HD Devegowda: ನಾವು ಕೂಡ ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡ್ತೀವಿ; ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ

2023 ಕ್ಕೆ ಇದೇ ಮುಸ್ಲೀಮರೇ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ. ಅಹಿಂದ ಬಗ್ಗೆ ಜನ ಪುರಸ್ಕಾರ, ತಿರಸ್ಕಾರ ಮಾಡ್ತಾರೆ ಅಂತ ಕಾದು ನೋಡುವ. ನಾನು ಈವರೆಗೆ ಎಷ್ಟು ಜನ ಮುಸ್ಲಿಂ ಮುಖಂಡರನ್ನು ಬೆಳೆಸಿದ್ದೇನೆ. ನಾನು ಬರುವ ಮುಂಚೆ ಎಷ್ಟು ಜನ ಮುಸ್ಲಿಂ ನಾಯಕರು ಇದ್ದರು..? ಎಂದು ದೇವೇಗೌಡರು ಪ್ರಶ್ನಿಸಿದರು.

ಹೆಚ್.ಡಿ. ದೇವೇಗೌಡ

ಹೆಚ್.ಡಿ. ದೇವೇಗೌಡ

 • Share this:
  ಬೆಂಗಳೂರು: ಕಳೆದ ಎರಡು ವರ್ಷದಿಂದ ಪ್ರತಿ ದಿನ ಪೆಟ್ರೋಲ್, ಡೀಸೆಲ್ ದರ ಏರಿಕೆ (Petrol And Diesel Price Hike) ಆಗುತ್ತಿದೆ. ಇದರ ಪರಿಣಾಮ ಜನ ಸಾಮಾನ್ಯರ ಮೇಲೆ ತುಂಬಾ ಭಾರ ಬೀಳಲಿದೆ. ಸರಕು ಸಾಗಾಣಿಕೆ ಖರ್ಚು ವೆಚ್ಚ ಕೂಡ ಜನ ಸಾಮಾನ್ಯರ ಮೇಲೆ ಬೀಳಲಿದೆ. ಇದೆಲ್ಲವೂ ಗ್ರಾಹಕರ ಮೇಲೆಯೇ ಬೀಳುತ್ತಿದೆ. ಕೋವಿಡ್ ವೆಚ್ಚ ಭರಿಸಲು ಈ ರೀತಿ‌ ಮಾಡ್ಬೇಕಾಯ್ತು ಅಂತ ಕೇಂದ್ರ ಸಮರ್ಥನೆ ಕೊಡುತ್ತೆ. ಯಾವುದೇ ಸರ್ಕಾರ ಇರಲಿ ಅವರು ಕೂಡ ಹೀಗೆ ಮಾಡಬೇಕಾದ ಸ್ಥಿತಿ ಎನ್ನುತ್ತಾರೆ. ಕೊರೋನಾ ನೆಪ ಹೇಳಿಕೊಂಡು ಈ ರೀತಿ ಮಾಡೋದು ಖಂಡನೀಯ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (HD Devegowda) ಅವರು ಹೇಳಿದರು.

  ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿಚಾರವಾಗಿ ಮಾತನಾಡಿದ ದೇವೇಗೌಡ ಅವರು, ನಾನು ಪ್ರಧಾನಿಯಾಗಿದ್ದಾಗ ಆರ್ಥಿಕ ಪರಿಸ್ಥಿತಿ ತುಂಬಾ ಕಷ್ಟವಾಗಿತ್ತು. ಇದನ್ನು ಏರಿಸಿದರೆ ಪೆಟ್ಟು ಬೀಳುತ್ತೆ ಅಂತ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಯಶವಂತ್ ಸಿಂಗ್ ಫೈಲ್ ತೆಗೆದುಕೊಂಡು ಹೋದಾಗ ಮುಂಬರುವ ಪ್ರಧಾನಿ ಬರ್ತಾರೋ ನೋಡಿಕೊಳ್ಳಿ ಅಂದ್ರು. ಜೂನ್ 13 ರಂದು ಕೇಲ್ಕರ್ ಹಳೆ ಫೈಲ್ ತೆಗೆದುಕೊಂಡು ಬಂದ್ರು. ನಾನು ಫೈಲ್ ನೋಡಿ ಇದನ್ನು ಮಾಡಲು ಸಾಧ್ಯವಾಗಲ್ಲ. 18900 ಕೋಟಿ‌ ಬಾಕಿ ಇದೆ. ನಿತ್ಯ ಆಯಿಲ್ ತೆಗದುಕೊಳ್ಳಲು ಹಣ ನೀಡಬೇಕು. ಫಾರಿನ್ ರಿಸರ್ವ್ ಒಂದು ದಿನಕ್ಕೆ ಎಷ್ಟು ಬೇಕೋ‌ ಅಷ್ಟೆ ಬರೋದು. ನಾನು ಮುಸ್ಲಿಂ ಸಮಾಜಕ್ಕೆ ಹಲವಾರು ರಿಸರ್ವೇಷನ್ ಕೊಟ್ಟಿದ್ದೆ. ಇಬ್ಬರು ಮಂತ್ರಿಗಳನ್ನು ಮಾಡಿದ್ದೆ. ಇಬ್ರಾಹಿಂ ಅವರನ್ನು ರಾಜ್ಯಸಭಾ ಮೆಂಬರ್ ಮಾಡಿದೆ. ಎಲ್ಲವೂ ಮುಸ್ಲಿಂ ಒಪೆಕ್ ಕಂಟ್ರಿ ಮೇಲೆ ಪರಿಣಾಮ ಆಯ್ತು. ಆಗ ಅವರೆಲ್ಲ ಕೂತು ಮೀಟಿಂಗ್ ಮಾಡಿದ್ರು. ಆಯಿಲ್ ಕೊಡುವ ಬಗ್ಗೆ ಏನ್ ಮಾಡೋದು ಅಂತ. ಅವರಿಗೆ ಒಂದು ಪತ್ರ ಬರೆದೆ. ನಾನು ಕಷ್ಟದಲ್ಲಿ ಇದ್ದೇನೆ. ಸಮಯ ಬೇಕು ನಿಮ್ಮ ಹಣ ತೀರಿಸುತ್ತೇನೆ ಎಂದೆ. ದೈವಾನುಗ್ರಹ 6 ತಿಂಗಳೊಳಗೆ ಹೊಸ ಹೊಸ ಸಂಪನ್ಮೂಲ ಕಂಡು ಹಿಡಿದು ಸಾಲ ತೀರಿಸಿದೆ. ಅಷ್ಟೊತ್ತಿಗೆ ಫಾರಿನ್ ಎಕ್ಸಚೇಂಜ್ ಸುಧಾರಿಸಿತು ಎಂದು ತಮ್ಮ ಅವಧಿಯ ದಿನಗಳನ್ನು ನೆನಪಿಸಿಕೊಂಡರು.

  ಹಿಂದೂ ದೇವಾಲಯ ತೆರವು ವಿಚಾರವಾಗಿ ಮಾತಮಾಡಿದ ದೇವೇಗೌಡ ಅವರು, ನಂಜನಗೂಡು ವಿಚಾರ ನೋಡಿದೆ. ಅಧಿಕಾರಿಗಳು ತೆಗೆದುಕೊಂಡ ಆತುರದ ನಿರ್ಧಾರ ಅದು. ಕೋರ್ಟ್ ಸೂಚನೆ ನೀಡಿರಬಹುದು. ಬೆಂಗಳೂರಿನಲ್ಲಿ ಮುಖಂಡರ ಸ್ಟಾಚುಗಳನ್ನು ಕಿತ್ತಾಕಬೇಕು ಎಂಬ ಆದೇಶ ಇದೆ. ಇದು ಕೋರ್ಟ್ ಆದೇಶ ತಿರಸ್ಕರಿಸಲು ಆಗಲ್ಲ. ಇಂಥ ನಿರ್ಣಯಗಳನ್ನು ಸ್ಥಳೀಯರ ಪರ್ಮಿಷನ್ ತೆಗದುಕೊಳ್ಳಬೇಕು. ತೆರವುಗೊಳಿಸುವ ಬದಲು ಸ್ಥಳಾಂತರ ಮಾಡಲು ಅವಕಾಶ ಇದೆ ಎಂದರು.

  ಕರ್ನಾಟಕದ ಆಡಳಿತ ಬಗ್ಗೆ ಚರ್ಚೆ ಮಾಡಲ್ಲ. ಭ್ರಷ್ಟಾಚಾರ ಎಲ್ಲೆಲ್ಲಿ ನಡೆದಿದೆ ಗೊತ್ತಿದೆ.  ಬೆಲೆ ಏರಿಕೆ ಬಗ್ಗೆ ಸಿದ್ದರಾಮಯ್ಯ ನಾಲ್ಕು ಗಂಟೆ ಚರ್ಚೆ ಮಾಡಿದ್ರು. ನಮ್ಮ ಸರ್ಕಾರದ ಹೋರಾಟ ತೋರ್ಪಡಿಕೆಗೆ ಅಲ್ಲ. ವಾಜಪೇಯಿ ಸರ್ಕಾರದಲ್ಲಿ ಸೀಮೆಎಣ್ಣೆಗೆ ಒಂದು ರೂಪಾಯಿ ಏರಿಕೆ ಆಯ್ತು. ಇದೇ ಸೀಮೆಎಣ್ಣೆ ಡಬ್ಬ ತಲೆ ಮೇಲೆ ಇಟ್ಟುಕೊಂಡು ಹೋರಾಟ ಮಾಡಿದ್ವಿ. ನಾನು ಸೀಮೆಎಣ್ಣೆ ಡಬ್ಬ ಹೊತ್ತುಕೊಂಡಿದ್ದಕ್ಕೆ ಸಾಕಷ್ಟು ಟೀಕೆ ಬಂದಿದ್ದವು. ನಾನು ಟೀಕೆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಈಗಲೂ‌ ಬೆಲೆ‌ ಏರಿಕೆ ವಿರುದ್ಧ ಹೊರಾಟ ಮಾಡುತ್ತೇವೆ. ತಮಿಳುನಾಡು ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೂರು ರೂಪಾಯಿ ಕಡಿತ ಮಾಡಿದೆ. ಇಡೀ ದೇಶಕ್ಕೆ ಅದು ಒಂದು ಇಂಡಿಕೇಷನ್. ಆ ಮಾದರಿಯನ್ನು ಬೇರೆ ರಾಜ್ಯಗಳು ಕೂಡ ಪಾಲಿಸಬೇಕು. ರಾಜ್ಯ ಸರ್ಕಾರ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು. ಪೆಟ್ರೋಲ್ ಹೊರೆ ತಗ್ಗಿಸಬೇಕು. ನಾವು ಕೂಡ ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡ್ತೀವಿ ಎಂದರು.

  ಕಲಬುರ್ಗಿ ಮಹಾನಗರ ಪಾಲಿಕೆ ಮೇಯರ್ ಆಯ್ಕೆ ವಿಚಾರವಾಗಿ ಮಾತನಾಡಿದ ದೇವೇಗೌಡರು, ಖರ್ಗೆ ತೆಗದುಕೊಂಡ ನಿರ್ಧಾರ ಉಳಿದವರು ಸ್ವಾಗತ ಮಾಡಲಿಲ್ಲ. ಇದು ದೇಶಕ್ಕೆ ಸಂಬಂಧ ಪಟ್ಟಿದ್ದಲ್ಲ. ಇದು ಕಾರ್ಪೊರೇಷನ್ ಚುನಾವಣೆ. ಸ್ಥಳೀಯ ಮಟ್ಟದಲ್ಲಿ ಹೊಂದಾಣಿಕೆ ಆಗುತ್ತದೆ. ಖರ್ಗೆ ಮಾತಿಗೆ ಡಿಕೆ ಹಾಗೂ ಸಿದ್ದರಾಮಯ್ಯ ಸ್ಪಂದಿಸಲಿಲ್ಲ. ಅವರ ಮಾತಿಗೆ ಯಾರು ಬೆಲೆ ಕೊಡಲಿಲ್ಲ. ಕಳೆದ ಬಾರಿ ನಾನು ಅವರ ಮನೆ ಬಾಗಿಲಿಗೆ ಹೋಗಿಲ್ಲ. ಗುಲಾಂ ನಬಿ ಆಜಾದ್ ಸೇರಿ ಹಲವರು ಮನೆ ಬಂದರು. ನಿಮ್ಮ ಮಗನನ್ನು ಸಿಎಂ ಮಾಡಿ ಅಂದ್ರು. ನಾನು ಖರ್ಗೆಯವರನ್ನು ಸಿಎಂ ಮಾಡಿ ಅಂದಿದ್ದೆ. ಪಕ್ಷ ನಾಶ ಮಾಡುವ ಮಾತಾಡ್ತಾ ಇದ್ದಾರೆ ಕಾಂಗ್ರೆಸ್ ನವರು. ನಮ್ಮ ಹಾಗೂ ಮುಸ್ಲಿಂರನ್ನು ದೂರ ಇಡಲು ಪ್ರಯತ್ನ‌ ಮಾಡ್ತಾ ಇದ್ದಾರೆ. 2023 ಕ್ಕೆ ಇದೇ ಮುಸ್ಲೀಮರೇ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ. ಅಹಿಂದ ಬಗ್ಗೆ ಜನ ಪುರಸ್ಕಾರ, ತಿರಸ್ಕಾರ ಮಾಡ್ತಾರೆ ಅಂತ ಕಾದು ನೋಡುವ. ನಾನು ಈವರೆಗೆ ಎಷ್ಟು ಜನ ಮುಸ್ಲಿಂ ಮುಖಂಡರನ್ನು ಬೆಳೆಸಿದ್ದೇನೆ. ನಾನು ಬರುವ ಮುಂಚೆ ಎಷ್ಟು ಜನ ಮುಸ್ಲಿಂ ನಾಯಕರು ಇದ್ದರು..? ನಜೀರ್ ಸಾಬ್ ಮೊದಲೇ ಬೆಳೆದಿರುವ ನಾಯಕರಾಗಿದ್ದರು. ಜಾಫರ್ ಷರೀಫ್, ಸಿಎಂ ಇಬ್ರಾಹಿಂ, ಮೆರಾಜುದ್ದೀನ್ ಪಟೇಲ್, ಸೇರಿ ಅನೇಕ‌ ನಾಯಕರು ನನ್ನ ಜೊತೆ ಬೆಳೆದರು. ಡಿಜಿಯನ್ನು ಕರೆದು ಮುಸ್ಲಿಂ ಕಾನ್​​ಸ್ಟೇಬಲ್ ಎಷ್ಟಿದ್ದಾರೆ ನೋಡಿ..? ನಾನು ದೇವರನ್ನು ನಂಬುತ್ತೇನೆ. ದೇವರು ಅಲ್ಲಾ ಒಂದೇ ನನಗೆ ಎಂದರು.

  ಇದನ್ನು ಓದಿ: Mamata Banerjee| ಭಾರತವನ್ನು ತಾಲಿಬಾನ್-ಪಾಕಿಸ್ತಾನ ಆಗಲು ನಾವು ಅವಕಾಶ ನೀಡುವುದಿಲ್ಲ; ಮಮತಾ ಬ್ಯಾನರ್ಜಿ

  ಕಲ್ಬುರ್ಗಿ ಪಾಲಿಕೆ ಮೇಯರ್ ಚುನಾವಣೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಿರಾ ಎಂಬ ಪ್ರಶ್ನೆಗೆ ದೇವೇಗೌಡರು, ಬಿಜೆಪಿಯವರೂ ಕಲ್ಬುರ್ಗಿ ವಿಚಾರವಾಗಿ‌ ಈಗ ಮಾತಾಡ್ತಾ ಇಲ್ಲ. ಅಶೋಕ್ ಒಬ್ಬರೇ ಬಂದು ಮಾತಾಡಿದ್ದಾರೆ. ಈ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಹೊಸ ಸೂಚನೆ ನೀಡಿದ್ದಾರೆ ಜನ. ಕಲ್ಬುರ್ಗಿ ಪಾಲಿಕೆ ಬಗ್ಗೆ ಯಾವ ತೀರ್ಮಾನವನ್ನೂ ನಾವು ಮಾಡಿಲ್ಲ. ಯಾರ ಬಗ್ಗೆಯೂ ತಲೆ ಕೆಡಿಸಿಕೊಳ್ಳಲ್ಲ ಎಂದು ಹೇಳಿದರು.
  Published by:HR Ramesh
  First published: