• Home
  • »
  • News
  • »
  • uttara-kannada
  • »
  • Success Story: 70 ವರ್ಷದ ಈ ಡಿಪ್ಲೋಮಾ ಸ್ಟೂಡೆಂಟ್ ರಾಜ್ಯಕ್ಕೇ ಫಸ್ಟ್!

Success Story: 70 ವರ್ಷದ ಈ ಡಿಪ್ಲೋಮಾ ಸ್ಟೂಡೆಂಟ್ ರಾಜ್ಯಕ್ಕೇ ಫಸ್ಟ್!

ನಾರಾಯಣ್ ಭಟ್

ನಾರಾಯಣ್ ಭಟ್

ನಾರಾಯಣ ಭಟ್ ಅವರಿಗೆ ಇನ್ನೂ ಕಲಿಯುವ ಆಸೆಯಿದೆಯಂತೆ.  ಮೈಸೂರಿನ ಆಂತ್ರೋಪೊಲೋಜಿಕಲ್ ಸರ್ವೇ ಆಫ್ ಇಂಡಿಯಾದಲ್ಲಿ ಒಂದು ವರ್ಷದ ಇಂಟರ್ನ್​ಶಿಪ್ ಮಾಡಬೇಕೆಂದು ಬಯಸುತ್ತಿದ್ದಾರೆ.

  • News18 Kannada
  • Last Updated :
  • Uttara Kannada, India
  • Share this:

    ಶಿರಸಿ: ಓದೋಕೆ, ಕಲಿಯೋಕೆ ವಯಸ್ಸಿನ ಹಂಗಿಲ್ಲ, ಎಷ್ಟೇ ವಯಸ್ಸಾಗಲಿ, ಏನೇ ಆಗಿರಲಿ, ಏನಾದ್ರೂ ಕಲಿಯಬೇಕು ಅಂತಿದ್ದಲ್ಲಿ ಅದನ್ನು ಸಾಧಿಸಬಹುದು. ಈ ಮಾತಿಗೆ ಸಾಕ್ಷಿ  ಉತ್ತರ ಕನ್ನಡ ಜಿಲ್ಲೆಯ (Uttara Kannada) ಶಿರಸಿಯ 70 ವರ್ಷದ ನಾರಾಯಣ್ ಭಟ್, ಸಿವಿಲ್ ಇಂಜಿನಿಯರಿಂಗ್ ಡಿಪ್ಲೋಮಾದಲ್ಲಿ (Civil Engineering Diploma) ರಾಜ್ಯಕ್ಕೆ ಪ್ರಥಮ ರ್ಯಾಂಕ್ ಗಳಿಸಿರೋ ಇವರ ವಿದ್ಯಾಭ್ಯಾಸದ ಉತ್ಸಾಹಕ್ಕೆ ಉತ್ತರ ಕನ್ನಡದ ಮಂದಿ ಆಶ್ಚರ್ಯಚಿಕಿತರಾಗಿದ್ದಾರೆ.  ರಾಜ್ಯ ತಾಂತ್ರಿಕ ಪರೀಕ್ಷಾ ಮಂಡಳಿ 2019–20 ರಿಂದ 2021–22ನೇ ಸಾಲಿನ ಡಿಪ್ಲೊಮಾ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ.  ಸಿವಿಲ್ ಡಿಪ್ಲೊಮಾ ಪರೀಕ್ಷೆಯಲ್ಲಿ ಕರ್ನಾಟಕದಲ್ಲೇ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಯಾಗಿ ಶೇ.94ರಷ್ಟು ಅಂಕಗಳೊಂದಿಗೆ ನಾರಾಯಣ್ ಸಾಧನೆ (Success Story)  ಮಾಡಿದ್ದಾರೆ.  


    ಆಸಕ್ತಿ ಮೂಡಿದ್ದು ಹೇಗೆ?
    67ನೇ ವಯಸ್ಸಿನಲ್ಲಿ ತಮ್ಮ ಮೆಕ್ಯಾನಿಕಲ್ ಇಂಜಿನಿಯರ್ ಹುದ್ದೆಯಿಂದ ರಿಟೈರ್ಮೆಂಟ್ ಪಡೆದು ಶಿರಸಿಯಲ್ಲಿ ತಮ್ಮ ನಿವೃತ್ತಿ ಬದುಕನ್ನು ಕಳೆಯುತ್ತಿದ್ದಾಗ ನಾರಾಯಣ್ ಭಟ್​ ಅವರಿಗೆ ಸಿವಿಲ್ ಇಂಜಿನಿಯರಿಂಗ್ ಬಗ್ಗೆ ಆಸಕ್ತಿ ಮೂಡಿತು. ಸಿವಿಲ್ ಡ್ರಾಯಿಂಗ್​ನ ಪ್ರೇಮಿಯಾಗಿದ್ದ ಇವರು ತಾವು ಬರೆಯುವ ಡ್ರಾಯಿಂಗ್​ಗಳಿಗೆ ಹಾಕುವ ಫ್ಲ್ಯಾನ್​ಗಳಿಗೆ ತಮ್ಮದೇ ಸಿಗ್ನೇಚರ್ ಇರಬೇಕು ಎಂಬ ಕನಸನ್ನು ಕಂಡರು. ಅದೇ ಕನಸನ್ನು ಪೂರೈಸಿಕೊಳ್ಳಲು ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಕಡೆ ಮುಖ ಮಾಡಿದರು.




    ಇದನ್ನೂ ಓದಿ: Uttara Kannada: 70 ವರ್ಷದ ಈ ತಾತ ಈಗ ಡಿಪ್ಲೋಮಾ ಸ್ಟೂಡೆಂಟ್!


    ಮೊದಮೊದಲು ಅವರಿಗೆ ಓದೋಕೆ ಅನುಮತಿ ಕೊಡಲಾರದ ಸಂಸ್ಥೆ ನಂತರ ಹಲವು ಹರಸಾಹಸಗಳ ನಡುವೆ ಅವರಿಗೊಂದು ಸೀಟ್ ಕೊಡಿಸಿತು.  ಕಾಲೇಜಿನ ಪ್ರೊಫೆಸರ್ ಮತ್ತು ಪ್ರಾಂಶುಪಾಲರ ನೆರವಿನಿಂದ ಅಂತೂ ಸೀಟ್ ಸಿಕ್ಕಿತು.


    ಐದೂ ಸೆಮಿಸ್ಟರ್​ಗಳಲ್ಲಿ ಸಾಧನೆ
    ನಂತರ ಸತತ ಐದೂ ಸೆಮಿಸ್ಟರ್​ಗಳಲ್ಲಿ ನಾರಾಯಣ್ ಭಟ್ ಅವರು ತಮ್ಮ ಆತ್ಮೀಯ ಶಿಕ್ಷಕರಾದ ಸಂಜೀವ್ ಖೂರ್ಸೆ ಅವರ ಸಹಾಯದಿಂದ 90 ಪ್ರತಿಶತಕ್ಕಿಂತ ಹೆಚ್ಚಿನ ಅಂಕವನ್ನೇ ಗಳಿಸುತ್ತಾ ಬಂದರು. ಯಾವುದೇ ಮುಜುಗರ ಇಲ್ಲದೇ ಮಕ್ಕಳಲ್ಲಿ ಮಕ್ಕಳಾಗಿ ಹೋಗುತ್ತಿದ್ದ ಇವರನ್ನು ಕಂಡರೆ ಎಲ್ಲರಿಗೂ ಪ್ರೀತಿ.




    ಇದನ್ನೂ ಓದಿ: Uttara Kannada: ಆಕಳ ರಕ್ಷಣೆ ಹುಲಿಯ ಹೊಣೆ! ಕದಿಯೋಕೂ ಇದೆ ಅನುಮತಿ!


    94.88 ಪ್ರತಿಶತ ಸಾಧನೆ
    ಈಗ ಸಿವಿಲ್ ಡಿಪ್ಲೋಮಾದ ಕೊನೆಯ ಸೆಮಿಸ್ಟರ್ ನ ಫಲಿತಾಂಶ ಕೂಡ ಹೊರ ಬಂದಿದ್ದು 94.88 ಪ್ರತಿಶತದೊಂದಿಗೆ ನಾರಾಯಣ್ ಭಟ್ ಅವರು ರಾಜ್ಯಕ್ಕೇ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಸಾಧನೆಗೆ ಎಲ್ಲೆಡೆಯಿಂದ ಹೊಗಳಿಕೆಯ ಮಹಾಪೂರ ಹರಿದು ಬರುತ್ತಿದೆ. ಶಿರಸಿಯ ಆರ್‌.ಎನ್.ಶೆಟ್ಟಿ ಪಾಲಿಟೆಕ್ನಿಕ್ ವಿದ್ಯಾಲಯದ ಸಿಬ್ಬಂದಿಗಂತೂ ನಾರಾಯಣ್ ಭಟ್ ಅವರ ಸಾಧನೆ ಇಮ್ಮಡಿ ಖುಷಿ ನೀಡಿದೆ.


    ಇನ್ನೂ ಇದೆ ಕಲಿಯುವ ಆಸೆ
    ನಾರಾಯಣ ಭಟ್ ಅವರಿಗೆ ಇನ್ನೂ ಕಲಿಯುವ ಆಸೆಯಿದೆಯಂತೆ.  ಮೈಸೂರಿನ ಆಂತ್ರೋಪೊಲೋಜಿಕಲ್ ಸರ್ವೇ ಆಫ್ ಇಂಡಿಯಾದಲ್ಲಿ ಒಂದು ವರ್ಷದ ಇಂಟರ್ನ್​ಶಿಪ್ ಮಾಡಬೇಕೆಂದು ಬಯಸುತ್ತಿದ್ದಾರೆ. ನಿಮಗೂ ಒಮ್ಮೆ ನಾರಾಯಣ್ ಭಟ್ ಅವರಿಗೆ ಶುಭಕೋರಬೇಕಂತ ಅನಿಸಿದರೆ ಈ ನಂಬರ್​ಗೆ ಕರೆ ಮಾಡಬಹುದು.


    ನಾರಾಯಣ್ ಭಟ್ ಅವರ ಸಂಪರ್ಕ ಸಂಖ್ಯೆ :  91 94806 47360


    ವರದಿ: ಎ.ಬಿ.ನಿಖಿಲ್, ಮುಂಡಗೋಡು

    Published by:ಗುರುಗಣೇಶ ಡಬ್ಗುಳಿ
    First published: