• Home
  • »
  • News
  • »
  • uttara-kannada
  • »
  • Uttara Kannada: ಒಂದೇ ಬಾರಿ 5 ದೇವರ ರಥೋತ್ಸವ! ನೋಡೋಕೆ ಸಾಲದು ಎರಡು ಕಣ್ಣು

Uttara Kannada: ಒಂದೇ ಬಾರಿ 5 ದೇವರ ರಥೋತ್ಸವ! ನೋಡೋಕೆ ಸಾಲದು ಎರಡು ಕಣ್ಣು

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಕಾರ್ತಿಕ ಮಾಸಾಚರಣೆಗಾಗಿ ಅಂಕೋಲಾ ನಗರದ ಆರ್ಯದುರ್ಗಾ, ಶಾಂತದುರ್ಗಾ, ಮಹಾದೇವರು, ವೆಂಕಟರಮಣ ಹಾಗೂ ನಾರಾಯಣ ದೇವರು ಅವುಗಳ ಮೂಲ ನೆಲೆಯಾದ ಬಾಳೆಗುಳಿಯ ವನಕ್ಕೆ ಪಲ್ಲಕ್ಕಿ ಮೇಲೆ ಸಾಗಿದವು.

  • News18 Kannada
  • Last Updated :
  • Uttara Kannada, India
  • Share this:

    ಕಾರವಾರ: ಸಂಭ್ರಮವೋ ಸಂಭ್ರಮ.. ಪಲ್ಲಕ್ಕಿಗಳ ಉತ್ಸವ ವೇಗವಾಗಿ ಸಾಗಿ ಬರ್ತಿದ್ರೆ ಭಕ್ತರು ರಸ್ತೆಯುದ್ದಕ್ಕೂ ಕೈಮುಗಿದು ಭಕ್ತಿಯಿಂದ ನಿಂತಿದ್ರು. ಹೀಗೆ ಪಲ್ಲಕ್ಕಿ ಹೊತ್ತ ತಂಡ ಆವೇಶಭರಿತವಾಗಿ ಬರ್ತಿದ್ರೆ ಜನ ಗೋವಿಂದಾ ಗೋವಿಂದಾ ಅಂತಾ ಉದ್ಘೋಷದ ಮೂಲಕ ನಮಸ್ಕರಿಸಿದರು. ಒಂದಲ್ಲ, ಎರಡಲ್ಲ.. ಹೀಗೆ ಸಾಗಿ ಬಂದಿದ್ದು ಐದು ಪಲ್ಲಕ್ಕಿಗಳು. ಪ್ರತಿಯೊಂದರಲ್ಲೂ ಆಸೀನರಾಗಿದ್ದ ಬೇರೆ ಬೇರೆ ದೇವರುಗಳ ಆಶೀರ್ವಾದ ಪಡೆಯೋಕೆ ಭಕ್ತರು ಮುಗಿಬೀಳ್ತಿದ್ರು. ಉತ್ತರ ಕನ್ನಡ ಜಿಲ್ಲೆಯ (Uttara Kannada) ಅಂಕೋಲಾದಲ್ಲಿ ಒಂದೇ ದಿನ ಐದು ದೇವರುಗಳ ರಥೋತ್ಸವದ ಸಂಭ್ರಮ ಮುಗಿಲುಮುಟ್ಟಿತ್ತು. ಸಂಜೆ 4 ಗಂಟೆಗೆ ಆರಂಭವಾದರೆ ಮರುದಿನ ಮಧ್ಯಾಹ್ನ 12 ಗಂಟೆವರೆಗೂ ಈ ರಥೋತ್ಸವ (Ankola Rathotsav) ಮುಂದುವರೆದಿತ್ತು. ಇಡೀ ಅಂಕೋಲಾ (Ankola Temples)ಜನತೆಯೇ ಭಕ್ತಿ ಪರವಶರಾಗಿ ಈ ರಥೋತ್ಸವದಲ್ಲಿ ಮಿಂದೆದ್ರು.


    ಕಾರ್ತಿಕ ಮಾಸಾಚರಣೆಗಾಗಿ ಅಂಕೋಲಾ ನಗರದ ಆರ್ಯದುರ್ಗಾ, ಶಾಂತದುರ್ಗಾ, ಮಹಾದೇವರು, ವೆಂಕಟರಮಣ ಹಾಗೂ ನಾರಾಯಣ ದೇವರು ಅವುಗಳ ಮೂಲ ನೆಲೆಯಾದ ಬಾಳೆಗುಳಿಯ ವನಕ್ಕೆ ಪಲ್ಲಕ್ಕಿ ಮೇಲೆ ಸಾಗಿದವು.


    ಈ ದೇವರ ವೈಭವ ನೋಡಲು ಎರಡು  ಕಣ್ಣು ಸಾಲದು
    ಮೊದಲು ನಾರಾಯಣ ದೇವರು ಮುಂಚೂಣಿಯಲ್ಲಿ ಸಾಗಿದರೆ ಅನುಕ್ರಮವಾಗಿ ಆರ್ಯದುರ್ಗಾ, ವೆಂಕಟರಮಣ, ಮಹಾದೇವರು, ಶಾಂತಾ ದುರ್ಗಾ ದೇವರುಗಳು ಸಾಗಿಬಂದವು. ಪಲ್ಲಕ್ಕಿ ಹೊತ್ತ ಭಕ್ತರು ಆವೇಶಿತರಾಗಿದ್ರು. ದೇವರ ಅಪ್ಪಣೆಯೇ ಸಾರಥಿ, ದೇವರ ಆದೇಶವಿಲ್ಲದೇ ಕದಲುವುದಿಲ್ಲ ಅನ್ನೋ ನಂಬಿಕೆಯಲ್ಲಿ ಭಕ್ತರು ಪಲ್ಲಕ್ಕಿ ಹೊತ್ತು ಸಾಗಿದರು.


    ಇದನ್ನೂ ಓದಿ: Khapri God: ಮದ್ಯ, ಸಿಗರೇಟು ಇವೇ ಖಾಫ್ರಿ ದೇವರ ನೈವೇದ್ಯ! ಜೋಯ್ಡಾದಲ್ಲಿ ಜಾತ್ರೆ


    ಐದು ದೇವರುಗಳನ್ನು ಪಲ್ಲಕ್ಕಿ ಮೂಲಕ ಅಂಬಾರಕೊಡ್ಲು ಶಿರಕೋಳ ಮಾರ್ಗವಾಗಿ ರೈಲ್ವೆ ಬ್ರಿಡ್ಜ್ ಬಳಿ ಇರುವ ವನಕ್ಕೆ ಕರೆದೊಯ್ದು ವೈದಿಕ ವಿಧಿವಿಧಾನದ ಪ್ರಕಾರ ಪೂಜೆ ನಡೆಸಲಾಯ್ತು. ನಂತ್ರ ಅಂಕೋಲಾಕ್ಕೆ ಬಂದು ರಥೋತ್ಸವ ನಡೆಸಲಾಯ್ತು. ಹೀಗೆ ನಿರಂತರ ತಿರುಗಾಟ ನಡೆಸುವ ದೇವರ ಮೂರ್ತಿಗಳು ಅಂಕೋಲಾ ಜನರ ಕಷ್ಟ ಕಾರ್ಪಣ್ಯವನ್ನು ವರ್ಷಕ್ಕೊಮ್ಮೆ ತೇರನೇರಿ ಬಂದು ನೋಡುತ್ತವೆ ಎಂಬ ಪ್ರತೀತಿಯೂ ಇದೆ.


    ಇದನ್ನೂ ಓದಿ: Manjuguni Temple: ಕರ್ನಾಟಕದ ತಿರುಪತಿಯಲ್ಲಿ ವನಭೋಜನ! ಇಲ್ಲಿ ವೆಂಕಟೇಶ್ವರ ನೆಲೆಸಿದ್ದೇ ರೋಚಕ ಕಥೆ


    ಒಟ್ಟಿನಲ್ಲಿ ಏಕಕಾಲಕ್ಕೆ ನಡೆಯುವ ಪಂಚ ದೇವರುಗಳ ರಥೋತ್ಸವ ಇಡೀ ಅಂಕೋಲದಲ್ಲಿ ಹೊಸ ಬಗೆಯ ಚೈತನ್ಯ ತುಂಬೋಕೆ ಕಾರಣವಾಯ್ತು. ಸುದೀರ್ಘ ರಥೋತ್ಸವದ ಮೂಲಕ ಭಕ್ತರನ್ನೂ ಭಕ್ತಿ ಪರವಶರಾಗಿ ತಲ್ಲೀನರಾಗಿಸ್ತು.


    ವರದಿ: ಎ.ಬಿ.ನಿಖಿಲ್, ಮುಂಡಗೋಡು

    Published by:ಗುರುಗಣೇಶ ಡಬ್ಗುಳಿ
    First published: