ಉತ್ತರ ಕನ್ನಡ: ಹುಡುಗರು, ಹುಡುಗಿಯರು, ಯುವಕರು, ಹಿರಿಯರು ಹೀಗೆ ಎಲ್ರೂ ಸಮವಸ್ತ್ರ ತೊಟ್ಟು ಮ್ಯಾರಥಾನ್ಗೆ (Bhatkal Marathon) ಇಳಿದಿದ್ದಾರೆ. ಎಲ್ಲರ ಗುರಿಯೂ ಒಂದೇ, ಉದ್ದೇಶವೂ ಒಂದೇ. ಹೀಗೆ ಓಟಕ್ಕಿಳಿದ ನೂರಾರು ಜನರ ಬೆಂಬಲಕ್ಕೆ ಇಡೀ ಊರೇ ನಿಂತಿತ್ತು. ಅಲ್ಲಲ್ಲಿ ನಿಂತು ಹಣ್ಣು, ಪಾನೀಯ ನೀಡಿ ಉಪಚರಿಸಲಾಯಿತು.
ಕ್ಯಾನ್ಸರ್ ಜಾಗೃತಿ
ಯೆಸ್, ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ಉತ್ತರ ಕನ್ನಡದ ಭಟ್ಕಳದ ಕ್ರಿಯಾಶೀಲ ಗೆಳೆಯರ ಸಂಘ, ಭಟ್ಕಳ ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆ ಮತ್ತಿತರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ 'ಭಟ್ಕಳ 5ಕೆ ಮ್ಯಾರಥಾನ್ 2023' ಅನ್ನೋ ಕ್ಯಾನ್ಸರ್ ಜಾಗೃತಿಗಾಗಿ ಓಟ ಏರ್ಪಡಿಸಲಾಗಿತ್ತು. ಕಿರಿಯರಿಂದ ಹಿಡಿದು ಹಿರಿಯರವರೆಗೂ ಎಲ್ಲರೂ ಭಾರೀ ಉತ್ಸಾಹದಿಂದ ಪಾಲ್ಗೊಂಡರು. ನಾ ಮುಂದು ತಾ ಮುಂದು ಅಂತಾ ಓಟಕ್ಕಿತ್ತರು.
ಸಕಲ ವ್ಯವಸ್ಥೆ
ಮ್ಯಾರಥಾನ್ ಪಟುಗಳಿಗೆ ಪಾನೀಯ, ಹಣ್ಣು ನೀಡುವ ಮೂಲಕ ಸ್ವಯಂ ಸೇವಕರು ನೆರವಾದರೆ, ಪೊಲೀಸರು ರಸ್ತೆಯುದ್ದಕ್ಕೂ ಸಂಚಾರ ನಿಯಂತ್ರಿಸಿ ಮ್ಯಾರಥಾನ್ ಓಟಗಾರರಿಗೆ ಅನುಕೂಲ ಮಾಡಿಕೊಟ್ಟರು. ಓಟಗಾರರ ಆರೋಗ್ಯದ ಬಗ್ಗೆಯೂ ವಿಶೇಷ ಕಾಳಜಿ ವಹಿಸಲಾಗಿತ್ತು.
ಮ್ಯಾರಥಾನ್ ರೂಟ್ ಹೀಗಿತ್ತು
ಯಲ್ವಡಿಕವೂರ ಪಂಚಾಯತಿಯ ಪಿಯು ಕಾಲೇಜು ಮೈದಾನದಿಂದ ಆರಂಭವಾದ ಮ್ಯಾರಥಾನ್ ಸರ್ಪನಕಟ್ಟೆ ಮಾರ್ಗವಾಗಿ ಪುರವರ್ಗ ಜೋಸೆಫ್ ಚರ್ಚ್, ಕಾಸ್ಮುಡಿ ದೇವಸ್ಥಾನ, ಚೌಥನಿ ರಸ್ತೆಯಿಂದ ಹೂವಿನ ಪೇಟೆ ರಸ್ತೆಯಾಗಿ ಮಾರಿಗುಡಿ ದೇವಸ್ಥಾನ, ಪುರಸಭೆ, ಭಟ್ಕಳ ಅರ್ಬನ್ ಬ್ಯಾಂಕ್ ರಸ್ತೆ, ಪಿಎಲ್ಡಿ ಬ್ಯಾಂಕ್, ಸಂಶುದ್ದೀನ್ ಸರ್ಕಲ್ ಮಾರ್ಗವಾಗಿ ಸಾಗರ ರಸ್ತೆಯಿಂದ ಪೊಲೀಸ್ ಮೈದಾನದಲ್ಲಿ ಸಮಾಪ್ತಿಗೊಂಡಿತು.
ಇದನ್ನೂ ಓದಿ: Karwar: ಮೊಟ್ಟೆ ಇಡುವ ಸಮಯ ಬದಲಾಯಿಸಿದ ಕಡಲಾಮೆ!
ಬೃಹತ್ ಮ್ಯಾರಥಾನ್
ಭಟ್ಕಳದ ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹ ಬೃಹತ್ ಮ್ಯಾರಥಾನ್ ಆಯೋಜಿಸಲಾಗಿತ್ತು. ಜನರು ಕೂಡಾ ಅತೀ ಉತ್ಸಾಹದಿಂದ ಪಾಲ್ಗೊಂಡರು. ವಿಶೇಷ ಅಂದ್ರೆ ಅದ್ರಲ್ಲೂ ಕ್ಯಾನ್ಸರ್ ಜಾಗೃತಿಗಾಗಿ ನಡೆದ ಮ್ಯಾರಥಾನ್ ಕೂಟದಲ್ಲಿ ಯುವ ಸಮುದಾಯವು ಹೆಚ್ಚಿನ ಆಸಕ್ತಿಯಿಂದ ಪಾಲ್ಗೊಂಡಿತು.
ಇದನ್ನೂ ಓದಿ: Sirsi: ಪ್ರಾಣಿಗಳಿಗೂ ಅನಾಥಾಶ್ರಮ! ಶಿರಸಿ ದಂಪತಿಯ ವಿಶಿಷ್ಟ ಸೇವೆ
ಅದೆಷ್ಟೋ ಹಿರಿಯರು ಕೂಡಾ ಜನಜಾಗೃತಿಯ ಓಟದಲ್ಲಿ ಪಾಲ್ಗೊಂಡರು. ವಯಸ್ಸಿನ ಆಧಾರದ ಮೇಲೆ ನಾಲ್ಕು ವಿಭಾಗವನ್ನ ಮಾಡಲಾಗಿತ್ತು. ನೂರಾರು ಜನ ಪಾಲ್ಗೊಂಡು ಜನರಲ್ಲಿ ಕ್ಯಾನ್ಸರ್ ಕುರಿತಾದ ಜಾಗೃತಿ ಹಾಗೂ ಮಾಹಿತಿ ನೀಡುವ ಮೂಲಕ ಕಾರ್ಯಕ್ರಮದ ಸಾರ್ಥಕತೆಗೆ ನೆರವಾದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ