Heart Emoji Ban: ಹಾರ್ಟ್​ ಇಮೋಜಿ ಬಳಸಿದ್ರೆ ಬೀಳುತ್ತೆ ಫೈನ್, ಸೇರ್ತಿರಾ ಜೈಲ್​! ಎಲ್ಲಿ ಗೊತ್ತಾ ಈ ರೂಲ್ಸ್​?

ಹಲವು ಭಾವನೆಗಳ ಸಂದೇಶಕ್ಕೆ ಈ ಒಂದೇ ಒಂದು ಇಮೋಜಿ ಸಾಕಿತ್ತು. ಆದ್ರೆ ಪ್ರೀತಿಯ ಪ್ರತಿನಿಧಿ ಹಾರ್ಟ್​ ಇಮೋಜಿಗೆ (Heart emoji) ಈ ದೇಶದಲ್ಲಿ ಇದೀಗ ನಿರ್ಬಂಧ ಹೇರಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹತ್ತು ಪದದಲ್ಲಿ ಹೇಳುವ ಭಾವನೆ, (Feeling) ಮಾತುಗಳನ್ನು ಒಂದು ಇಮೋಜಿ (Emoji) ಹೇಳುತ್ತದೆ. ಮೊಬೈಲ್ (Mobile) ಹಾಗೂ ಸೋಷಿಯಲ್ ಮೀಡಿಯಾ (Social media) ಆ್ಯಪ್‌ಗಳಲ್ಲಿ ಹೆಚ್ಚಾಗಿ ಬಳಕೆಯಾಗುವ ಇಮೋಜಿಗಳ ಕಂಡರೆ ಯಾರಿಗೆ ಇಷ್ಟವಿಲ್ಲ ಹೇಳಿ. ಇದನ್ನು ಬಳಸದೇ ಇರುವವರು ಕಡಿಮೆಯೇ. ಕೆಲವೊಂದು ಕಾಮೆಂಟ್‌ಗಳು (Comments) ಸೇರಿದಂತೆ ಅಕ್ಷರ ರೂಪದಲ್ಲಿ ಭಾವನೆಗಳನ್ನು ವ್ಯಕ್ತಪಡಿಸಿದರೂ ಕೊನೆಗೊಮ್ಮೆ ಅದಕ್ಕೆ ಹೋಲುವಂತಹ ಇಮೋಜಿಯನ್ನಿಡುವ  ಸಂಪ್ರದಾಯವನ್ನು ಹಲವರು ರೂಢಿಸಿಕೊಂಡು ಬಂದಿದ್ದಾರೆ. ನಾವು ಊಹಿಸಿರುವುದಕ್ಕಿಂತಲೂ ಹೆಚ್ಚು ಈ ಎಮೋಜಿಗಳು ಅರ್ಥವನ್ನು ನೀಡುತ್ತವೆ. ವಾಟ್ಸಾಪ್‌, ಮೆಸೇಂಜರ್‌ ಬಂದ ಮೇಲೆ ಒಂದು ವಾಕ್ಯವನ್ನು ಒಂದೇ ಇಮೋಜಿಯಲ್ಲಿ ಹೇಳಬಹುದಾಗಿದೆ. ಬೇಸರ, ನೋವು, ಕಷ್ಟ, ಖುಷಿ, ದುಃಖ, ಆಶ್ಚರ್ಯ, ಪ್ರೀತಿ,  ಹೀಗೆ ಒಂದಾ ಎರಡಾ? ಎಲ್ಲಾ ಭಾವನೆಗಳಿಗೂ ಈಗ ಒಂದೇ ಒಂದು ಇಮೋಜಿ ಸಾಕು. ಪ್ರೀತಿಯ ಪ್ರತಿನಿಧಿ ಹಾರ್ಟ್​ ಇಮೋಜಿಗೆ (Heart emoji) ಈ ದೇಶದಲ್ಲಿ ಇದೀಗ ನಿರ್ಬಂಧ ಹೇರಲಾಗಿದೆ. ಯಾಕಪ್ಪಾ ಈ ನಿರ್ಬಂಧ ಅಂತ ಹೇಳ್ತಿವಿ ಈ ಸ್ಟೋರಿ ಓದಿ.

ಯುವಜನರಲ್ಲಿ ಹೆಚ್ಚಿದೆ ಇಮೋಜಿ ಬಳಕೆ

ಸ್ನೇಹಿತರು  ಹಾಗೂ ಪ್ರೇಮಿಗಳು ಹೆಚ್ಚಾಗಿ ಶೇರ್‌ ಮಾಡುವ ಇಮೋಜಿ ಎಂದರೆ ಅದು ಲವ್‌ ಇಮೋಜಿ. ಹಾರ್ಟ್​ ಇಮೋಜಿಯನ್ನು ಕಳುಹಿಸಲು ಪ್ರೇಮಿಗಳೇ ಆಗಿರಬೇಕು ಅಂತೇನೂ ಇಲ್ಲ. ತಮ್ಮ ಇಷ್ಟದವರು ಏನಾದರೂ ಒಳ್ಳೊಳ್ಳೆ ಇಷ್ಟವಾಗುವ ಸುದ್ದಿ ಅಥವಾ ಫೋಟೋ ಕಳುಹಿಸಿದಾಗ ಹಾರ್ಟ್‌ ಇಮೋಜ ಬಹಳಿ ವಿಶ್ ಮಾಡೋದು ಕಾಮನ್​. ಆದರೆ ಇದೀಗ ಈ ಇಮೋಜಿ ಮೇಲೆ ನಿರ್ಬಂಧ ವಿಧಿಸಲಾಗಿದೆ. ಒಂದು ವೇಳೆ ಮೆಸೇಂಜರ್‌, ವಾಟ್ಸ್‌ ಆಪ್‌ನಲ್ಲಿ ಹೃದಯ ಅಂದ್ರೆ ಈ ಹಾರ್ಟ್‌ ಇಮೋಜಿ ಬಳಸಿದರೆ ಜೈಲು ಶಿಕ್ಷೆಯ ಜತೆಗೆ 20 ಲಕ್ಷ ರೂಪಾಯಿವರೆಗೆ ದಂಡವೂ ಇರಲಿದೆ.

ಸೌದಿ ಅರೇಬಿಯಾದಲ್ಲಿ ವಿಚಿತ್ರ ಕಾನೂನು ಜಾರಿ

ಹಾಗೆಂದು ಭಾರತೀಯರು ಹೆದರಬೇಕಿಲ್ಲ. ಏಕೆಂದರೆ ಇಂಥದ್ದೊಂದು ವಿಚಿತ್ರ ಕಾನೂನು ಜಾರಿ ಮಾಡಿರುವುದು ಸೌದಿ ಅರೇಬಿಯಾದಲ್ಲಿ. ಯಾರಿಗಾದರೂ ಕೆಂಪು ಹೃದಯದ ಇಮೋಜಿ ಕಳುಹಿಸಿ ತಪ್ಪಿತಸ್ಥರೆಂದು ಸಾಬೀತಾದರೆ ಎರಡರಿಂದ ಐದು ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಇದಲ್ಲದೆ, ಕಳುಹಿಸುವವರಿಗೆ ಒಂದು ಲಕ್ಷ ಸೌದಿ ರಿಯಾಲ್ ದಂಡ (ಸುಮಾರು 20 ಲಕ್ಷ ರೂಪಾಯಿ) ವಿಧಿಸಬಹುದು.

ಇದನ್ನೂ ಓದಿ: Viral Video: ಮಗನ ಮದುವೆಯಲ್ಲಿ ಕುಣಿಯುತ್ತಲೇ ಪ್ರಾಣಬಿಟ್ಟ ಅಮ್ಮ! ಕಣ್ಣಲ್ಲಿ ನೀರು ತರಿಸೋ ದೃಶ್ಯ ಇಲ್ಲಿದೆ

ಅಪರಾಧ ಸಾಬೀತಾದರೆ, ಶಿಕ್ಷೆ ಮತ್ತು ದಂಡ ಗ್ಯಾರೆಂಟಿ

ಸೌದಿ ಅರೇಬಿಯಾದ ಆಯಂಟಿ ಫ್ರಾಡ್ ಅಸೋಸಿಯೇಶನ್‌ ಈ ಕುರಿತು ಆದೇಶ ಹೊರಡಿಸಿದೆ. ಕೆಂಪು ಹೃದಯದ ಇಮೋಜಿಯನ್ನು ಕಳುಹಿಸುವುದು ಅಪರಾಧವಾಗಿದೆ. ಆನ್‌ಲೈನ್ ಚಾಟಿಂಗ್ ಸಮಯದಲ್ಲಿ ಸ್ವೀಕರಿಸುವವರು ಚಿತ್ರ ಅಥವಾ ಇಮೋಜಿಯೊಂದಿಗೆ ಪ್ರಕರಣವನ್ನು ದಾಖಲಿಸಿದರೆ.  ಈ ಸಂದೇಶ  ಈ ಕಿರುಕುಳವು ಅಪರಾಧದ ವರ್ಗಕ್ಕೆ ಬರುತ್ತದೆ ಎಂದು ಹೇಳಿದ್ದಾರೆ. ಅಂತಹ ಸಂದೇಶವನ್ನು ಸ್ವೀಕರಿಸಿದವರು ದೂರು ಸಲ್ಲಿಸಿದರೆ ಮತ್ತು ನ್ಯಾಯಾಲಯದಲ್ಲಿ ಅಪರಾಧ ಸಾಬೀತಾದರೆ, ಶಿಕ್ಷೆ ಮತ್ತು ದಂಡ ವಿಧಿಸುವ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: Viral Video: ಇರಲಾರದೇ ಇರುವೆ ಬಿಟ್ಟುಕೊಂಡ್ರು ಅಂತಾರಲ್ಲ ಇದಕ್ಕೆ ಇರ್ಬೇಕು! ವಿಡಿಯೋ ನೋಡಿ ಸಖತ್​ ಫನ್​ ಇದೆ

ಸದ್ಯ ಭಾರತದಲ್ಲಿಲ್ಲ ಇಂತಹ ಕಾನೂನು

ಹತ್ತು ಪದದಲ್ಲಿ ಹೇಳುವ ಭಾವನೆ, ಮಾತುಗಳನ್ನು ಒಂದು ಇಮೋಜಿ ಹೇಳುತ್ತದೆ. ಮೊಬೈಲ್ ಹಾಗೂ ಸೋಷಿಯಲ್ ಮೀಡಿಯಾ ಆ್ಯಪ್‌ಗಳಲ್ಲಿ ಹೆಚ್ಚಾಗಿ ಬಳಕೆಯಾಗುವ ಇಮೋಜಿಗಳ ಕಂಡರೆ ಯಾರಿಗೆ ಇಷ್ಟವಿಲ್ಲ ಹೇಳಿ. ಇದನ್ನು ಬಳಸದೇ ಇರುವವರು ಕಡಿಮೆಯೇ. ಕೆಲವೊಂದು ಕಮೆಂಟ್‌ಗಳು ಸೇರಿದಂತೆ ಅಕ್ಷರ ರೂಪದಲ್ಲಿ ಭಾವನೆಗಳನ್ನು ವ್ಯಕ್ತಪಡಿಸಿದರೂ ಕೊನೆಗೊಮ್ಮೆ ಅದಕ್ಕೆ ಹೋಲುವಂತಹ ಇಮೋಜಿಯನ್ನಿಡುವ ಅಲಿಖಿತ ಸಂಪ್ರದಾಯವನ್ನು ಹಲವರು ರೂಢಿಸಿಕೊಂಡು ಬಂದಿದ್ದಾರೆ.

ಚಾಟಿಂಗ್‌ನಂತಹ ವೇಳೆ ಕೆಲವು ಸಂದರ್ಭಗಳಲ್ಲಿ ಕೇವಲ ಇಮೋಜಿಗಳ ಮೂಲಕವೇ ಫನ್ನಿಯಾಗಿ ಮಾತುಕತೆ ನಡೆಸುವುದನ್ನೂ ನಾವು ನೋಡಿರುತ್ತೇವೆ, ಹಾಗೆ ಮಾಡಿರುತ್ತೇವೆ ಸಹ. ಈಗಾಗಲೇ ಹಲವಾರು ಇಮೋಜಿಗಳು ಮೊಬೈಲ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿವೆ. ಕಾಲಕ್ಕನುಗುಣವಾಗಿ ಹೊಸ ಹೊಸ ಇಮೋಜಿಗಳು ಹುಟ್ಟಿಕೊಳ್ಳುತ್ತಲೂ ಇವೆ. ಇನ್ನು ಇವುಗಳಿಗೆ ಪರ್ಯಾಯವಾಗಿ ಕೆಲವೊಂದು ಜಿಫ್ ಮಾದರಿಗಳೂ ಲಭ್ಯವಾಗುತ್ತಿವೆ. ಆದರೆ, ಇಮೋಜಿಗಳು ಕೊಡುವ ಖುಷಿಯೇ ಬೇರೆ ಎಂದು ಬಹುತೇಕ ಬಳಕೆದಾರರು ಅಭಿಪ್ರಾಯಪಡುತ್ತಾರೆ.
Published by:Pavana HS
First published: