Raghuram Rajan| ಕೇಂದ್ರ ಸರ್ಕಾರವೂ ದೇಶ ವಿರೋಧಿಯೇ?; ಆರ್​ಎಸ್​ಎಸ್​ ಮುಖವಾಣಿ ಪಾಂಚಜನ್ಯಕ್ಕೆ ರಘುರಾಮ್ ರಾಜನ್ ಚಾಟಿ

ಕೊರೋನಾ ಸಾಂಕ್ರಾಮಿಕ ಕಾಲದಲ್ಲೂ ಲಸಿಕೆ ನೀಡುವಲ್ಲಿ ಉತ್ತಮ ಕೆಲಸ ಮಾಡದ ಸರ್ಕಾರವನ್ನು ನೀವೂ ದೇಶ ವಿರೋಧಿ ಎಂದು ಆರೋಪಿಸುತ್ತೀರಾ? ಎಂದು ಮಾಜಿ ಆರ್​ಬಿಐ ಗವರ್ನರ್ ರಘುರಾಮ್ ರಾಜನ್ ಆರ್​ಎಸ್​ಎಸ್​ ಮುಖವಾಣಿ ಪಾಂಚಜನ್ಯವನ್ನು ಪ್ರಶ್ನಿಸಿದ್ದಾರೆ.

ರಘುರಾಮ್ ರಾಜನ್.

ರಘುರಾಮ್ ರಾಜನ್.

 • Share this:
  "ದೇಶದಲ್ಲಿ ಕೊರೋನಾ ಸೋಂಕನ್ನು (CoronaVirus) ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಅಲ್ಲದೆ, ಎಲ್ಲರಿಗೂ ಕೊರೋನಾ ಲಸಿಕೆ ನೀಡುವಲ್ಲಿ ಕಳಪೆ ಸಾಧನೆ ಮಾಡಿದೆ. ಹಾಗಿದ್ದರೆ ನಾವು ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರವನ್ನು ದೇಶ ವಿರೋಧಿ ಸರ್ಕಾರ ಎಂದು ಟೀಕಿಸಬೇಕೆ?" ಎಂದು ಆರ್​ಬಿಐ ನ ಮಾಜಿ ಗವರ್ನರ್​ ರಘುರಾಮ್ ರಾಜನ್ (Raghuram Rajan) ಆರ್​ಎಸ್​ಎಸ್ (RSS)​ ಮುಖವಾಗಿ ಪಾಂಚಜನ್ಯ ಪತ್ರಿಕೆಯ ವಿರುದ್ಧ ಕಿಡಿಕಾರಿದ್ದಾರೆ. ಏಕೆಂದರೆ ಈ ಪತ್ರಿಕೆಯಲ್ಲಿ ಇತ್ತೀಚೆಗೆ ತೆರಿಗೆ ಸಲ್ಲಿಕೆಯ ವೆಬ್‌ಸೈಟ್‌ನಲ್ಲಿ ಲೋಪದೋಷ ಕಂಡು ಬಂದಿತ್ತು. ಆದರೆ, ಇದೊಂದು ಕಾರಣವನ್ನು ಮುಂದಿಟ್ಟು ಪಾಂಚಜನ್ಯ ಪತ್ರಿಕೆ, ಇನ್ಫೋಸಿಸ್‌ ಸಂಸ್ಥೆಯನ್ನು ‘ದೇಶ ವಿರೋಧಿ’ ಎಂದು ಕರೆದಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ರಘುರಾಮ್ ರಾಜನ್, "ಕೊರೋನಾ ಲಸಿಕೆ ನೀಡುವಲ್ಲಿ ಒಕ್ಕೂಟ ಸರ್ಕಾರ ಕೂಡಾ ಕಳಪೆ ಪ್ರದರ್ಶನ ನೀಡಿದೆ, ಹಾಗಿದ್ದರೆ, ಅದನ್ನು ಕೂಡಾ ರಾಷ್ಟ್ರ ವಿರೋಧಿ (Anti-National) ಎಂದು ಕರೆಯುತ್ತಾರೆಯೇ" ಎಂದು ಮರುಪ್ರಶ್ನೆ ಹಾಕಿದ್ದಾರೆ.

  ಖಾಸಗಿ ಮಾಧ್ಯಮವೊಂದಕ್ಕೆ ಈ ಬಗ್ಗೆ ಸಂದರ್ಶನ ನೀಡಿರುವ ಆರ್​ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್, "ಇತ್ತೀಚಿನ ದಿನಗಳಲ್ಲಿ ಹಲವಾರು ಖಾಸಗಿ ವಲಯದ ಸಂಸ್ಥೆಗಳು ಸರ್ಕಾರಕ್ಕೆ ಸಂಬಂಧಪಟ್ಟ ವ್ಯಕ್ತಿಗಳ ಆಕ್ರೋಶವನ್ನು ಎದುರಿಸುತ್ತಿವೆ. ಜೊತೆಗೆ ಹಲವಾರು ಖಾಸಗಿ ಸಂಸ್ಥೆಗಳು ಮುಚ್ಚಿವೆ. ಈ ಪಟ್ಟಿಗೆ ತೀರಾ ಇತ್ತೀಚಿನ ಉದಾಹರಣೆಯಾಗಿದೆ ಇನ್ಫೋಸಿಸ್. ಈ ಸಂಸ್ಥೆಯನ್ನು ಯಾವುದೋ ಒಂದು ಕಾರಣವನ್ನು ಮುಂದಿಟ್ಟು ನೀವು ದೇಶ ವಿರೋಧಿ ಎಂದು ಕರೆಯಬೇಕಾದರೆ, ಕೊರೋನಾ ಸಾಂಕ್ರಾಮಿಕ ಕಾಲದಲ್ಲೂ ಲಸಿಕೆ ನೀಡುವಲ್ಲಿ ಉತ್ತಮ ಕೆಲಸ ಮಾಡದ ಸರ್ಕಾರವನ್ನು ನೀವೂ ದೇಶ ವಿರೋಧಿ ಎಂದು ಆರೋಪಿಸುತ್ತೀರಾ?" ಎಂದು ಪ್ರಶ್ನಿಸಿದ್ದಾರೆ.

  ಇದೇ ಸಂದರ್ಭದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಬಗ್ಗೆಯೂ ಮಾತನಾಡಿರುವ ರಘುರಾಮ್ ರಾಜನ್, "ಜಿಎಸ್‌ಟಿ ಜಾರಿಮಾಡಿರುವುದನ್ನು ಅದ್ಭುತವಾಗಿದೆ ಎಂದು ನಾನು ಭಾವಿಸುವುದಿಲ್ಲ. ಅದನ್ನು ಇನ್ನೂ ಉತ್ತಮವಾಗಿ ಮಾಡಬಹುದಿತ್ತು…ಆದರೆ ಆ ತಪ್ಪುಗಳಿಂದ ಕಲಿಯಿರಿ ಮತ್ತು ನಿಮ್ಮ ಸ್ವಂತ ಪೂರ್ವಾಗ್ರಹಗಳನ್ನು ಹೊರಹಾಕಲು ಅದನ್ನು ವೇದಿಕೆಯಾಗಿ ಬಳಸಬೇಡಿ" ಎಂದು ಕಿವಿಮಾತು ಹೇಳಿದ್ದಾರೆ.

  ಆರೆಸ್ಸೆಸ್‌ ಮುಖವಾಣಿ ಆಗಿರುವ ಪಾಂಚಜನ್ಯ ಪತ್ರಿಕೆಯು, ಇನ್ಫೋಸಿಸ್‌ ಸಂಸ್ಥೆ ಅಭಿವೃದ್ಧಿಪಡಿಸಿರುವ ಒಕ್ಕೂಟ ಸರ್ಕಾರದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮತ್ತು ನೂತನ ಆದಾಯ ತೆರಿಗೆ ಪೋರ್ಟಲ್‌ಗಳು ಗೊಂದಲಕಾರಿಯಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿತ್ತು.

  ಇದು ದೇಶದಾದ್ಯಂತ ಭಾರಿ ಚರ್ಚೆಯನ್ನೂ ಹುಟ್ಟುಹಾಕಿತ್ತು. ಪಾಂಚಜನ್ಯ ತನ್ನ ಸೆ.5ರ ಸಂಚಿಕೆಯಲ್ಲಿ ಈ ಕುರಿತು ಪ್ರಧಾನ ಲೇಖನ ಬರೆದಿದ್ದು, ಮುಖಪುಟದಲ್ಲಿ ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಅವರ ಭಾವಚಿತ್ರ ಹಾಗೂ ’ಸಾಖ್‌ ಔರ್‌ ಆಘಾತ್‌’ (ಖ್ಯಾತಿ ಮತ್ತು ಅಘಾತ) ಎಂಬ ಶೀರ್ಷಿಕೆಯನ್ನು ನೀಡಲಾಗಿದೆ ಎಂಬುದಾಗಿ ದಿ ಹಿಂದೂ ವರದಿ ಮಾಡಿದೆ.

  ಇದನ್ನೂ ಓದಿ: Petrol Price| ಬದಲಾವಣೆ ಕಾಣದ ಪೆಟ್ರೋಲ್-ಡೀಸೆಲ್ ದರ; ಜಿಎಸ್​ಟಿ ವ್ಯಾಪ್ತಿಗೆ ಸೇರಲಿದೆಯೇ ತೈಲ ಬೆಲೆ?

  ಇನ್ಫೋಸಿಸ್‌ ರೂಪಿಸಿರುವ ಈ ಪೋರ್ಟಲ್‌ಗಳು ಕಳಪೆಯಾಗಿದ್ದು, ತೆರಿಗೆ ಸಂಗ್ರಹವನ್ನು ತಗ್ಗಿಸುವಂತಿವೆ. ವ್ಯವಸ್ಥೆಯನ್ನು ಸುಲಭಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಲೆಂದು ಸರ್ಕಾರ ಗುತ್ತಿಗೆ ನೀಡಿದರೆ, ವ್ಯವಸ್ಥೆಯನ್ನೇ ಗೊಂದಲಕಾರಿ ಮಾಡಲಾಗಿದೆ. ಸರ್ಕಾರ ಅನುಸರಿಸುವ ಕಡಿಮೆ ಮಟ್ಟದ ವಾಣಿಜ್ಯ ಹರಾಜು ಪ್ರಕ್ರಿಯೆ ಕುರಿತೂ ಪಾಂಚಜನ್ಯ ಪ್ರಶ್ನೆ ಎತ್ತಿದ್ದು, "ಇನ್ಫೋಸಿಸ್‌ ತನ್ನ ವಿದೇಶಿ ಗ್ರಾಹಕರಿಗೂ ಇದೇ ರೀತಿಯ ಕಳಪೆ ಸೇವೆಯನ್ನೇ ನೀಡುತ್ತದೆಯೇ?" ಎಂದೂ ಪ್ರಶ್ನಿಸಿದೆ.

  ಜೊತೆಗೆ, "ಮೋದಿ ಸರ್ಕಾರವನ್ನು ಟೀಕಿಸುವ ಎಡಪಂಥೀಯ ಶಕ್ತಿಗಳಿಗೆ, ಸತ್ಯ ಶೋಧಕ ಸಂಸ್ಥೆಗಳಿಗೆ, ಸುದ್ದಿ ಪೋರ್ಟಲ್‌ಗಳಿಗೆ ಇನ್ಫೋಸಿಸ್‌ ಸಂಸ್ಥೆಯು ಹಣಕಾಸು ಒದಗಿಸುತ್ತಿದೆ" ಎಂದು ಪಾಂಚಜನ್ಯ ಆರೋಪಿಸಿದೆ. ಇನ್ಫೋಸಿಸ್‌ ಇತ್ತ ಸರ್ಕಾರದ ಪೋರ್ಟಲ್‌ ಅನ್ನೂ ನಿರ್ವಹಿಸುತ್ತಿರುವುದು ಪೋರ್ಟಲ್‌ನ ಸುರಕ್ಷತೆಯ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಅದು ಸಂಶಯ ವ್ಯಕ್ತಪಡಿಸಿತ್ತು.

  ಇದನ್ನೂ ಓದಿ: PM Modi- Mamata Banerjee: ಟೈಮ್ಸ್​ 100 ಜನ ಪ್ರಭಾವಿಗಳ ಪಟ್ಟಿಯಲ್ಲಿ ಮೋದಿ- ಮಮತಾ

  ಈ ನಡುವೆ ಆರೆಸ್ಸೆಸ್‌ ಈ ಲೇಖನದಿಂದ ಅಂತರ ಕಾಯ್ದುಕೊಂಡಿದೆ. ಇದು ವ್ಯಕ್ತಿಗತ ಲೇಖನವಾಗಿದ್ದು, ಇದಕ್ಕೂ ಆರೆಸ್ಸೆಸ್‌ಗೂ ಯಾವುದೆ ಸಂಬಂಧವಿಲ್ಲ ಎಂದು ಅದು ಹೇಳಿದೆ.
  Published by:MAshok Kumar
  First published: