• Home
 • »
 • News
 • »
 • uttara-kannada
 • »
 • Uttara Kannada: 70 ವರ್ಷದ ಈ ತಾತ ಈಗ ಡಿಪ್ಲೋಮಾ ಸ್ಟೂಡೆಂಟ್!

Uttara Kannada: 70 ವರ್ಷದ ಈ ತಾತ ಈಗ ಡಿಪ್ಲೋಮಾ ಸ್ಟೂಡೆಂಟ್!

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ನಾರಾಯಣ ಭಟ್ ಕಾಲೇಜಿನಲ್ಲಿ ವಿಧೇಯ ವಿದ್ಯಾರ್ಥಿ. ಇನ್ನು ಸಹಪಾಠಿಗಳಿಗಂತೂ ನೆಚ್ಚಿನ ಸೀನಿಯರ್. ಕಲಿಕೆಯಲ್ಲಂತೂ ಹುಡುಗ ಹುಡುಗಿಯರನ್ನ ಮೀರಿಸಿ ತಾನೆ ಟಾಪರ್ ಆಗ್ತಿದ್ರು ನಾರಾಯಣ ಭಟ್.

 • Share this:

  ಉತ್ತರ ಕನ್ನಡ: ಕೈಯ್ಯಲ್ಲಿ ಪೆನ್ನು, ಮೈ ಮೇಲೆ ಯೂನಿಫಾರಂ. ನೀಟಾಗಿ ಕಾಲೇಜ್​ಗೆ ಅಟೆಂಡ್ ಆಗೋ ತಾತ. ಈಗಂತೂ ಕಾಲೇಜ್ ಕ್ಯಾಂಪಸ್​ನಲ್ಲಿ ಎಕ್ಸಾಂ ಪ್ರಿಪರೇಶನ್. ಅರೆ! ಈ ತಾತನಿಗೆ ಏನಾಗಿದೆ ಅಂದ್ಕೊಂಡ್ರಾ? ಅಥವಾ ಈ ತಾತ ಇಷ್ಟೆಲ್ಲ ಪೋಷಾಕು ಧರಿಸಿ ಸ್ಟೂಡೆಂಟ್ ಥರ ಇರೋದ್ಯಾಕೆ ಅಂತಾನ ನಿಮ್ ಪ್ರಶ್ನೆ? ಹೀಗೆ ಕ್ಯೂರಿಯಾಸಿಟಿ ಹುಟ್ಟಿಸೋದೇ ಈ ತಾತನ ಸಕ್ಸಸ್ ಸೀಕ್ರೆಟ್. ಇವ್ರು ನಾರಾಯಣ ಭಟ್ ಉತ್ತರ ಕನ್ನಡದ (Uttara Kannada) ಶಿರಸಿಯ ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನ (Sirsi Collages) ಸಿವಿಲ್ ಇಂಜಿನಿಯರಿಂಗ್ ಡಿಪ್ಲೋಮಾ ಸ್ಟೂಡೆಂಟ್.


  ವಯಸ್ಸು ಅಂತರ ಸೃಷ್ಟಿಸಲೇ ಇಲ್ಲ!
  ಇವ್ರು ಇಲ್ಲಿರೋ ವಿದ್ಯಾರ್ಥಿಗಳ ನಡುವೆ ವಯಸ್ಸಿನ ಅಂತರವಿಲ್ಲದೇ ಸಿವಿಲ್ ಇಂಜಿನಿಯರಿಂಗ್ ಡಿಪ್ಲೋಮಾ ಓದುತ್ತಿದ್ದಾರೆ. ಇತರೆ ವಿದ್ಯಾರ್ಥಿಗಳೂ ಅಷ್ಟೇ, ನಾರಾಯಣ ಭಟ್ ಅವರ ಜೊತೆ ಮುಕ್ತವಾಗಿ ಬೆರೆತು ಎಂಜಾಯ್ ಮಾಡಿದ್ದಾರೆ, ಅವರಿಂದ ಸಲಹೆ, ಸಹಕಾರವನ್ನೂ ಪಡೆದಿದ್ದಾರೆ.
  ಪ್ರತಿಷ್ಠಿತ ಕಂಪೆನಿಗಳಲ್ಲಿ ಕೆಲಸ ಮಾಡಿ ರಿಟೈರ್ಡ್
  70ರ ಹರೆಯದಲ್ಲಿ ನಾರಾಯಣ ಭಟ್ ಅವರಿಗೆ ಅದೆಂತಹ ಮರ್ಲ್ ಮಾರೆ ಅಂತಾ ನೀವ್ ಭಾವಿಸಬಹುದು. ಆದ್ರೆ ನಾರಾಯಣ ಭಟ್ ಅವರ ಭವಿಷ್ಯ ಕಟ್ಟುವ ಹುಮ್ಮಸ್ಸು ಇನ್ನೂ ಕಡಿಮೆ ಆಗಿಲ್ಲ. ಹಾಗಂತ ಇವರೇನು ಅನಕ್ಷರಸ್ಥನೂ ಅಲ್ಲ. ನಿರುದ್ಯೋಗಿನೂ ಅಲ್ಲ. ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದ ಭಟ್ ದೇಶದ ಹಲವು ಪ್ರತಿಷ್ಠಿತ ಕಂಪೆನಿಗಳಲ್ಲಿ ಕೆಲಸ ಮಾಡಿ ರಿಟೈರ್ಡ್ ಆದವರು.


  ಇದನ್ನೂ ಓದಿ: ಕನ್ನಡ ತಾಯಿಗೆ ಕೈಮುಗಿಯಲು ಇಲ್ಲಿ ಬನ್ನಿ! ಏಕೈಕ ಕನ್ನಡಮ್ಮನ ದೇಗುಲ ಇದು


  ಮತ್ತೆ ಕಾಲೇಜು ಕಲಿಯೋಕೆ ಏನು ಕಾರಣ?
  ನಿವೃತ್ತಿ ಆದ್ಮೇಲೂ ಡಿಪ್ಲೋಮಾ ಪಡೆಯಲು ಕಾರಣನೂ ಇದೆ. ಮನೆಯಲ್ಲಿ ಸುಮ್ಮನೆ ಕಾಲಹರಣ ಮಾಡುವ ಬದಲು ಇವರು ತಮ್ಮ ಆಸಕ್ತಿಯ ಸಿವಿಲ್ ಇಂಜಿನಿಯರಿಂಗ್ ಕಡೆಗೆ ಮುಖ ಮಾಡಿದರು. ಅದಾಗಲೇ ಆ ಕ್ಷೇತ್ರದಲ್ಲಿ ಸುಮಾರು ಪಳಗಿದ್ದ ಇವರು ಎಷ್ಟೇ ಪ್ಲ್ಯಾನ್​ಗಳನ್ನು ಮಾಡಿಕೊಟ್ಟರೂ ಸಿಗ್ನೇಚರ್ ತಮ್ಮದಲ್ಲ ಎಂಬ ನೋವು ಅವರನ್ನು ಕಾಡ್ತಿತ್ತಂತೆ. ಹೀಗಾಗಿ ಹಠಕ್ಕೆ ಬಿದ್ದು ಮೂರು ವರ್ಷದ ಹಿಂದೆ ಆರ್.ಎನ್.ಎಸ್ ಪಾಲಿಟೆಕ್ನಿಕ್ ನಲ್ಲಿ ಭಗೀರಥ ಪ್ರಯತ್ನದೊಂದಿಗೆ ಅಡ್ಮಿಶನ್ ಪಡೆದ್ರು.
  ಟಾಪರ್ ಆದ ನಾರಾಯಣ ಭಟ್
  ಮೊದಲು ಅಡ್ಮಿಶನ್​ಗಾಗಿ ಕಾಲೇಜಿಗೆ ಬಂದಾಗ ಪ್ರಿನ್ಸಿಪಾಲ್ ಅವರೇ ಕಕ್ಕಾಬಿಕ್ಕಿಯಾಗಿದ್ರು. ಕೊನೆಗೂ ವಿಶೇಷ ನಮೂನೆಯಡಿ ಇವರಿಗೆ ಸೀಟು ಕಲ್ಪಿಸಲಾಗಿತ್ತು. ಇನ್ನು ತಾತ ಮಕ್ಕಳ ಜೊತೆ, ಉಪನ್ಯಾಸಕರ ಜೊತೆ ಹೇಗೆ ಬೆರೆಯುತ್ತಾರೆ ಅನ್ನೋ ದುಗುಡವೂ ಇತ್ತು. ಆದ್ರೆ ನಾರಾಯಣ ಭಟ್ ಕಾಲೇಜಿನಲ್ಲಿ ವಿಧೇಯ ವಿದ್ಯಾರ್ಥಿ. ಇನ್ನು ಸಹಪಾಠಿಗಳಿಗಂತೂ ನೆಚ್ಚಿನ ಸೀನಿಯರ್ ಆಗಿದ್ದರು. ಕಲಿಕೆಯಲ್ಲಂತೂ ಹುಡುಗ ಹುಡುಗಿಯರನ್ನ ಮೀರಿಸಿ ತಾನೆ ಟಾಪರ್ ಆಗ್ತಿದ್ರು ನಾರಾಯಣ ಭಟ್.


  ಇದನ್ನೂ ಓದಿ: Sirsi Petrol Price: ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದ ಡಾಕ್ಟರ್!


  ನೋಡಿದ್ರಲ್ಲ, ಕಲಿಕೆ ಅನ್ನೋದಕ್ಕೆ ಪೂರ್ಣ ವಿರಾಮವಿಲ್ಲ ನೋಡಿ. ನಾರಾಯಣ ಭಟ್ ಅವರು ಇಳಿವಯಸ್ಸಿನಲ್ಲೂ ವಯಸ್ಸನ್ನೂ ಮೀರಿದ ಸಾಧನೆ ಮಾಡಿದ್ದಾರೆ. ಮುಂದೆ ಮತ್ತೆ ಸರ್ವೇ ಅಥಾರಿಟಿ ಆಫ್ ಇಂಡಿಯಾದಲ್ಲಿ ಒಂದು ವರ್ಷದ ಕೋರ್ಸ್ ಪಡೆಯೋ ಅಭಿಲಾಷೆಯೂ ಇದೆಯಂತೆ. ನಾರಾಯಣ ಭಟ್ ಅವರು ಕಲಿಕೆಗೆ ವಯಸ್ಸಿನ ಹಂಗಿಲ್ಲ ಅನ್ನೋದನ್ನ ಏಳು ಬೀಳಿನ ಲೋಕದಲ್ಲಿ ಎಡವದಂತೆ ಯುವಜನತೆಗೆ ಸಾರಿ ಹೇಳ್ತಿದ್ದಾರೆ.


  ವರದಿ: ಎ.ಬಿ.ನಿಖಿಲ್, ಮುಂಡಗೋಡು

  Published by:ಗುರುಗಣೇಶ ಡಬ್ಗುಳಿ
  First published: