ಪುರುಷರ ವೀರ್ಯ ಕೆಲವೊಮ್ಮೆ ಬಣ್ಣ ಬದಲಾಗಬಹುದು; ಅದಕ್ಕೆ ಕಾರಣವೇನು ಗೊತ್ತೆ?

ಯಕೃತ್ (ಲಿವರ್) ಅಸಮರ್ಪಕವಾಗಿ ಬಿಲಿರುಬಿನ್ ಅನ್ನು ವಿಘಟನೆ ಮಾಡಿದ ವೇಳೆ ಕಾಮಾಲೆ ರೋಗ ಕಂಡು ಬರುತ್ತದೆ. ಕಾಮಾಲೆ ರೋಗ ಬಂದರೆ ಆಗ ಚರ್ಮ, ಮತ್ತು ಕಣ್ಣು ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದೇ ವೇಳೆ ಅದು ವೀರ್ಯದ ಮೇಲೂ ಪರಿಣಾಮ ಬೀರಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ದೇಹವು ಅನಾರೋಗ್ಯಕ್ಕೆ ಒಳಗಾದರೆ ಅದರಿಂದ ನಮಗೆ ಹಲವಾರು ಸುಳಿವು ಹಾಗೂ ಸೂಚನೆಗಳು ಸಿಗುತ್ತದೆ. ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಆಗ ನಮಗೆ ಯಾವ ಸಮಸ್ಯೆ ಇದೆ ಎಂದು ಅರ್ಥ ಮಾಡಿಕೊಳ್ಳಬಹುದು. ಪುರುಷರು ಕೂಡ ಕೆಲವೊಂದು ಸಲ ಅನಾರೋಗ್ಯಕ್ಕೆ ಒಳಗಾದರೆ ಆಗ ಕೆಲವೊಂದು ಬದಲಾವಣೆಗಳು ಕಂಡುತ್ತದೆ.

    ಇದರಲ್ಲಿ ಮುಖ್ಯವಾಗಿ ಪುರುಷರ ವೀರ್ಯವು ಬಿಳಿ ಹಾಗೂ ದಪ್ಪವಾಗಿರುತ್ತದೆ. ಆದರೆ, ಕೆಲವೊಮ್ಮೆ ವೀರ್ಯದ ಬಣ್ಣವು ಅನಿರೀಕ್ಷಿತವಾಗಿ ಕೆಂಪು, ಕಂದು ಬಣ್ಣಕ್ಕೆ ತಿರುಗಿದರೆ ಇದರ ಬಗ್ಗೆ ಕೂಡಲೇ ವೈದ್ಯರ ಸಲಹೆ ಪಡೆದುಕೊಳ್ಳುವುದು ಅತ್ಯಗತ್ಯ. ಒಂದು ವೇಳೆ ವೀರ್ಯವು ಬಣ್ಣ ಕಳೆದುಕೊಂಡರೆ ಇದರ ಅರ್ಥ ವೀರ್ಯದಲ್ಲಿ ಏನೋ ಸಮಸ್ಯೆ ಇದೆ ಎಂದು ತಿಳಿದುಕೊಳ್ಳಬೇಕು. ಅಷ್ಟಕ್ಕೂ ವೀರ್ಯವೂ ಬಣ್ಣ ಬದಲಾಯಿಸಲು ಕಾರಣ ಏನು ಗೊತ್ತಾ?

    ವೀರ್ಯದ ಬಣ್ಣ ಬದಲಾಯಿಸುವುದನ್ನು ಅರ್ಥ ಮಾಡಿಕೊಳ್ಳುವ ಮುನ್ನ ವೀರ್ಯ ಎಂದರೇನು ಎಂದು ಅರ್ಥ ಮಾಡಿಕೊಳ್ಳಬೇಕು. ವೀರ್ಯವನ್ನು ವೃಷಣವು ಸ್ರವಿಸುವುದು, ವೃಷಣನಾಳ ಸುರುಳಿ ರೇತ್ರನಾಳಗೆ ಚಲಿಸುವುದು ಮತ್ತು ಇದರ ಬಳಿಕ ಪ್ರೊಸ್ಟೇಟ್ ನಲ್ಲಿ ಇರುವಂತಹ ಮೂಲದ್ರವದೊಂದಿಗೆ ಇರು ಸೇರಿಕೊಳ್ಳುವುದು. ಬಲ್ಬೌರೆಥ್ರಲ್ ಮತ್ತು ಮೂತ್ರನಾಳದ ಮೂಲಕವಾಗಿ ಇದು ದೇಹದಿಂದ ಹೊರಗೆ ಬರುತ್ತದೆ. ವೀರ್ಯವು ಮೂಲ ಕೋಶಕಗಳು ಪ್ರಾಸ್ಟೇಟ್ ಗ್ರಂಥಿ ವೃಷಣನಾಳ ಸುರಳಿ ಮತ್ತು ರೇತ್ರನಾಳದ ದ್ರವದ ಮಿಶ್ರಣವಾಗಿದೆ. ವೀರ್ಯಕ್ಕೆ ಬೊಳಿ ಬಣ್ಣ ಬರಲು ಮೊದಲು ಹೇಳಿರುವಂತಹ ನಾಲ್ಕು ಅಂಶಗಳು ಕಾರಣವಾಗಿದೆ. ಇದನ್ನು ಪ್ರೊಸ್ಟೇಟ್ ಗ್ರಂಥಿ ಒದಗಿಸುತ್ತದೆ. ಬಲ್ಬೌರೆಥ್ರಲ್ ಗ್ರಂಥಿಗಳು ಶುದ್ಧ ಸ್ರವಿಸುವಿಕೆ ಉಂಟು ಮಾಡುವುದು ಮತ್ತು ವೀರ್ಯದ ಉಪಸ್ಥಿತಿಯು ಮೋಡದ ಬಣ್ಣಕ್ಕೆ ಕಾರಣವಾಗುತ್ತದೆ.

    ವೀರ್ಯದ ಬಣ್ಣವು ಬಿಳಿ ಮೋಡದಂತೆ ಇರುವುದು. ಕೆಲವೊಂದು ಪುರುಷರಲ್ಲಿ ನೈಸರ್ಗಿಕಾಗಿ ಹಳದಿ ಬಣ್ಣವು ಬರುವುದು. ಆದಾಗ್ಯೂ, ಹಳದಿ ವೀರ್ಯವು ಹಠಾತ್ ಆಗಿ ಕಾಣಿಸಿಕೊಂಡರೆ ಆಗ ವೀರ್ಯಕ್ಕೆ ಕಾರಣವಾಗಿರುವಂತಹ ಯಾವುದೇ ಒಂದು ಗ್ರಂಥಿಯಲ್ಲಿ ಅಥವಾ ಅದರ ವಿನ್ಯಾಸದಲ್ಲಿ ಯಾವುದಾದರೂ ಸಮಸ್ಯೆ ಇದೆ ಎಂದು ಹೇಳಬಹುದು. ಇದು ಬೇರೆ ಆರೋಗ್ಯ ಸಮಸ್ಯೆಗಳ ಕಾರಣದಿಂದಲೂ ಆಗಿರಬಹುದು. ದೀರ್ಘಕಾಲದ ತನಕ ಸ್ಖಲನ ಮಾಡದೆ ಇರುವುದು ಸಹ ಇದಕ್ಕೆ ಕಾರಣವಾಗಬಹುದು. ದೀರ್ಘಕಾಲದ ವರೆಗೆ ಸ್ಖಲನ ಮಾಡದೆ ಇರುವಂತಹ ಪುರುಷರಲ್ಲಿ ವೀರ್ಯದೊಂದಿಗೆ ಮೂತ್ರವೂ ಬರಬಹುದು. ಉರಿಯೂತ ಮತ್ತು ಸೋಂಕಿನಿಂದಾಗಿ ಅಧಿಕ ಮಟ್ಟದ ಬಿಳಿ ರಕ್ತದ ಕಣಗಳು ಉಂಟಾಗಬಹುದು. ಇದು ಕೂಡ ವೀರ್ಯದಲ್ಲಿ ಕಂಡುಬರಬಹುದು. ಹೀಗಾಗಿ ವೀರ್ಯವು ಹಳದಿ ಬಣ್ಣಕ್ಕೆ ತಿರುಗಬಹುದು. ಈ ಪರಿಸ್ಥಿತಿಯನ್ನು ಪಯೋಸ್ಪೆರ್ಮಿಯಾ ಎಂದು ಕರೆಯಲಾಗುತ್ತದೆ ಮತ್ತು ಇದು ಜನನೇಂದ್ರೀಯದ ಸೋಂಕು, ಸ್ವರಕ್ಷಿತ ರೋಗ, ರೇತ್ರ ತಂತುವಿನಲ್ಲಿ ಇರುವ ಗಡ್ಡೆ ಮತ್ತು ಮದ್ಯಪಾನ, ಮರುಜುನಾ ಅಥವಾ ತಂಬಾಕು ಸೇವನೆಯಿಂದಲೂ ಹೀಗೆ ಆಗಬಹುದು.

    ಇದನ್ನು ಓದಿ: ಮಹಿಳೆಯ ಬ್ಯಾಗಿನಲ್ಲಿದ್ದ ಸೆಕ್ಸ್ ಟಾಯ್ಸ್‌ಗಳ ಎಕ್ಸರೇ ಸ್ಕ್ಯಾನ್ ಫೋಟೋ ಹಂಚಿಕೊಂಡಿದ್ದ ಭದ್ರತಾ ಸಿಬ್ಬಂದಿ ವಜಾ!

    ಯಕೃತ್ (ಲಿವರ್) ಅಸಮರ್ಪಕವಾಗಿ ಬಿಲಿರುಬಿನ್ ಅನ್ನು ವಿಘಟನೆ ಮಾಡಿದ ವೇಳೆ ಕಾಮಾಲೆ ರೋಗ ಕಂಡು ಬರುತ್ತದೆ. ಕಾಮಾಲೆ ರೋಗ ಬಂದರೆ ಆಗ ಚರ್ಮ, ಮತ್ತು ಕಣ್ಣು ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದೇ ವೇಳೆ ಅದು ವೀರ್ಯದ ಮೇಲೂ ಪರಿಣಾಮ ಬೀರಬಹುದು. ಲೈಂಗಿಕವಾಗಿ ಕಾಡುವಂತಹ ಕೆಲವೊಂದು ಸೋಂಕುಗಳಾಗಿರುವ ಕ್ಲೆಮೈಡಿಯಾ, ಗೊನೊರಿಯಾ ಮತ್ತು ಹರ್ಪಿಸ್ ಕೂಡ ವೀರ್ಯವನ್ನು ಹಳದಿ ಬಣ್ಣಕ್ಕೆ ತಿರುಗಿಸಬಹುದು. ನಿಮ್ಮ ವೀರ್ಯದಲ್ಲಿ ಇಂತಹ ಬದಲಾವಣೆ ಕಂಡು ಬಂದಿದ್ದಲ್ಲಿ ಅದಕ್ಕೆ ಕಾರಣವನ್ನು ತಿಳಿದುಕೊಳ್ಳಿ ಮತ್ತು ತಡ ಮಾಡದೆ ತಜ್ಞ ವೈದ್ಯರನ್ನು ಭೇಟಿ ಮಾಡಿ, ಪರಿಹಾರ ಕಂಡುಕೊಳ್ಳಿ.
    First published: