ಸಾಹಸ ಕಲಾವಿದ ವಿವೇಕ್​ ಸಾವಿನ ಪ್ರಕರಣ: ಅಜಯ್​ ರಾವ್​-ರಚಿತಾ ರಾಮ್​ ಬಂಧನಕ್ಕೆ ಆಗ್ರಹ..!

ವಿವೇಕ್​ ಅವರ ಸಾವಿಗೆ ಸಿನಿಮಾದ ನಾಯಕ ಹಾಗೂ ನಾಯಕಿಯೂ  ಹೊಣೆಗಾರರಾಗಿದ್ದಾರೆ. ಆದರೆ, ಅವರ ವಿರುದ್ಧ ಪ್ರಕರಣ ದಾಖಲು ಮಾಡಿಲ್ಲ. ನಾಯಕ ನಟ ಮತ್ತು ನಾಯಕಿ ನಟಿಯ ಮೇಲೆಯೂ ದೂರು ದಾಖಲಿಸಿ, ಬಂಧಿಸುವಂತೆ ಎಐಸಿಸಿ ಯೂಮನ್ ರೈಟ್ಸ್ ರಾಜ್ಯಾಧ್ಯಕ್ಷ ಎಂ.ಜೆ ಗಿರೀಶ್ ಮನವಿ ಸಲ್ಲಿಸಿದ್ದಾರೆ.

ಅಜಯ್​ ರಾವ್​ ಹಾಗೂ ರಚಿತಾ ರಾಮ್​ ಬಂಧನಕ್ಕೆ ಆಗ್ರಹ

ಅಜಯ್​ ರಾವ್​ ಹಾಗೂ ರಚಿತಾ ರಾಮ್​ ಬಂಧನಕ್ಕೆ ಆಗ್ರಹ

  • Share this:
ಲವ್​ ಯೂ ರಚ್ಚು ಸಿನಿಮಾದ ಶೂಟಿಂಗ್​ನಲ್ಲಿ ನಡೆದ ಅವಘಡದಲ್ಲಿ ಸಾಹಸ ಕಲಾವಿದ ವಿವೇಕ್​ ಅವರು ಸಾವನ್ನಪ್ಪಿರುವ ಪ್ರಕರಣಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಶಂಕರ್ ರಾಜ್​, ಸಾಹಸ ನಿರ್ದೇಶಕ ವಿನೋದ್​, ಕ್ರೇನ್ ಚಾಲಕ ವಿನೋದ್​ ಅವರನ್ನು ನಿನ್ನೆ ಪೊಲೀಸರು ವಿಚಾರಣೆಗೆಂದು ವಶಕ್ಕೆ ಪಡೆದಿದ್ದರು. ಈ ಮೂವರನ್ನು ಪೊಲೀಸರು ನ್ಯಾಯಾಲಯದಲ್ಲಿ ಹಾಜರು ಪಡಿಸಿದ್ದು, ಅವರನ್ನು 24 ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ನಿರ್ಮಾಪಕ ಹಾಗೂ ಮ್ಯಾನೇಜರ್​ ಸಂಪರ್ಕಕ್ಕೆ ಸಿಗುತ್ತಿಲ್ಲ. ಘಟನೆ ನಡೆದಾಗ ನಿರ್ಮಾಪಕ ಸ್ಥಳದಲ್ಲಿ ಇರಲಿಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮತ್ತೊಂದು ಬೆಳವಣಿಗೆ ಆಗಿದೆ. ಎಐಸಿಸಿ ಹ್ಯೂಮನ್​​ ರೈಟ್ಸ್ ವತಿಯಿಂದ ರಾಮನಗರ ಎಸ್​ಪಿ ಗಿರೀಶ್ ಅವರಿಗೆ ದೂರು ನೀಡಲಾಗಿದೆ‌.

ಸಾಹಸ ಕಲಾವಿದ ವಿವೇಕ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರನಟ ಅಜಯ್ ರಾವ್, ರಚಿತಾ ರಾಮ್ ಅವರನ್ನೂ ಬಂಧಿಸಬೇಕೆಂದು ಎಐಸಿಸಿ ಹ್ಯೂಮನ್​ ರೈಟ್ಸ್​ ಆಗ್ರಹಿಸಿದೆ. ವಿವೇಕ್​ ಅವರ ಸಾವಿಗೆ ಸಿನಿಮಾದ ನಾಯಕ ಹಾಗೂ ನಾಯಕಿಯೂ  ಹೊಣೆಗಾರರಾಗಿದ್ದಾರೆ. ಆದರೆ, ಅವರ ವಿರುದ್ಧ ಪ್ರಕರಣ ದಾಖಲು ಮಾಡಿಲ್ಲ. ನಾಯಕ ನಟ ಮತ್ತು ನಾಯಕಿ ನಟಿಯ ಮೇಲೆಯೂ ದೂರು ದಾಖಲಿಸಿ, ಬಂಧಿಸುವಂತೆ ಎಐಸಿಸಿ ಯೂಮನ್ ರೈಟ್ಸ್ ರಾಜ್ಯಾಧ್ಯಕ್ಷ ಎಂ.ಜೆ ಗಿರೀಶ್ ಮನವಿ ಸಲ್ಲಿಸಿದ್ದಾರೆ.

Fighter Vivek Death, love you racchu, Rachita Ram, Sandalwood, rachita, rachita ram, rachitha, rachitha ram, rachita ram photos, rachita ram photo, rachita ram hot, ramya, radhika pandit, rashmika mandanna, ವಿದ್ಯುತ್ ತಂತಿ ಸ್ಪರ್ಶಿಸಿ ಅವಘಡ, ರಚಿತಾ ರಾಮ್​ ಸಿನಿಮಾ ಶೂಟಿಂಗ್ , ಫೈಟರ್ ವಿವೇಕ್ ಸಾವು, love you Rachchu movie, Fighter Vivek died while shooting love you Rachchu movie in Bidadi ae
ವಿವೇಕ್​ ಸಾವಿನ ಕುರಿತಾಗಿ ಹೇಳಿಕೆ ಕೊಟ್ಟ ಅಜಯ್ ರಾವ್​


ಮಾಸ್ತಿಗುಡಿ ಚಿತ್ರದ ದುರಂತ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದ್ದು, ಇದಕ್ಕೆ ಬೇಜವಾಬ್ದಾರಿ ಕಾರಣವಾಗಿದೆ. ಸಾಹಸ ದೃಶ್ಯದ ಚಿತ್ರಿಕರಣದ ವೇಳೆ ಆಂಬ್ಯುಲೆನ್ಸ್ ಸೇರಿದಂತೆ ಯಾವುದೇ ರಕ್ಷಣಾತ್ಮಕ ಕ್ರಮಗಳನ್ನೂ ಕೈಗೊಂಡಿಲ್ಲ. ಅಲ್ಲದೆ, ದುರಂತ ಸಂಭವಿಸುತ್ತಿದ್ದಂತೆ ಮಾನವೀಯತೆ ಇಲ್ಲದೆ ಚಿತ್ರಿಕರಣದಲ್ಲಿ ಪಾಲ್ಗೊಂಡಿದ್ದವರು ಪಲಾಯನ ಮಾಡಿದ್ದಾರೆ‌ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಗಿರೀಶ್​.

ಇದನ್ನೂ ಓದಿ: Rashmika Mandanna: ಹಾಟ್​ ಫೋಟೋ ಹಂಚಿಕೊಂಡ ರಶ್ಮಿಕಾ ಮಂದಣ್ಣ: ಇದರ ಹಿಂದಿದೆ ಒಂದು ಕಾರಣ..!

ಜಮೀನು ಮಾಲೀಕರಿಗೆ ಏನು ವಿಷಯ ಗೊತ್ತಿರಲ್ಲಿಲ್ಲ. ಆದರೆ ಚಿತ್ರೀಕರಣಕ್ಕೆ ಅನುಮತಿ ಪಡೆಯಬೇಕಿತ್ತು. ನಿರ್ದೇಶಕ ಸಹ ಅನುಮತಿ ಪಡೆಯಬೇಕಿತ್ತು. ಆದರೆ ಅನುಮತಿಯನ್ನುಯಾರೂ ಪಡೆದುಕೊಂಡಿಲ್ಲ. ಹೀಗಾಗಿ ಇವರ ವಿರುದ್ಧ ಪೊಲೀಸರೇ  ದಾಖಲಿಸಿಕೊಂಡಿದ್ದಾರೆ.

ಸ್ಟಂಟ್ ಮಾಸ್ಟರ್ ವಿನೋದ್ ಅವರ ಬೇಜವಾಬ್ದಾರಿತನದಿಂದ ಈ ಘಟನೆ ಆಗಿ ಹೋಗಿದೆ ಎಂಬಂತಹ ದೂರುಗಳು ಕೇಳಿಬರುತ್ತಿವೆ. ಆದರೆ, ಗಾಯಗೊಂಡಿರುವ ಫೈಟರ್ ರಂಜಿತ್ ಅವರು ಈ ಅಭಿಪ್ರಾಯಗಳನ್ನ ತಳ್ಳಿಹಾಕಿದ್ದಾರೆ. ಸ್ಟಂಟ್ ಮಾಸ್ಟರ್ ಜೊತೆ ಏಳೆಂಟು ವರ್ಷಗಳಿಂದ ತಾನು ಕೆಲಸ ಮಾಡುತ್ತಿದ್ದೇನೆ. ಅವರಷ್ಟು ಕೇರ್ ಮಾಡುವ ಮಾಸ್ಟರ್ ಅನ್ನು ನಾನು ನೋಡಿಯೇ ಇಲ್ಲ. ಅವರ ಬಗ್ಗೆ ಊಹಾಪೋಹ ಹರಿದಾಡುತ್ತಿರುವುದನ್ನು ನಾನು ಒಪ್ಪಲ್ಲ. ಕ್ರೇನ್ ಆಪರೇಟರ್ ಮಿಸ್ಟೇಕ್​ನಿಂದ ಮಾತ್ರ ಈ ಘಟನೆ ಆಗಿದೆ. ಅದು ಬಿಟ್ಟರೆ ಬೇರೆ ಯಾರೂ ಇದಕ್ಕೆ ಹೊಣೆಯಲ್ಲ ಎಂದು ರಂಜಿತ್ ಹೇಳಿದ್ದಾರೆ.

ಇದನ್ನೂ ಓದಿ: Kareena Kapoor: ಕರೀನಾ ಕಪೂರ್ ಗರ್ಭಿಣಿಯಾಗಿದ್ದಾಗ ಹೇಗಿತ್ತು ಲೈಂಗಿಕ ಜೀವನ? ಗುಟ್ಟು ರಟ್ಟು ಮಾಡಿದ ನಟಿ

ನಾಲ್ಕು ವರ್ಷಗಳ ಹಿಂದೆ ಇಂಥದ್ದೇ ಒಂದು ದುರಂತ ಘಟನೆ ಸ್ಯಾಂಡಲ್​ವುಡ್ ಅನ್ನು ಬೆಚ್ಚಿಬೀಳಿಸಿತ್ತು. ದುನಿಯಾ ವಿಜಿ ಅಭಿನಯದ ಮಾಸ್ತಿಗುಡಿ ಚಿತ್ರದ ಶೂಟಿಂಗ್ ವೇಳೆ ಕ್ರೇನ್​ನಿಂದ ಕೆರೆಗೆ ಬಿದ್ದು ಉದಯ್ ಮತ್ತು ಅನಿಲ್ ಎಂಬ ಪ್ರತಿಭಾನ್ವಿತ ಖಳ ನಟರು ಸಾವನ್ನಪ್ಪಿದ್ದರು.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
Published by:Anitha E
First published: