BJP ಈಗ ಕಲಬೆರಕೆ ಪಕ್ಷ.. ಡಿಕೆಶಿಗೆ DNA ಟೆಸ್ಟ್ ಮಾಡಿಸಬೇಕು.. Pramod Muthalik ಮಾತಿನ ಅರ್ಥವೇನು?

ಡಿಕೆಶಿಯ ಡಿಎನ್ಎ ಟೆಸ್ಟ್ ಮಾಡಿಸಬೇಕು. ಎಲ್ಲೋ ಅದು ಮಿಕ್ಸ್ ಆದಂಗೆ ಕಾಣಿಸ್ತಿದೆ ಎಂದು Pramod Muthalik ವ್ಯಂಗ್ಯವಾಡಿದರು.

ಪ್ರಮೋದ್ ಮುತಾಲಿಕ್

ಪ್ರಮೋದ್ ಮುತಾಲಿಕ್

  • Share this:
ಬಾಗಲಕೋಟೆ: ಬಿಜೆಪಿ (BJP) ಈಗ ಕಲಬೆರಕೆ ಪಕ್ಷವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​​ಗೆ (KPCC President D. K. Shivakumar) ಡಿಎನ್​ಎ ಪರೀಕ್ಷೆ (DNA Test) ಮಾಡಿಬೇಕು ಎಂದು ಶ್ರೀರಾಮಸೇನೆ (sriram sena) ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ತಮ್ಮ ಎಂದಿನ ಶೈಲಿಯಲ್ಲಿ ವಾಗ್ದಾಳಿ ನಡೆಸಿದರು. ಇವತ್ತು ಬಿಜೆಪಿಗೆ 60-70 ಪ್ರತಿಶತ ಕಾಂಗ್ರೆಸ್, ಜೆಡಿಎಸ್ ಪಕ್ಷದಿಂದ ಬಂದಿದ್ದಾರೆ‌, ಕಮ್ಯುನಿಸ್ಟರು ಬಂದಿದ್ದಾರೆ. 30-40 % ಮಾತ್ರ ಬಿಜೆಪಿಯವರು ಇದ್ದಾರೆ‌‌. ಕಾಂಗ್ರೆಸ್ ನವರಿಗೆ ಹಿಂದುತ್ವ ಇಲ್ಲ, ಅವರಿಗೆ ಬರೀ ಲೂಟಿ ಮಾಡಬೇಕು ಅನ್ನೋದಿದೆ. ಇಲ್ಲಿವರೆಗೆ ಕಾಂಗ್ರೆಸ್ ನವರು ಟೆರರಿಸ್ಟ್ ಗಳನ್ನೇ ಬೆಳೆಸಿದ್ದಾರೆ‌‌. ಅಂತವರು ಇಂದು ಬಿಜೆಪಿಯಲ್ಲಿದ್ದಾರೆ‌ ಎಂದು ಆರೋಪಿಸಿದರು. ಅವರಿಗೆ ಹಿಂದುತ್ವ ಧರ್ಮ ದೇಶ,ಸಂಸ್ಕೃತಿ, ಮಾನ ಮರ್ಯಾದೆ ಏನು ಇಲ್ಲ. ಬಿಜೆಪಿ ಇಂದು ಓರಿಜಿನಲ್ ಬಿಜೆಪಿ ಆಗಿ ಉಳಿದಿಲ್ಲ ಎಂದ ಮುತಾಲಿಕ್​​ ಅಸಮಾಧಾನ ವ್ಯಕ್ತಪಡಿಸಿದರು.

ಲಂಬಾಣಿ ತಾಂಡಾಗಳಿಗೆ ಪಾದ್ರಿಗಳು ನುಗ್ಗುತ್ತಿದ್ದಾರೆ

ಮತಾಂತರದ ವಿಚಾರವಾಗಿ ಮಾತನಾಡಿದ ಅವರು, ಹೊಸದುರ್ಗದ ಎಂ ಎಲ್ ಎ ಗೂಳಿಹಟ್ಟಿ ಶೇಖರ್ ವಿಧಾನಸಭೆಯಲ್ಲಿ ಮತಾಂತರ ವಿಚಾರವನ್ನು ಚರ್ಚೆಗೆ ತಂದರು. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.ಅವರ ತಾಯಿಯೇ ಮತಾಂತರ ಆಗಿದ್ದರ ಬಗ್ಗೆ ಅವರು ವಿವರಿಸಿದರು. ನಮ್ಮ ದೇಶದ 99% ಕ್ರಿಶ್ಚಿಯನ್ನರು ಮತಾಂತರ ಆದವರು. ಒತ್ತಾಯ, ಆಸೆ-ಆಮಿಷಗಳಿಂದ ಮತಾಂತರ ಆಗಿದ್ದಾರೆ. ಮತಾಂತರದ ಹಾವಳಿ ವಿಪರೀತ ಆಗಿದೆ. ಲಂಬಾಣಿ ತಾಂಡಾಗಳಿಗೆ ಪಾದ್ರಿಗಳು ನುಗ್ಗುತ್ತಿದ್ದಾರೆ. ಅವರನ್ನು ಗೋವಾಕ್ಕೆ ಕರೆದುಕೊಂಡು ಹೋಗ್ತಾರೆ, ಅಲ್ಲಿ ಮತಾಂತರ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಎಲ್ಲವೂ ಮತಾಂತರದಲ್ಲೇ ಮುಕ್ತಾಯವಾಗುತ್ತಿದೆ

ನವೆಂಬರ್​ 12ರಂದು ಸಿಎಂ ಬಳಿ ಹೋಗುತ್ತೇವೆ. ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಬೇಕೆಂದು ಒತ್ತಾಯ ಮಾಡುತ್ತೇವೆ. ನೂರಕ್ಕೂ ಹೆಚ್ಚು ಪೂಜ್ಯರಿಂದ ಮನವಿ ಸಲ್ಲಿಸುತ್ತೇವೆ. ನಿಮ್ಮ(ಕ್ರಿಶ್ಚಿಯನ್ ಮಿಷನರಿಗಳು) ಶಾಲೆ ಸಂಘ ಸಂಸ್ಥೆ ಕೊನೆಗೆ ಮತಾಂತರದಲ್ಲೇ ಮುಕ್ತಾಯವಾಗುತ್ತವೆ. ಶಿಕ್ಷಣ ನೀಡೋದು, ಆರೋಗ್ಯ ಸೇವೆ ಎಲ್ಲವೂ ಬೂಟಾಟಿಕೆ ಎಂದು ಪ್ರಮೋದ ಮುತಾಲಿಕ್ ಕಿಡಿಕಾರಿದರು.

ಡಿಕೆಶಿಯ ಡಿಎನ್ಎ ಟೆಸ್ಟ್ ಮಾಡಿಸಬೇಕು

ಮತಾಂತರ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ವಿರುದ್ಧವೂ ಮುತಾಲಿಕ್​ ವಾಗ್ದಾಳಿ ನಡೆಸಿದರು. ಡಿಕೆಶಿ ತಮ್ಮ ಕ್ಷೇತ್ರದಲ್ಲಿ 52 ಅಡಿ ಏಸು ಕ್ರಿಸ್ತನ ಪುತ್ಥಳಿ ಕೂರಿಸೋದಕ್ಕೆ ಹೊರಟ, ಆಮೂಲಕ ಸೋನಿಯಾ ಗಾಂಧಿ ಮೆಚ್ಚಿಸಲು ಯತ್ನಿಸಿದರು. ಡಿಜೆ ಹಳ್ಳಿ ಕೆಜೆ ಹಳ್ಳಿ ಗಲಾಟೆಯಾದಾಗ ಇದೇ ಡಿಕೆಶಿ ನಾವೆಲ್ಲ ಬರ್ದರ್ಸ್ ಆ್ಯಂಡ್ ಸಿಸ್ಟರ್ಸ್ ಅಂದ್ರು. ಡಿಕೆಶಿಯ ಡಿಎನ್ಎ ಟೆಸ್ಟ್ ಮಾಡಿಸಬೇಕು. ಎಲ್ಲೋ ಅದು ಮಿಕ್ಸ್ ಆದಂಗೆ ಕಾಣಿಸ್ತಿದೆ ಎಂದು ವ್ಯಂಗ್ಯವಾಡಿದರು. ಡಿಕೆಶಿಯವರೇ ದೇಶ ನೋಡಿ ಮೊದಲು, ದೇಶ ಉಳಿದರೆ ನೀವು ಕೆಪಿಸಿಸಿ ಅಧ್ಯಕ್ಷರಾಗಿರುತ್ತೀರಿ. ಇಲ್ಲದೆ ಹೋದರೆ ನೀವು ಇಟಲಿಗೆ ಹೋಗಬೇಕಾಗುತ್ತದೆ ಎಂದಿ ಕುಹಕವಾಡಿದರು.

ಇದನ್ನೂ ಓದಿ: Karnataka Legislative Council: 25 ವಿಧಾನ ಪರಿಷತ್​​​ ಸ್ಥಾನಗಳಿಗೆ ಚುನಾವಣೆ ದಿನಾಂಕ ಘೋಷಣೆ: ಸಂಪೂರ್ಣ ಮಾಹಿತಿ ಇಲ್ಲಿದೆ

ರಾಜ್ಯ ಸರ್ಕಾರದ ವಿರುದ್ಧ ಕೆಂಡಾಮಂಡಲ

ರಾಜ್ಯದಲ್ಲಿ ದೇವಸ್ಥಾನ ಒಡೆದ ವಿಚಾರ‌ವಾಗಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಹಿಂದುತ್ವದ ಹೆಸರಲ್ಲಿ ಅಧಿಕಾರಕ್ಕೆ ಬಂದ ಪಕ್ಷದಿಂದಲೇ ದೇವಸ್ಥಾನ ಒಡೆಯಲಾಗುತ್ತಿದೆ. ಇದಕ್ಕಾಗಿ ಸಿಟ್ಟಿದೆ,  ಬೇಸರವಿದೆ. ನಾವು ಈ ಬಗ್ಗೆ ಕೈ ಕಟ್ಟಿ ಕೂತಿಲ್ಲ, ಆಂದೋಲನ ಮಾಡುತ್ತೇವೆ. ಸುಪ್ರೀಂ ಕೋರ್ಟ್ ಆದೇಶ ಅಂತ ಇವರು ಹಿಂದೂ ದೇವಸ್ಥಾನ ಒಡೆದರು. ಮಸೀದಿಯಲ್ಲಿನ ಮೈಕ್ ತೆರವುಗೊಳಿಸಬೇಕೆಂದು ಕೂಡ ಸುಪ್ರೀಂ ಕೋರ್ಟ್ ಆದೇಶವಿದೆ. ರಾಜ್ಯ ಸರಕಾರ ಯಾಕೆ ತೆಗೆಯೋದಿಲ್ಲ. ನಾವು ಈಗ ಮಸೀದಿ ಮೈಕ್ ತೆರವುಗೊಳಿಸುವಂತೆ ಹೋರಾಟ ಮಾಡುತ್ತಿದ್ದೇವೆ‌. ಮುಂದೆ ದೊಡ್ಡ ಪ್ರಮಾಣದಲ್ಲಿ ಧರಣಿ ಮಾಡುವವರಿದ್ದೇವೆ. ನೀವು ತೆಗೆಯುತ್ತೀರೋ ಇಲ್ಲ ನಾವು ತೆಗೆಯೋಣವೆ ಎಂದು ಹೋರಾಟ ಮಾಡುತ್ತೇವೆ ಎಂದರು.
Published by:Kavya V
First published: