲಿಂದ ಮಿರ್ಜಾನ್ ಕೋಟೆಗೆ ಸುರಂಗ ಮಾರ್ಗವಿದೆ ಎಂದು ಹೇಳಲಾಗ್ತಿದೆ.


ಇದನ್ನೂ ಓದಿ: Inspiration: ಇಡೀ ಊರಿಗೇ ಅಗರಬತ್ತಿ ಪರಿಮಳ ಹರಡುವ ಸಾಧಕ! ಇವರದ್ದು ಸ್ಫೂರ್ತಿ ನೀಡುವ ಜೀವನ


ಅಧ್ಯಯನ ಮಾಡಲು ಆಗ್ರಹ
ಒಟ್ಟಿನಲ್ಲಿ ಇದು ಸುರಂಗವೋ ಅಥವಾ ಕೇವಲ ಪ್ರಾಕೃತಿಕವಾಗಿ ಬಾಯ್ದೆರೆದ ಕಂದಕವೋ ಯಾರಿಗೂ ತಿಳಿದಿಲ್ಲ. ಆದ್ರೆ ಕುತೂಹಲಕ್ಕಾದರೂ ಭೂಗರ್ಭ ಶಾಸ್ತ್ರಜ್ಞರು ಇದರ ಹಿಂದಿನ ಅಸಲಿಯತ್ತು ತಿಳಿಸಬೇಕಿದೆ ಎಂಬುದು ಸ್ಥಳೀಯರ ಆಗ್ರಹವಾಗಿದೆ.


ವರದಿ: ಎ.ಬಿ.ನಿಖಿಲ್, ಮುಂಡಗೋಡ್

top videos
    First published: