Skin Care: ಪೇರಲೆಯ ಎಲೆಗಳಲ್ಲಿ ಅಡಗಿದೆ ನಿಮ್ಮ ತ್ವಚೆಯ ಸೌಂದರ್ಯದ ಗುಟ್ಟು

Guava Leaves : ಪೇರಲೆ ಹಣ್ಣು ಮತ್ತು ಅದರ ಎಲೆಗಳು ಚರ್ಮದ ಅಂದವನ್ನು ಕಾಪಾಡುವ ಗುಣಗಳನ್ನು ಹೊಂದಿದೆ. ಹಣ್ಣಿನಲ್ಲಿ ವಿಟಮಿನ್ ಸಿ ತುಂಬಿದೆ.

ಪೇರಲೆ ಎಲೆ

ಪೇರಲೆ ಎಲೆ

  • Share this:
ಪೇರಲೆ ಹಣ್ಣು ಅಥವಾ ಸೀಬೆ ಹಣ್ಣು ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ? ಹೆಚ್ಚು ಶೀತ ಸ್ವಭಾವವನ್ನು ಹೊಂದಿರುವವರ ಇದರ ಸೇವನೆ ಕಡಿಮೆ ಮಾಡುವುದು ಸೂಕ್ತ. ಇನ್ನು ಈ ಹಣ್ಣಿನಲ್ಲಿ ಸಹ ಸೌಂದರ್ಯವರ್ಧಕ ಶಕ್ತಿ ಇದೆ ಎಂಬ ವಿಚಾರ ಗೊತ್ತಾ? ಹೌದು, ಪೇರಲೆ ಹಣ್ಣು ಮತ್ತು ಅದರ ಎಲೆಗಳು ಚರ್ಮದ ಅಂದವನ್ನು ಕಾಪಾಡುವ ಗುಣಗಳನ್ನು ಹೊಂದಿದೆ. ಹಣ್ಣಿನಲ್ಲಿ ವಿಟಮಿನ್ ಸಿ ತುಂಬಿದೆ. ಒಂದು ಹಣ್ಣಿನ ಸೇವನೆ ಬಹಳ ಉಪಯೋಗ ನೀಡುತ್ತದೆ. ಈ ಹಣ್ಣಿನಲ್ಲಿ ಪೊಟ್ಯಾಶಿಯಂ ಮತ್ತು ಫೋಲಿಕ್ ಆಸಿಡ್ ಇದ್ದು ಇದು ನಿಮ್ಮ ಚರ್ಮಕ್ಕೆ  ಬಹಳ ಉಪಯೋಗವಿದೆ.  ನೀವು ಚರ್ಮದ ಆರೈಕೆಯನ್ನು ಮಾಡಬೇಕು ಎಂದು ನೀವು ನಿರ್ಧರಿಸಿದರೆ, ಪೇರಲೆ ಎಲೆಗಳು ಮ್ಯಾಜಿಕ್ ಮಾಡಬಹುದು. ಚರ್ಮದ ಅಂದವನ್ನು ಹೆಚ್ಚಿಸುವಲ್ಲಿ ಪೇರಲೆ ಎಲೆಗಳು ಹೇಗೆ ಸಹಾಯ ಮಾಡುತ್ತದೆ ಎಂಬುದು ಇಲ್ಲಿದೆ.  

ಎಣ್ಣೆಯುಕ್ತ ಚರ್ಮ ಹೊಂದಿರುವವರು ಪೇರಲೆ ಎಲೆಗಳನ್ನು ಬಳಕೆ ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಪದಾರ್ಥಗಳು

ಸ್ವಲ್ಪ ಪೇರಲೆ ಎಲೆಗಳು

ಅರ್ಧ ಕಪ್ ನೀರು

ಎರಡು ಚಮಚ ನಿಂಬೆ ರಸ

ಮಾಡುವ ವಿಧಾನ

ಪೇರಲೆ ಎಲೆಗಳನ್ನು ನೀರನ್ನು ಹಾಕಿ ಮಿಕ್ಸಿ ಮಾಡಿ, ಅದು ನಯವಾಗಬೇಕು. ನಂತರ  ಒಂದು ಬಟ್ಟಲಿನಲ್ಲಿ ಆ ಪೇಸ್ಟ್‌  ಹಾಕಿ ಅದರ ಜೊತೆ ಎರಡು ಚಮಚ ನಿಂಬೆ ರಸ ಹಾಕಿ ಸರಿಯಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಚರ್ಮಕ್ಕೆ ಹಚ್ಚಿ ಮತ್ತು 30 ನಿಮಿಷಗಳ ಕಾಲ ಹಾಗೆ ಬಿಡಿ. 30 ನಿಮಿಷಗಳ ನಂತರ ಅದನ್ನು ತಣ್ಣೀರಿನಿಂದ ತೊಳೆಯಿರಿ.

ಇದನ್ನು ಓದಿ: ಒಣ ಕೂದಲ ಸಮಸ್ಯೆಗೆ ಇಲ್ಲಿದೆ ಸೂಪರ್ ಟಿಪ್ಸ್ - ಟ್ರೈ ಮಾಡಿ

ಮೊಡವೆ ಮತ್ತು ಬ್ಲ್ಯಾಕ್‌ಹೆಡ್‌ಗಳಿಗೆ  ಪೇರಲೆ ಎಲೆ ಉತ್ತಮವಾದ ಪ್ರಯೋಜನವನ್ನು ನೀಡುತ್ತದೆ.

ಬೇಕಾಗುವ ಪದಾರ್ಥಗಳು

ಸ್ವಲ್ಪ ಪೇರಲೆ ಎಲೆಗಳು

ಅರ್ಧ ಕಪ್ ನೀರು

1 ಚಮಚ ಅರಿಶಿನ

ಒಂದು ಚಮಚ ಅಲೋವೆರಾ ಜೆಲ್.

ಮಾಡುವ ವಿಧಾನ

ಪೇರಲೆ ಎಲೆ ಮತ್ತು ನೀರನ್ನು ಸೇರಿಸಿ ದಪ್ಪ ಪೇಸ್ಟ್ ಮಾಡಿಕೊಳ್ಳಿ, ಒಂದು ಬಟ್ಟಲಿನಲ್ಲಿ ಒಂದು ಚಮಚ ಅಲೋವೆರಾ ಜೆಲ್ ಮತ್ತು ಒಂದು ಚಿಟಿಕೆ ಅರಿಶಿನವನ್ನು ಈ ಪೇಸ್ಟ್​ಗೆ ಸೇರಿಸಿ, ಮತ್ತೊಮ್ಮೆ ಮಿಶ್ರಣ ಮಾಡಿ.  ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿ ಮತ್ತು 20 ನಿಮಿಷಗಳ ಕಾಲ ಹಾಗೆ ಒಣಗಲು ಬಿಡಿ. ನಂತರ ಅದನ್ನು ತಣ್ಣೀರಿನಿಂದ ತೊಳೆಯಿರಿ.

ಚರ್ಮದ ಕಿರಿಕಿರಿ ಸಮಸ್ಯೆ ಹೊಂದಿರುವವರು  ಪೇರಲೆ ಎಲೆಗಳ ಬಳಕೆ ಮಾಡಿ ಪ್ರಯೋಜನಗಳನ್ನು ಪಡೆಯಬಹುದು.

ಬೇಕಾಗುವ ಪದಾರ್ಥಗಳು

ಪೇರಲೆ ಎಲೆಗಳು 3 ರಿಂದ 4

ಒಂದು ಕಪ್ ನೀರು  ಮಾಡುವ ವಿಧಾನ

ಒಂದು ಕಪ್ ನೀರಿನಲ್ಲಿ ಪೇರಲೆ ಎಲೆಗಳನ್ನು ಸುಮಾರು 10 ನಿಮಿಷಗಳ ಕಾಲ ಕುದಿಸಿ. 10 ನಿಮಿಷಗಳ ನಂತರ ಗ್ಯಾಸ್ ಆಫ್ ಮಾಡಿ, ನೀರನ್ನು ತಣಿಯಲು ಬಿಡಿ. ನಂತರ ನೀವು ಕಿರಿಕಿರಿ ಇರುವ ಜಾಗಗಳಲ್ಲಿ ನೀರನ್ನು ಸ್ಪ್ರೇ ಮೂಲಕ ಸಿಂಪಡಿಸಿ. ನೀವು ಸೂಕ್ಷ್ಮ ಚರ್ಮವನ್ನು ಹೊಂದಿದ್ದರೆ ನಿಮ್ಮ ಮುಖವನ್ನು ತೊಳೆದ ನಂತರ ಈ ಸ್ಪ್ರೇ ಬಳಕೆ ಮಾಡುವುದು ಉತ್ತಮ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: