ಉತ್ತರಪ್ರದೇಶದಲ್ಲಿ ಗುಂಡು ಹಾರಿಸಿ ಬಿಜೆಪಿ ಮುಖಂಡನ ಹತ್ಯೆ; ತನಿಖೆಗೆ ಆದೇಶಿಸಿದ ಸಿಎಂ ಯೋಗಿ ಆದಿತ್ಯನಾಥ್

ಉತ್ತರಪ್ರದೇಶದಲ್ಲಿ ಇತ್ತೀಚೆಗೆ ರಾಜಕೀಯ ಮುಖಂಡರ ಸಾಲು ಸಾಲು ಹತ್ಯೆಗಳು ನಡೆಯುತ್ತಿದೆ. ಕಳೆದ ತಿಂಗಳು ರಾಷ್ಟ್ರ ಲೋಕಳದ ಮುಖಂಡ ದೇಶಪಾಲ್ ಖೋಖರ್ ಅವರನ್ನು ಹೀಗೆ ಗುಂಡಿಕ್ಕಿ ಕೊಲ್ಲಲಾಗಿತ್ತು.

ಹತ್ಯೆಗೀಡಾಗಿರುವ ಬಿಜೆಪಿ ನಾಯಕ ಸಂಜಯ್‌ ಖೋಖರ್.

ಹತ್ಯೆಗೀಡಾಗಿರುವ ಬಿಜೆಪಿ ನಾಯಕ ಸಂಜಯ್‌ ಖೋಖರ್.

  • Share this:
ಲಖನೌ (ಆಗಸ್ಟ್‌ 11); ಉತ್ತರ ಪ್ರದೇಶದ ಬಿಜೆಪಿ ಮುಖಂಡ ಸಂಜಯ್‌ ಖೋಖರ್‌  ಪಶ್ಚಿಮ ಉತ್ತರಪ್ರದೇಶದ ಬಾಗಪತ್‌ನಲ್ಲಿರುವ ತಮ್ಮ ಗ್ರಾಮದ ಬಳಿ ಇಂದು ಬೆಳಗ್ಗೆ ವಾಯು ವಿಹಾರಕ್ಕೆ ತೆರಳಿದ್ದಾಗ ಕೆಲವು ಅಪರಿಚಿತರು ಅವರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಜೆಪಿ ಮುಖಂಡನ ಕೊಲೆಗೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಈ ಪ್ರಕರಣವನ್ನು ತನಿಖೆಗೆ ಆದೇಶಿಸಿದ್ದು, 24 ಗಂಟೆಯ ಒಳಗಾಗಿ ಸಂಪೂರ್ಣ ವರದಿ ನೀಡುವಂತೆ ಪೊಲೀಸ್‌ ಇಲಾಖೆಗೆ ತಾಕೀತು ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಕೊಲೆಯ ಕುರಿತು ಮಾಹಿತಿ ನೀಡಿರುವ ಬಾಗಪತ್‌ನ ಪೊಲೀಸ್ ಅಧಿಕಾರಿ ಅಜಯ್ ಕುಮಾರ್, "ಸಂಜಯ್ ಖೋಖರ್ ತಮ್ಮ ಹೊಲಗಳಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅನೇಕರು ಅವರನ್ನು ಸುತ್ತುವರೆದು ಹಲವು ಬಾರಿ ಗುಂಡು ಹಾರಿಸಿದ್ದಾರೆ. ಮೃತ ದೇಹ ರಕ್ತದ ಮಡುವಿನಲ್ಲಿ ಬಿದ್ದಿದೆ. ಪ್ರಕರಣದ ಕುರಿತು ಪ್ರೈಮಾ ಫೇಸಿ ತನಿಖೆಯನ್ನು ಆರಂಭಿಸಲಾಗಿದೆ. ಮೇಲ್ನೋಟಕ್ಕೆ ಇದು ವೈಯಕ್ತಿಕ ದ್ವೇಷದ ಪ್ರಕರಣವೆಂದು ತೋರುತ್ತದೆ.

ಇದನ್ನೂ ಓದಿ : ಬೈರೂತ್ ಸ್ಫೋಟದ ಹೊಣೆ ಹೊತ್ತು ರಾಜೀನಾಮೆ ನೀಡಿದ ಲೆಬನಾನ್ ಪ್ರಧಾನಿ

ಆದಾಗ್ಯೂ, ನಾವು ಇದನ್ನು ಕೂಲಂಕಷವಾಗಿ ತನಿಖೆ ಮಾಡಿ ಶೀಘ್ರದಲ್ಲೇ ಕೊಲೆ ಆರೋಪಿಗಳನ್ನು ಬಂಧಿಸಲಿದ್ದೇವೆ. ಈ ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿಗಳಿಲ್ಲ ಹೀಗಾಗಿ ಇದು ಸವಾಲಿನ ಪ್ರಕರಣವಾಗಲಿದೆ" ಎಂದು ತಿಳಿಸಿಸಿದ್ದಾರೆ.

ಉತ್ತರಪ್ರದೇಶದಲ್ಲಿ ಇತ್ತೀಚೆಗೆ ರಾಜಕೀಯ ಮುಖಂಡರ ಸಾಲು ಸಾಲು ಹತ್ಯೆಗಳು ನಡೆಯುತ್ತಿದೆ. ಕಳೆದ ತಿಂಗಳು ರಾಷ್ಟ್ರ ಲೋಕಳದ ಮುಖಂಡ ದೇಶಪಾಲ್ ಖೋಖರ್ ಅವರನ್ನು ಹೀಗೆ ಗುಂಡಿಕ್ಕಿ ಕೊಲ್ಲಲಾಗಿತ್ತು.
Published by:MAshok Kumar
First published: