Rajesh DuggumaneRajesh Duggumane
|
news18-kannada Updated:May 24, 2020, 2:58 PM IST
ಸಾಂದರ್ಭಿಕ ಚಿತ್ರ
ಶಿರಸಿ (ಮೇ 24): ಕೊರೋನಾ ವೈರಸ್ ನಿಯಂತ್ರಣಕ್ಕೆ ಇಡೀ ವಿಶ್ವೇ ಹೋರಾಡುತ್ತಿದೆ. ಅನೇಕ ರಾಷ್ಟ್ರಗಳಲ್ಲಿ ಲಾಕ್ಡೌನ್ ಮುಂದುವರಿದಿದೆ. ಇದಕ್ಕೆ ಔಷಧ ಕಂಡು ಹಿಡಿಯಲು ಸಾಕಷ್ಟು ವಿಜ್ಞಾನಿಗಳು ಹರಸಾಹಸ ಪಡುತ್ತಿದ್ದಾರೆ. ಇನ್ನು, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡರೆ ಕೊರೋನಾ ಅಂಟುವುದಿಲ್ಲ ಎಂದು ಕೆಲ ವೈದ್ಯರು ಹೇಳಿದ್ದಾರೆ. ಆದರೆ, ಇದೇ ಈಗ ಪ್ರಾಣಕ್ಕೆ ಕುತ್ತಾದ ಘಟನೆ ಉತ್ತರ ಕನ್ನಡದ ಶಿರಸಿಯಲ್ಲಿ ನಡೆದಿದೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಾಕಷ್ಟು ಮಂದಿ ಬೇರೆ ಬೇರೆ ರೀತಿಯ ಆಹಾರ ಸೇವನೆ ಮಾಡುತ್ತಿದ್ದಾರೆ. ಅದರಲ್ಲೂ ಹೆಚ್ಚು ಪೌಷ್ಠಿಕ ಇರುವ ಆಹಾರ ಸೇವನೆಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ. ಇದೇ ರೀತಿ ಮಾಡಲು ಹೋದ ಮಗ ಮೃತಪಟ್ಟಿದ್ದು, ತಂದೆಯ ಸ್ಥಿತಿ ಗಂಭೀರವಾಗಿದೆ.
ಶಿರಸಿಯ ರಾಮನಬೈಲ್ ಭಾಗದಲ್ಲಿ ಈ ಘಟನೆ ನಡೆದಿದೆ. ಕೊರೋನಾ ತಡೆಗೆ ತಂದೆ ಮಕ್ಕಳಿಬ್ಬರು ಹಳ್ಳಿ ಔಷಧಿ ತಂದು ಅದನ್ನು ಕಾಯಿಸಿ ಕುಡಿದಿದ್ದರು. ಆದರೆ, ಇದನ್ನು ಕುಡಿದ ಕೆಲವೇ ಗಂಟೆಗಳಲ್ಲಿ ಮಗ ಫ್ರಾನ್ಸಿಸ್ ರೆಘೋ (42) ಮೃತಪಟ್ಟರೆ ಇವರ ತಂದೆ ಅಂಥೋನಿ ತೀವ್ರ ಅಸ್ವಸ್ಥಗೊಂಡಿದ್ದಾರೆ.
ಇದನ್ನೂ ಓದಿ: ಶಾಂತವಾಗಿದ್ದ ಶಿರಸಿ ಜನರಿಗೆ ಶಾಕ್: ಒಂದೇ ದಿನ 9 ಕೊರೋನಾ ಕೇಸ್ ಪತ್ತೆ, ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಳ?
ಇವರು ತಂದು ಕುಡಿದಿರುವ ಔಷಧಿ ಅಡ್ಡ ಪರಿಣಾಮ ಬೀರಿದ್ದು, ಇದು ಸಾವಿಗೆ ಕಾರಣ ಎನ್ನಲಾಗಿದೆ. ಅಸ್ವಸ್ಥಗೊಂಡ ಅಂಥೋನಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇವರು ಔಷಧವನ್ನು ಎಲ್ಲಿಂದ ತಂದಿದ್ದರು, ಅದರಲ್ಲಿ ಏನಿತ್ತು ಎಂಬುದು ತನಿಖೆ ನಂತರವೇ ತಿಳಿದು ಬರಬೇಕಿದೆ.
First published:
May 24, 2020, 2:58 PM IST