ಜುಲೈ17ಕ್ಕೆ ಯಾಹೂ ಮೆಸೆಂಜರ್​ ಯುಗಾಂತ್ಯ


Updated:June 10, 2018, 1:14 PM IST
ಜುಲೈ17ಕ್ಕೆ ಯಾಹೂ ಮೆಸೆಂಜರ್​ ಯುಗಾಂತ್ಯ

Updated: June 10, 2018, 1:14 PM IST
ನ್ಯೂಯಾರ್ಕ್: ವಾಟ್ಸಾಪ್​, ಫೇಸ್​ಬುಕ್​ ಮೆಸೆಂಜರ್​ಗಳ ಪರಿಣಾಮದಿಂದ ಮೂಲೆ ಗುಂಪಾಗಿದ್ದ ಯಾಹೂ ಮೆಸೆಂಜರ್​ ತನ್ನ 20 ವರ್ಷದ ದೀರ್ಘಕಾಲಿಕ ಸೇವೆಗೆ ಜುಲೈ 17ರಂದು ತಿಲಾಂಜಲಿ ಹಾಡಲಿದೆ.

1998ರಂದು ಯಾಹೂ ಪೇಜರ್​ ಎಂಬ ಹೆಸರಿನಲ್ಲಿ ಪರಿಚಯಗೊಂಡ ಯಾಹೂ ಮೆಸೆಂಜರ್​ ಕೆಲವೇ ದಿನಗಳಲ್ಲಿ ಯುವ ಜನಾಂಗವನ್ನು ಸೆಳೆಯಲು ಸಫಲವಾಗಿತ್ತು. ಹೀಗಾಗಿ ಫೇಸ್​ಬುಕ್​ ಪರಿಚಯ ವಾಗುವವರೆಗೂ ಯಾಹೂ ಹಾಗೂ ಗೂಗಲ್​ನ ಆರ್ಕುಟ್​ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಪಾರುಪತ್ಯ ಸಾಧಿಸಿತ್ತು.

ಆದರೆ ಆರ್ಕುಟ್​ ಬಳಿಕ ಇದೀಗ ಯಾಹೂ ಕೂಡಾ ತನ್ನ ಮೆಸೆಂಜರ್​ ಅಪ್ಲಿಕೇಶನನ್ನು ಕೊನೆಗಾಣಿಸುತ್ತಿದ್ದು, ತನ್ನ ನೂತನ ಅಪ್ಲಿಕೇಶನ್​ ಸ್ಕ್ವಿರಲ್​ನೊಂದಿಗೆ ವಿಲೀನಗೊಳಿಸುತ್ತದೆ ಎಂದು ವರದಿಯಾಗಿದೆ. ಇದರ ಮುಂದಿನ ಹಂತವಾಗಿ ತನ್ನ ಗ್ರಾಹಕರಿಗೆ ಆರು ತಿಂಗಳ ಅವಧಿ ನೀಡಿರುವ ಸಂಸ್ಥೆ ಎಲ್ಲಾ ಡೇಟಾಗಳನ್ನು ಡೌನ್​ಲೋಡ್​ ಮಾಡಿಕೊಳ್ಳಬಹುದು.

ಕಳೆದ ಕೆಲ ದಿನಗಳಿಂದ ಸ್ಕ್ವಿರಲ್​ ಎಲ್ಲಾ ರೀತಿಯಲ್ಲೂ ಟೆಸ್ಟಿಂಗ್​ ಮಾಡಲಾಗುತ್ತಿದೆ, ಆದರೆ ಈ ಆ್ಯಪ್​ ಯಾಹೂ ಮೆಸೇಂಜರ್​ನ ಜಾಗವನ್ನು ತುಂಬ ಬಹುದೇ ಎಂಬ ಪ್ರಶ್ನೆ ತಜ್ಞರನ್ನು ಕಾಡಿದೆ.
First published:June 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ