ಕೆಜಿಎಫ್(KGF) ಸಿನಿಮಾ ಕನ್ನಡ ಚಿತ್ರರಂಗವನ್ನು ಎಲ್ಲರೂ ಒಮ್ಮೆ ತಿರುಗಿ ನೋಡುವಂತೆ ಮಾಡಿದ ಚಿತ್ರ. ಬೇರೆ ಭಾಷೆಯವರು ಕೂಡ ಕನ್ನಡ ಸಿನಿಮಾ(Kannada Cinema) ನೋಡಿ ಹೀಗೆ ಸಿನಿಮಾ ಮಾಡುವಂತೆ ಪ್ರೇರೆಪಿಸಿದ್ದು ನಮ್ಮ ಕೆಜಿಎಫ್. `ನಾನ್ ಬರೋವರೆಗೂ ಮಾತ್ರ ಬೇರೆಯವರ ಹವಾ.. ನಾನ್ ಬಂದ್ಮೇಲೆ ನನ್ದೆ ಹವಾ’ ಈ ಡೈಲಾಗ್(Dialogue) ನೆನೆಸಿಕೊಂಡರೇ ಸಾಕು ಯಶ್(Yash) ಅವರ ಸಾಧನೆ ಕಣ್ಣಮುಂದೆನೆ ಬರುತ್ತೆ. ಸಿನಿಮಾದಲ್ಲಿ ಮಾತ್ರ ಈ ಡೈಲಾಗ್(Dialogue) ಅಲ್ಲ ನಿಜ ಜೀವನದಲ್ಲೂ ಯಶ್ಗೆ ಈ ಡೈಲಾಗ್ ಸೂಟ್ ಆಗುತ್ತೆ.ಒಂದು ಕಾಲದಲ್ಲಿ ಕನ್ನಡ ಚಿತ್ರರಂಗ ಅಂದರೆ ಅಸಡ್ಡೆ, ಮಾರುಕಟ್ಟೆ(Market) ಇರಲಿಲ್ಲ. ಆದರೆ ಯಶ್ ಅವರ ಕೆಲಸ ನೋಡಿ, ಬೇರೆ ಭಾಷೆಯವರು ನಿಂತು ಕನ್ನಡ ಚಿತ್ರರಂಗದತ್ತ ತಿರುಗಿ ಇವರನ್ನು ಹುಡುಕಿಕೊಂಡು ಬರುವಂತೆ ಮಾಡಿದ್ದಾರೆ. ಕೆಜಿಎಫ್(KGF) ಸಿನಿಮಾದ ಮೂಲಕ ರಾಕಿ ಭಾಯ್ ನ್ಯಾಷನಲ್(National), ಇಂಟರ್ನ್ಯಾಷ್ನಲ್ ಸ್ಟಾರ್(International Star) ಆಗಿದ್ದಾರೆ. ಇದೀಗ ಏಪ್ರಿಲ್ 14ಕ್ಕೆ ಕೆಜಿಎಫ್ 2 ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾದ ಮೇಲೆ ಇಡಿ ವಿಶ್ವದ ಜನರ ಕಣ್ಣಿದೆ. ಯಾವಾಗ ಏಪ್ರಿಲ್ 14 ಆಗುತ್ತೋ ಅಂತ ಯಶ್ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ. ಚಿತ್ರದ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್(Prasanth Neel) ಅಪಡೇಟ್ ಒಂದನ್ನು ನೀಡಿದ್ದಾರೆ. ಅದೇನು ಅಂತೀರಾ? ಮುಂದೆ ನೋಡಿ
ಡಬ್ಬಿಂಗ್ ಮುಗಿಸಿದ ಸಂಜಯ್ ದತ್!
ಕೆಜಿಎಫ್ 2 ಸಿನಿಮಾದಲ್ಲಿ ಸಂಜಯ್ ದತ್ ಅಧೀರನ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಈಗಾಗಲೇ ಕೆಜಿಎಫ್ 2 ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದೆ. ಪೋಸ್ಟ್ ಪ್ರೋಡೋಕ್ಷನ್ ಕೆಲಸಗಳು ಉಳಿದಿತ್ತು. ಸಂಜಯ್ ದತ್ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಕೆಜಿಎಫ್ 2 ಡಬ್ಬಿಂಗ್ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ಪ್ರಶಾಂತ್ ನೀಲ್ ಟ್ವೀಟರ್ನಲ್ಲಿ ಸಂಜಯ್ ದತ್ ಜೊತೆಗಿನ ಫೋಟೋವೊಂದನ್ನು ಅಪ್ಲೋಡ್ ಮಾಡಿದ್ದಾರೆ. ಅಧೀರ ಈಸ್ ಬ್ಯಾಕ್, ವೆಲ್ಕಮ್ಬ್ಯಾಕ್ ಸರ್. ಏಪ್ರಿಲ್ 14ರಂದು ಎಲ್ಲರೂ ಸಿಗೋಣ ಎಂದು ಬರೆದುಕೊಂಡಿದ್ದಾರೆ. ಹೀಗಾಗಿ ನಟ ಸಂಜಯ್ ದತ್ ಕೆಜಿಎಫ್ 2 ಸಿನಿಮಾದ ಡಬ್ಬಿಂಗ್ ಮುಗಿಸಿದ್ದಾರೆ
ಇದನ್ನು ಓದಿ :ಏನ್ ಖದರ್ ಲುಕ್ ಗುರೂ.. ಗಡ್ಡದಾರಿಗಳಿಗೆ ಯಶ್ ಅವರೇ ಬಾಸ್: ನ್ಯೂ ಗೆಟಪ್ ನೀವೇ ನೋಡಿ..
#Adheera is back ⚔
Thank you @duttsanjay sir.
See you all on April 14th 2022 on the big screens💥 #KGFChapter2 pic.twitter.com/0labcZ5kL3
— Prashanth Neel (@prashanth_neel) December 7, 2021
ಅಧೀರನ ಪಾತ್ರದಲ್ಲಿ ಕಾಣಿಸಕೊಳ್ಳುತ್ತಿರುವ ಸಂಜಯ್ದತ್ ಜತೆ ಡಬ್ಬಿಂಗ್ ಸ್ಟುಡಿಯೋದಲ್ಲಿ ನಿಂತಿರುವ ಫೋಟೋ ಹಂಚಿಕೊಳ್ಳುವ ಮೂಲಕ ಡಬ್ಬಿಂಗ್ ಕಾರ್ಯ ಮುಕ್ತಾಯಗೊಂಡಿದೆ ಎಂದು ನಿರ್ದೇಶಕ ಪ್ರಶಾಂತ್ ನೀಲ್ ತಿಳಿಸಿದ್ದಾರೆ.ಕನ್ನಡ ಚಿತ್ರರಂಗ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲಿ ಕೆಜಿಎಫ್ ಚಾಪ್ಟರ್-1 ಹೊಸ ಸಂಚಲನ ಮೂಡಿಸಿತ್ತು. ಇದೀಗ ಕೆಜಿಎಫ್ ಚಾಪ್ಟರ್ -2 ಎಪ್ರಿಲ್ 14 ಕ್ಕೆ ಬಿಡುಗಡೆಯಾಗುತ್ತಿದೆ. ಹೀಗಾಗಿ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದೆ.ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ರೊಂದಿಗೆ ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಸಂಜಯದತ್ ಸೇರಿದಂತೆ ದೊಡ್ಡ ತಾರಾಗಣವೇ ಕಾಣಿಸಿಕೊಳ್ಳುತ್ತಿದೆ.
ಇದನ್ನು ಓದಿ : ಏಕಾಂಗಿ.. ಜಾಕಲಿನ್ ಫರ್ನಾಂಡಿಸ್ ಏಕಾಂಗಿ..: ನಟಿ ಜೊತೆ ಸಲ್ಮಾನ್ ಖಾನ್ ಫ್ರೆಂಡ್ಶಿಪ್ ಕಟ್!
ಹೊಸ ಜಾಹೀರಾತಿನಲ್ಲಿ ರಾಕಿ ಭಾಯ್!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ