HOME » NEWS » Uncategorized » VIVO LAUNCHED TRIPPLE CAMER Y20A SMARTPHONE IN INDIA FOR RS 11490 HG

Vivo Y20A: ತ್ರಿವಳಿ ಕ್ಯಾಮೆರಾ, 5 ಸಾವಿರ mAh ಬ್ಯಾಟರಿ; ವಿವೊ ಬಿಡುಗಡೆಗೊಳಿಸದೆ ಬಜೆಟ್​ ಬೆಲೆಯ ಸ್ಮಾರ್ಟ್​ಫೋನ್​

ವಿವೊ Y20A ಸ್ಮಾರ್ಟ್​ಫೋನ್​ 13 ಮೆಗಾಫಿಕ್ಸೆಲ್​​ ಕ್ಯಾಮೆರಾ, 2 ಮೆಗಾಫಿಕ್ಸೆಲ್​ ಮತ್ತು 2 ಮೆಗಾಫಿಕ್ಸೆಲ್​ ಮ್ಯಾಕ್ರೊ ಕ್ಯಾಮೆರಾ ಅಳವಡಿಸಿಕೊಂಡಿದೆ. ಜೊತೆಗೆ ಸೆಲ್ಫಿಗಾಗಿ 8 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ನೀಡಿದೆ.

news18-kannada
Updated:December 30, 2020, 8:57 PM IST
Vivo Y20A: ತ್ರಿವಳಿ ಕ್ಯಾಮೆರಾ, 5 ಸಾವಿರ mAh ಬ್ಯಾಟರಿ; ವಿವೊ ಬಿಡುಗಡೆಗೊಳಿಸದೆ ಬಜೆಟ್​ ಬೆಲೆಯ ಸ್ಮಾರ್ಟ್​ಫೋನ್​
Vivo Y20A
  • Share this:
ವಿವೊ Y20A ಹೆಸರಿನ ಸ್ಮಾರ್ಟ್​ಫೋನ್​ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ನೂತನ ಸ್ಮಾರ್ಟ್​ಫೋನ್​ ಬಜೆಟ್​ ಬೆಲೆಯನ್ನು ಸಿಗಲಿದ್ದು, ಅಧಿಕ ಫೀಚರ್ಸ್​ ಒಳಗೊಂಡಿದೆ.

Vivo Y20A ಸ್ಮಾರ್ಟ್​ಫೋನ್​ 6.51 ಇಂಚಿನ ಹಾಲೊ ಐವ್ಯೂವ್​​ ಹೆಚ್​ಡಿ+ ಡಿಸ್​ಪ್ಲೇ ಹೊಂದಿದೆ. ಆ್ಯಂಡ್ರಾಯ್ಡ್​​ 10 ಜೊತೆಗೆ ಫನ್​ಟಚ್​​ ಒಎಸ್​​ 11ನಲ್ಲಿ ಕಾರ್ಯನಿರ್ವಹಿಸಲಿದೆ. ತ್ರಿವಳಿ ಕ್ಯಾಮೆರಾವನ್ನು ಹೊಂದಿರುವ ಈ ಸ್ಮಾರ್ಟ್​ಫೋನ್​ ಫಿಂಗರ್​ಪ್ರಿಂಟ್​​ ಸ್ಕ್ಯಾನರ್​ ಅಳವಡಿಸಿಕೊಂಡಿದೆ.

ವಿವೊ Y20A ಸ್ಮಾರ್ಟ್​ಫೋನ್​ 13 ಮೆಗಾಫಿಕ್ಸೆಲ್​​ ಕ್ಯಾಮೆರಾ, 2 ಮೆಗಾಫಿಕ್ಸೆಲ್​ ಮತ್ತು 2 ಮೆಗಾಫಿಕ್ಸೆಲ್​ ಮ್ಯಾಕ್ರೊ ಕ್ಯಾಮೆರಾ ಅಳವಡಿಸಿಕೊಂಡಿದೆ. ಜೊತೆಗೆ ಸೆಲ್ಫಿಗಾಗಿ 8 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ನೀಡಿದೆ.

ದೀರ್ಘ ಕಾಲದ ಬ್ಯಾಟರಿ ಬಾಳ್ವಿಕೆಗಾಗಿ 5 ಸಾವಿರ ಎಮ್​ಎಹೆಚ್​ ಬ್ಯಾಟರಿಯನ್ನು ಈ ಸ್ಮಾರ್ಟ್​ಫೋನ್​ ಹೊಂದಿದ್ದು, 17 ಗಂಟೆಗಳ ಕಾಲ ಹೆಚ್​ಡಿ ಸಿನಿಮಾ ಮತ್ತು 10 ಗಂಟೆಗಳ ಕಾಲ ಗೇಮಿಂಗ್​ಗಾಗಿ ಬಳಸಬಹುದಾದ ಬ್ಯಾಟರಿ ಸಾಮರ್ಥ್ಯ ಹೊಂದಿದೆ.
Youtube Video

ಅಂದಹಾಗೆಯೇ ಈ ಸ್ಮಾರ್ಟ್​ಫೋನ್​ 11,490 ರೂ.ಗೆ ಮಾರಾಟ ಮಾಡುತ್ತಿದೆ. ಕೈಗೆಟಕುವ ದರದಲ್ಲಿ ಸಿಗುವ ನೂತನ ಸ್ಮಾರ್ಟ್​ಫೋನ್​ ರೆಡ್​ಮಿ ನೋಟ್​ 9, ಮೊಟೊ ಜಿ9, ರಿಯಲ್ಮಿ ನಾರ್ಜೊ 20, ನೋಕಿಯಾ 2.4, ಮೈಕ್ರೊಮ್ಯಾಕ್ಸ್​ ಇನ್​ ನೋಟ್​​ 1 ಜೊತೆಗೆ ಮಾರುಕಟ್ಟೆಯಲ್ಲಿ ಸ್ಪರ್ಧಿಸಲಿದೆ.

ಜನವರಿ 2, 2021 ರಿಂದ Vivo Y20A ಸ್ಮಾರ್ಟ್​ಫೋನ್​ ಇ-ಸ್ಟೋರ್​, ಇ-ಕಾಮರ್ಸ್​ ಮಳಿಗೆ, ರಿಟೇಲ್​ ಸ್ಟೋರ್​ಗಳಲ್ಲಿ ಖರೀದಿಗೆ ಸಿಗಲಿದೆ. ಗ್ರಾಹಕರಿಗಾಗಿ ನೀಲಿ ಮತ್ತು ಬಿಳಿ ಬಣ್ಣದಲ್ಲಿ ಪರಿಚಯಿಸಿದೆ.
Published by: Harshith AS
First published: December 30, 2020, 8:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories