ಚಿಕ್ಕಮಗಳೂರು ಜೊತೆಗಿನ ನಮ್ಮ ನಂಟು ಮೂರು ತಲೆಮಾರಿನದು: ಅಜ್ಜಿ ನೆನೆದು ಭಾವುಕರಾದ ರಾಹುಲ್ ಗಾಂಧಿ


Updated:March 21, 2018, 4:58 PM IST
ಚಿಕ್ಕಮಗಳೂರು ಜೊತೆಗಿನ ನಮ್ಮ ನಂಟು ಮೂರು ತಲೆಮಾರಿನದು: ಅಜ್ಜಿ ನೆನೆದು ಭಾವುಕರಾದ ರಾಹುಲ್ ಗಾಂಧಿ
  • Share this:
-ನವೀನ್ ಕುಮಾರ್, ಚಿಕ್ಕಮಗಳೂರು

ಚಿಕ್ಕಮಗಳೂರು(ಮಾ.21): ಇಲ್ಲಿಗೆ ಬಂದ ಕೂಡಲೇ ನನಗೆ ನನ್ನ ಅಜ್ಜಿ ಇಂದಿರಾ ಗಾಂಧಿ ನೆನಪಾಗುತ್ತಿದೆ. ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಕ್ಷೇತ್ರ ಇದಾಗಿದ್ದು, ನಮ್ಮ ಕುಟುಂಬ ಹಾಗೂ ನಿಮ್ಮ ನಡುವೆ ಪುರಾತನ ನಂಟಿದೆ ಎನ್ನುತ್ತಾ ಅಜ್ಜಿ ಇಂದಿರಾ ಗಾಂಧಿಯನ್ನು ನೆನೆದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭಾವುಕರಾದರು.
ಕಾಂಗ್ರೆಸ್ ಜನಾಶೀರ್ವಾದ ಯಾತ್ರೆಯಲ್ಲಿ ಮಾತನಾಡಿದ ಅವರು, ಇಂದಿರಾಗಾಂಧಿಯನ್ನು ರಾಜಕೀಯವಾಗಿ ದಮನ ಮಾಡುವ ವೇಳೆ ಇಲ್ಲಿ ಜನ ಬೆಂಬಲಕ್ಕೆ ನಿಂತರು. ಇಲ್ಲಿನ ಜನರ ಋಣಕ್ಕೆ ನಾನು ಅಭಾರಿ ಎಂದು ಕೃತಜ್ಞತೆ ಸಲ್ಲಿಸಿದರು.

ಎಂದಿನಂತೆ ಪ್ರಧಾನಮಂತ್ರಿ ನರೇಂದ್ರಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, 15 ಲಕ್ಷ ಉದ್ಯಮಿಗಳ ಸಾಲ ಮನ್ನಾ ಮಾಡುತ್ತಾರೆ. ಆದರೆ, ರೈತರ ಸಾಲ ಮನ್ನಾ ಮಾಡಲು ಕೇಳಿಕೊಂಡರೆ ಸುಮ್ಮನಾಗುತ್ತಾರೆ. ರೈತರ ಸಾಲಮನ್ನಾದ ಕುರಿತು ನಾನು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಕೇಳಿಕೊಂಡೆ ಅದಕ್ಕೆ ಉತ್ತರವನ್ನೆ ನೀಡಲಿಲ್ಲ ಅವರು. ಆದರೆ, ಸಿದ್ದರಾಮಯ್ಯ ಅವರನ್ನು ಕೇಳಿಕೊಂಡ 10 ದಿನದೊಳಗೆ ಸಾಲಮನ್ನಾ ಮಾಡಲಾಯಿತು.

ಎಲ್ಲಿಯೇ ಹೋದರೂ ಧರ್ಮದ ಬಗ್ಗೆ ಮಾತನಾಡುವ ಪ್ರಧಾನಿಗೆ ಸಾಮಾನ್ಯ ಬಾಲಕನಿಗೆ ಇರುವಷ್ಟು ಧರ್ಮದ ಜ್ಞಾನವಿಲ್ಲ. ಬಸವಣ್ಣ ಹುಟ್ಟಿದ ನಾಡಿನಲ್ಲಿ ಸುಳ್ಳು ಹೇಳುತ್ತಲೇ ಬಂದಿದ್ದಾರೆ. ನಿಮ್ಮ ಖಾತೆಗೆ ಹಣ ಹಾಕುತ್ತೇನೆ ಎಂದು ಸುಳ್ಳು ಹೇಳುವ ವ್ಯಕ್ತಿ ನಾನಲ್ಲ. ಮಾತಿಗೆ ಒಂದು ತೂಕವಿರಬೇಕು. ರೈತರ, ಕಾರ್ಮಿಕರ, ಬಡವರ ಪರ ಕೆಲಸಗಳನ್ನು ಮಾಡಿ ತೋರಿಸುತ್ತೇನೆ, ಆದರೆ, ಈ ಬಗ್ಗೆ ನಾನು ಹೇಳಿಕೊಳ್ಳಲ್ಲ ಎಂದು ಮೋದಿಯನ್ನು ಟೀಕಿಸಿದರು.

ನಾವು ನಿಮಗೆ ಕೊಟ್ಟ ಮಾತಿನಂತೆ ಕೆಲಸ ಕೆಲಸ ಮಾಡಿದ್ದೇವೆ. ನೀವು ಗೆಲ್ಲಿಸಿದರೆ ಉಚಿತ ಅಕ್ಕಿ ನೀಡುತ್ತೇವೆ ಎಂದು ಹೇಳಿರಲಿಲ್ಲ. ಆದರೆ ಗೆದ್ದ ಬಳಿಕ ನಾವು ನಮ್ಮ ಕೆಲಸ ಮಾಡಿದೆವು. ಹೆಣ್ಣು ಮಕ್ಕಳಿಗೆ ಪ್ರಾಥಮಿಕ ಹಂತದಿಂದ ಪಿಜಿವರೆಗೂ ಉಚಿತ ಶಿಕ್ಷಣ ನೀಡಿದ್ದೇವೆ. ಮೋದಿ ನೋಟು ರದ್ದು ಮಾಡಿ ಸಾಮಾನ್ಯ ಜನರು ಬ್ಯಾಂಕ್ ಮುಂದೆ ಕಾಯುವಂತೆ ಮಾಡಿ ನೂರಾರು ಜನರ ಪ್ರಾಣ ಬಿಟ್ಟರು. ಈ ಬಗ್ಗೆ ಮೋದಿ ಚಕಾರವೆತ್ತಲಿಲ್ಲ. ಬ್ಯಾಂಕ್‘ಗಳಿಗೆ ಮೋಸ ಮಾಡಿ ನೀರವ್ ಮೋದಿ ದೇಶ ಬಿಟ್ಟು ಹೋದರೂ ಮೋದಿ ಮೌನವಾಗಿದ್ದರು ಎಂದು ಹರಿಹಾಯ್ದರು.

ಬಿಜೆಪಿ ಧರ್ಮರಾಜಕಾರಣ ಮಾಡುತ್ತಿದ್ದು, ಸಿ.ಟಿ.ರವಿ ಜಿಲ್ಲೆಯ ಜನರ ಸಾಮರಸ್ಯವನ್ನು ಹಾಳು ಮಾಡುತ್ತಿದ್ದಾರೆ. ದತ್ತ ಪೀಠದ ವಿಷಯದಲ್ಲಿ ಒಂದು ಧರ್ಮವನ್ನು ಮತ್ತೊಂದು ಧರ್ಮದ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ. ನಾಡಿನ ಜನರು ಸೂಫಿ ಹಾಗೂ ಶ್ರೀಗಳನ್ನು ಸಮಾನ ಭಾವದಿಂದ ನೋಡುತ್ತಾರೆ. ಅವರ ಭಾವನೆಗೆ ಧಕ್ಕೆ ತರುವ ಕೆಲಸವಾಗುತ್ತಿದೆ. ಇದಕ್ಕೆ ಅವರು ತಕ್ಕ ಬೆಲೆ ತೆರುತ್ತಾರೆ ಎಂದು ವಾಗ್ದಾಳಿ ನಡೆಸಿದರು. ‘
First published:March 21, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading